
ಸಿಡ್ನಿ(ನ.30): ಡಬ್ಲ್ಯೂಡಬ್ಲ್ಯೂಇ ಸೂಪರ್'ಸ್ಟಾರ್ ಜಾನ್ ಸೀನಾಗೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾಟ್ಸನ್ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ.
ತಮ್ಮ ಮುಂಬರುವ ಚಿತ್ರ ‘ಫರ್ಡಿನ್ಯಾಂಡ್’ನ ಪ್ರಚಾರದ ಸಲುವಾಗಿ ಆಸ್ಟ್ರೇಲಿಯಾಗೆ ಆಗಮಿಸಿದ್ದ ಸೀನಾಗೆ ಕ್ರಿಕೆಟ್ ಆಡಿ ಎಲ್ಲರ ಗಮನ ಸೆಳೆದರು. ಜಾನ್ ಸೀನಾ ಆಸ್ಟ್ರೇಲಿಯಾದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡ ಅದ್ಭುತ ಅನುಭವಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು 40 ವರ್ಷದ ಶೇನ್ ವ್ಯಾಟ್ಸನ್ ಕ್ರಿಕೆಟ್ ಆಡೋದು ಹೇಗೆ ಎಂದು ಜಾನ್ ಸೀನಾಗೆ ಹೇಳಿಕೊಟ್ಟಿದ್ದಾರೆ. ಬಿಗ್ ಬ್ಯಾಶ್ ಲೀಗ್'ನಲ್ಲಿ ಸಿಡ್ನಿ ಥಂಡರ್ಸ್ ತಂಡದ ಭಾಗವಾಗಿರುವ ವ್ಯಾಟ್ಸನ್ ಸಿಕ್ಸರ್ ಬಾರಿಸುವ ಬಗ್ಗೆ ಸೀನಾಗೆ ಕೆಲವೊಂದು ಉಪಯುಕ್ತ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಪ್ರಸಕ್ತ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯು ಡಿಸೆಂಬರ್ 09ರಿಂದ ಆರಂಭವಾಗಲಿದೆ. ಇನ್ನು ಸೀನಾ ಹೊಸ ಚಿತ್ರ 'ಫರ್ಡಿನ್ಯಾಂಡ್' ಅಮೇರಿಕಾದಲ್ಲಿ ಡಿಸೆಂಬರ್ 15ರಂದು ತೆರೆಕಾಣಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.