ಟೀಂ ಇಂಡಿಯಾದಿಂದ ನಂ.10 ಜೆರ್ಸಿಗೆ ಗುಡ್'ಬೈ..?

Published : Nov 30, 2017, 01:37 PM ISTUpdated : Apr 11, 2018, 12:51 PM IST
ಟೀಂ ಇಂಡಿಯಾದಿಂದ ನಂ.10 ಜೆರ್ಸಿಗೆ ಗುಡ್'ಬೈ..?

ಸಾರಾಂಶ

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘ನಂ.10 ಜೆರ್ಸಿ ನಿವೃತ್ತಿಗೊಳಿಸುವ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಇದು ಆಟಗಾರರ ನಡುವೆ ನಡೆದಿರುವ ಹೊಂದಾಣಿಕೆಯಷ್ಟೇ. ಯಾವ ಸಂಖ್ಯೆ ಧರಿಸಬೇಕು ಎನ್ನುವುದು ಆಟಗಾರರ ವೈಯಕ್ತಿಕ ವಿಚಾರ.

ನವದೆಹಲಿ(ನ.30): ಕ್ರಿಕೆಟ್ ದೇವರು’ ಎಂದೇ ಕರೆಯಲ್ಪಡುವ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ 10ನೇ ಸಂಖ್ಯೆಯ ಜೆರ್ಸಿಯನ್ನು ಭಾರತ ತಂಡದಿಂದ ನಿವೃತ್ತಿ ಗೊಳಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

10ನೇ ಸಂಖ್ಯೆಯುಳ್ಳ ಜೆರ್ಸಿಯನ್ನು ಧರಿಸಲು ಯಾವ ಆಟಗಾರನೂ ಒಪ್ಪದೆ ಇರುವುದೇ ಇದಕ್ಕೆ ಕಾರಣ. 2013ರಲ್ಲಿ ಸಚಿನ್ ನಿವೃತ್ತಿ ಘೋಷಿಸಿದ ಬಳಿಕ ಭಾರತ ತಂಡದಲ್ಲಿ ನಂ.10 ಜೆರ್ಸಿ ಬಳಕೆಯಾಗಿದ್ದು ಕೇವಲ ಒಂದೇ ಒಂದು ಬಾರಿ ಮಾತ್ರ. ಮುಂಬೈನ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಶ್ರೀಲಂಕಾ ಪ್ರವಾಸದ ವೇಳೆ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ 10ನೇ ಸಂಖ್ಯೆಯುಳ್ಳ ಜೆರ್ಸಿ ಧರಿಸಿದ್ದರು. 26 ವರ್ಷದ ಶಾರ್ದೂಲ್ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದರು. 10ನೇ ನಂಬರ್ ಜೆರ್ಸಿ ಧರಿಸುವ ಮೂಲಕ ಸಚಿನ್‌'ಗೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಹರಿಹಾಯ್ದಿದ್ದರು. ತಾವು ಸಂಖ್ಯಾಶಾಸ್ತ್ರದ ಪ್ರಕಾರ ನಂ.10 ಜೆರ್ಸಿ ಧರಿಸಿದ್ದಾಗಿ ಶಾರ್ದೂಲ್ ಸ್ಪಷ್ಟನೆ ನೀಡಿದ್ದರು. ಬಳಿಕ, ಶಾರ್ದೂಲ್ ತಮ್ಮ ಜೆರ್ಸಿಯ ಸಂಖ್ಯೆಯನ್ನು 54ಕ್ಕೆ ಬದಲಾಯಿಸಿಕೊಂಡಿದ್ದರು.

ಐಸಿಸಿಯಿಂದ ಅನುಮತಿಯಿಲ್ಲ: ಒಂದು ಜೆರ್ಸಿಯನ್ನು ನಿವೃತ್ತಿಗೊಳಿಸುವ ಬಗ್ಗೆ ಐಸಿಸಿಯಲ್ಲಿ ಯಾವುದೇ ನಿಯಮವಿಲ್ಲ. ಇದಕ್ಕೆ ಐಸಿಸಿ ಒಪ್ಪುವುದೂ ಇಲ್ಲ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ‘ನಂ.10 ಜೆರ್ಸಿ ನಿವೃತ್ತಿಗೊಳಿಸುವ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಇದು ಆಟಗಾರರ ನಡುವೆ ನಡೆದಿರುವ ಹೊಂದಾಣಿಕೆಯಷ್ಟೇ. ಯಾವ ಸಂಖ್ಯೆ ಧರಿಸಬೇಕು ಎನ್ನುವುದು ಆಟಗಾರರ ವೈಯಕ್ತಿಕ ವಿಚಾರ. ಐಸಿಸಿ ಅಧಿಕೃತವಾಗಿ ಒಂದು ಜೆರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಬಹುದು. ಆದರೆ ಆಟಗಾರರಿಗೆ ಇಂತದ್ದೇ ಸಂಖ್ಯೆಯನ್ನು ಧರಿಸಬೇಕು ಎಂದು ಹೇಳಲು ನಮಗೂ ಸಹ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ.

ನಂ.10 ಜೆರ್ಸಿ ನಿವೃತ್ತಿಗೊಳಿಸಿದ್ದ ಮುಂಬೈ: ಸಚಿನ್ ತೆಂಡುಲ್ಕರ್ ನಾಯಕರಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಅವರು ಐಪಿಎಲ್‌'ಗೆ ವಿದಾಯ ಹೇಳಿದ ಬಳಿಕ ನಂ.10 ಜೆರ್ಸಿಯನ್ನು ನಿವೃತ್ತಿಗೊಳಿಸಿತ್ತು. ತಂಡದ ಯಾವ ಆಟಗಾರನೂ ಸಹ 10ರ ಸಂಖ್ಯೆಯುಳ್ಳ ಜೆರ್ಸಿ ಧರಿಸಿ ಮುಂದೆಂದೂ ಆಡುವುದಿಲ್ಲ ಎಂದು ಫ್ರಾಂಚೈಸಿ ಘೋಷಿಸಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?