
ಪಂದ್ಯಾವಳಿಯಲ್ಲಿ ಗರಿಷ್ಠ ರನ್ ಬಾರಿಸಿದ ಶಿಖರ್ ಧವನ್ ಸತತ 2ನೇ ಬಾರಿಗೆ ‘ಗೋಲ್ಡನ್ ಬ್ಯಾಟ್' ಪ್ರಶಸ್ತಿ ಗೆದ್ದರು. ಈ ಬಾರಿ 5 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕಗಳೊಂದಿಗೆ ಒಟ್ಟು 338 ರನ್ ಕಲೆಹಾಕಿದ ಧವನ್, 2ನೇ ಸ್ಥಾನ ಪಡೆದ ರೋಹಿತ್ ಶರ್ಮಾ ಅವರಿಗಿಂತ 34 ರನ್ ಹೆಚ್ಚಿಗೆ ದಾಖಲಿಸಿದರು.
ಚಾಂಪಿಯನ್ಸ್ ಟ್ರೋಫಿ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ದಾಖಲೆ ಕ್ರಿಸ್ ಗೇಲ್ (474 ರನ್) ಅವರ ಹೆಸರಿನಲ್ಲೇ ಉಳಿದುಕೊಂಡಿತು. 2013ರಲ್ಲಿ ಧವನ್ 363 ರನ್ ಗಳಿಸಿದ್ದರು. ಅಲಿಗೆ ಗೋಲ್ಡನ್ ಬಾಲ್ ಪಂದ್ಯಾವಳಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಹೆಗ್ಗಳಿಕೆಗೆ ಪಾತ್ರರಾದ ಪಾಕಿಸ್ತಾನ ವೇಗಿ ಹಸನ್ ಅಲಿ ‘ಗೋಲ್ಡನ್ ಬಾಲ್' ಪ್ರಶಸ್ತಿ ಪಡೆದರು.
5 ಪಂದ್ಯಗಳಲ್ಲಿ ಅಲಿ 44.3 ಓವರ್ ಬೌಲಿಂಗ್ ಮಾಡಿ 13 ವಿಕೆಟ್ ಕಬಳಿಸಿದರು. 19 ರನ್ ನೀಡಿ 3 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಪ್ರದರ್ಶನವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.