ಬುಮ್ರಾ ಯಾರ್ಕರ್ ಎಸೆಯೋದು ಕಲಿತಿದ್ದು ಯಾರಿಂದ ಗೊತ್ತಾ?: ಬೆಚ್ಚಿಬೀಳಿಸಲಿದೆ ಈತನ ಸೀಕ್ರೇಟ್..!

Published : Jul 03, 2022, 10:32 AM IST
ಬುಮ್ರಾ ಯಾರ್ಕರ್ ಎಸೆಯೋದು ಕಲಿತಿದ್ದು ಯಾರಿಂದ ಗೊತ್ತಾ?: ಬೆಚ್ಚಿಬೀಳಿಸಲಿದೆ ಈತನ ಸೀಕ್ರೇಟ್..!

ಸಾರಾಂಶ

ಸದ್ಯ ಟೀಂ ಇಂಡಿಯಾದ ಬೆಸ್ಟ್​​​ ಬೌಲರ್​​​​ ಅಂದ್ರೆ ದ್ಯಾನ್​ ಜಸ್​​ಪ್ರೀತ್​​​ ಬುಮ್ರಾ. ತನ್ನ ಮಾರಕ ಯಾರ್ಕರ್​​​​​ಗಳಿಂದ ಎದುರಾಳಿ ಬ್ಯಾಟ್ಸ್​​​'ಮನ್​'ಗಳನ್ನ ಕೊಲ್ಲುವ ಬುಮ್ರಾ, ಸದ್ಯ ವಿಶ್ವದ ಬೆಸ್ಟ್​​​ ಯಾರ್ಕರ್​​​​ ಸ್ಪೆಷಲಿಸ್ಟ್​​​. ಆದರೆ ಈ ಗುಜರಾತ್​​​ ಎಕ್ಸ್​​​'ಪ್ರೆಸ್​​​​ ಯಾರ್ಕರ್​​​ ಕಿಂಗ್​ ಆಗಿದ್ದೇಗೆ..? ಆತ ಡೆಡ್ಲಿ ಯಾರ್ಕರ್​​​ಗಳನ್ನ ಮಾಡಲು ಕಲ್ಲಿತ್ತಿದ್ದಾದ್ರೂ ಎಲ್ಲಿಂದ ಗೊತ್ತಾ..?

ಸದ್ಯ ಟೀಂ ಇಂಡಿಯಾದ ಬೌಲಿಂಗ್​​ ಶಕ್ತಿ ಅಂದ್ರೆ ಅದು ಗುಜರಾತ್​​​ ಎಕ್ಸ್​​'ಪ್ರೆಸ್​​​ ಜಸ್​​ಪ್ರೀತ್​​​ ಬುಮ್ರಾ. ಈತ ಬೌಲ್​​​ ಹಿಡಿದು ಕ್ರೀಸ್​​​ ಬಳಿ ಬಂದ್ರೆ ಎದುರಾಳಿ ಬ್ಯಾಟ್ಸ್​​ಮನ್​​ ತನ್ನ ಕಾಲು ಬೆರಳುಗಳನ್ನ ಮುಟ್ಟಿ ನೋಡಿಕೊಳ್ತಾನೆ. ಯಾಕಂದ್ರೆ ಯಾವ ಕ್ಷಣದಲ್ಲಾದ್ರೂ ಅವನ ಕಾಲಬೆರಳುಗಳು ಮುರಿಯುವ ಚಾನ್ಸಸ್​​​ ಇರುತ್ತೆ. ಅಷ್ಟರ ಮಟ್ಟಿಗೆ ತನ್ನ ಯರ್ಕರ್​​​ ಬಾಲ್​​ಗಳಿಂದ ವಿಶ್ವ ಕ್ರಿಕೆಟ್​​ನಲ್ಲಿ ಭಯ ಹುಟ್ಟಿಸಿದ್ದಾನೆ ಜಸ್​​ಪ್ರೀತ್​​ ಬುಮ್ರಾ. ಸದ್ಯ ವಿಶ್ವದ ಬೆಸ್ಟ್​​ ಯಾರ್ಕರ್​​​ ಬೌಲರ್​​​​ ಅಂದ್ರೆ ಅದು ಬುಮ್ರಾನೇ.

ನಿಮ್ಮನ್ನ ಬೆಚ್ಚಿಬೀಳಿಸಲಿದೆ ಈತನ ಯಾರ್ಕರ್​​​ ಸೀಕ್ರೇಟ್​​​..!

ಪ್ರತಿಯೊಂದು ಸಾಧನೆಯ ಹಿಂದೆ ಒಬ್ಬ ಗುರು ಇದ್ದೇ ಇರ್ತಾನೆ ಎಂಬ ಮಾತಿದೆ. ಹಾಗೇ ಬುಮ್ರಾ ಯಾರ್ಕರ್​​​ ಬಾಲ್​​​​ಗಳ ಹಿಂದೆನೂ ಒಬ್ಬ ಗುರು ಇದ್ದಾನೆ. ಆದ್ರೆ ಅದು ಯಾರು ಅಂತ ತಿಳಿದ್ರೆ ಮಾತ್ರ ನೀವು ಒಂದು ಕ್ಷಣ ದಂಗಾಗ್ತೀರಾ. ಬುಮ್ರಾ ಯಾರ್ಕರ್​​​ ಕಲಿತ್ತಿದ್ದು ಇವರಿಂದಾನಾ ಅಂತ ಅಚ್ಚರಿ ಪಡ್ತೀರಾ. ಕಾರಣ ಬುಮ್ರಾ ಬೌಲಿಂಗ್​ ಹಿಂದೆ ಇರುವುದು ಭಾರತದ ಬದ್ಧ ವೈರಿ ಪಾಕಿಸ್ತಾನ.

ಪಾಕಿಗಳಿಂದ ಯಾರ್ಕರ್​ ಮಾಡೋದನ್ನ ಕಲಿತ ಬುಮ್ರಾ

ಬುಮ್ರಾ ಈ ಪರಿಯ ಯಾರ್ಕರ್​​​​ ಮಾಡೋದನ್ನ ಕಲಿತ್ತಿದ್ದು ಪಾಕಿಸ್ತಾನದ ಮಾಜಿ ಬೌಲರ್​​ಗಳಿಂದ ಅಂತೆ. ಹೀಗಂತ ಸ್ವತಃ ಬುಮ್ರಾ ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಜಸ್​​ಪ್ರೀತ್​​​ ಹೆಚ್ಚು ಹೆಚ್ಚು ಪಾಕಿಸ್ತಾನದ ಪಂದ್ಯಗಳನ್ನ ವೀಕ್ಷಿಸುತ್ತಿದ್ದರಂತೆ. ಅದರಲ್ಲೂ ವಾಸಿಂ ಅಕ್ರಂ ಮತ್ತು ವಾಖರ್​​ ಯೂನಿಸ್​​​ರ ಬೌಲಿಂಗ್​​ ಅನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದರಂತೆ.

ಚಿಕ್ಕವನಿದ್ದಾಗ ಪಾಕಿಸ್ತಾನದ ಯಾರ್ಕರ್​​​​ ಕಿಂಗ್ಸ್​​ಗಳಾದ ಅಕ್ರಂ, ವಾಖರ್​​ ಯೂನಿಸ್​​​ ಬೌಲಿಂಗ್​​ ನೋಡಿ ವಿಕೆಟ್​​​ಗಳನ್ನ ಪಡೀಬೇಕಾದ್ರೆ ಡೆಡ್ಲಿ ಯಾರ್ಕರ್​​​​ ಸೂಕ್ತ ಅಸ್ತ್ರ ಎಂದು ನಿರ್ಧರಿಸಿಬಿಟ್ಟಿದ್ರು. ಹೀಗಾಗಿ ಅಂದಿನಿಂದಲೇ ಸಮಯ ಸಿಕ್ಕಾಗಲೆಲ್ಲಾ ತಮ್ಮ ಮನೆಯ ಹಾಲ್​ನಲ್ಲೇ ಗೋಡೆಯ ತುದಿಗೆ  ಬೌಲ್​​​ ಮಾಡುತ್ತಿದ್ರು.

ಡೆಡ್ಲಿ ಯಾರ್ಕರ್​​ಗಳಿಗೆ ಪಾಲಿಶ್​​​ ಮಾಡಿದ್ದ ಮಾಲಿಂಗ

ವಿಕೆಟ್​​​ ಪಡೆಯಬೇಕಾದರೆ ಯಾರ್ಕರ್​​​ ಅತ್ಯವಶ್ಯಕ ಎಂದು ಇನ್ನಿಲ್ಲದಂತೆ ಯಾರ್ಕರ್​​​ಗಳನ್ನ ಎಸೆಯುತ್ತಿದ್ದ ಬುಮ್ರಾ, ಬೆಸ್ಟ್​​​ ಆಗಿದ್ದು ಲಂಕಾದ ಲಸಿತ್​​ ಮಲಿಂಗರಿಂದ. IPLನಲ್ಲಿ ಮುಂಬೈ ಪರ ಆಡುತ್ತಿದ್ದ ವೇಳೆ ಬುಮ್ರಾನ ಬೌಲಿಂಗ್​ ನೋಡಿದ್ದ ಯಾರ್ಕರ್​​​ ಲೆಜೆಂಡ್​​ ಮಾಲಿಂಗ ಆತನ ಬೌಲಿಂಗ್​ ಅನ್ನ ಫೈನ್​​ ಟ್ಯೂನ್​​ ಮಾಡಿದ್ರು. ಅಷ್ಟೇ ಅಲ್ಲ ವಿಶ್ವವೇ ದಂಗುಬಡಿಸುವಂತಹ ಯಾರ್ಕರ್​​​ ಎಸೆಯಲು ಸಹಕರಿಸಿದ್ರು.

ಇದು ಟೀಂ ಇಂಡಿಯಾದ ಫ್ರಂಟ್​​​ ಲೈನ್​ ಬೌಲರ್​​​ ಜಸ್​​ಪ್ರೀತ್​ ಬುಮ್ರಾನ ಯಾರ್ಕರ್​​​ ಸೀಕ್ರೇಟ್​​​. ಚಿಕ್ಕ ವಯಸಿನಿಂದಲೂ ಯಾರ್ಕರ್​​ಗೆ ಮನಸೋತಿದ್ದ ಬುಮ್ರಾ, ಅದಕ್ಕಾಗಿ ಬದ್ಧ ವೈರಿಗಳನ್ನೇ ಗುರುಗಳನ್ನಾಗಿ ಸ್ವೀಕರಿಸಿ ಏಕಲವ್ಯನ ಹಾಗೆ ಒಬ್ಬಂಟಿಯಾಗಿ ಯಾರ್ಕರ್​​​ ಎಸೆಯೋದನ್ನ ಕಲಿತು ಈಗ ವಿಶ್ವದ ಬೆಸ್ಟ್​​​ ಬೌಲರ್ ಎನಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌