ವಿಶ್ವ ಕುಸ್ತಿಗೆ ಆಗಸ್ಟ್ 25, 26ಕ್ಕೆ ಆಯ್ಕೆ ಟ್ರಯಲ್ಸ್; ಪಟಿಯಾಲಾದಲ್ಲಿ ಟ್ರಯಲ್ಸ್‌..!

By Naveen KodaseFirst Published Aug 15, 2023, 10:39 AM IST
Highlights

 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಭಾರತೀಯ ಕುಸ್ತಿಪಟುಗಳ ಆಯ್ಕೆಗೆ ಆ.25, 26ರಂದು ಪಟಿಯಾಲಾದಲ್ಲಿ ಟ್ರಯಲ್ಸ್‌ ನಡೆಯಲಿದ್ದು, ಯಾವೊಬ್ಬ ಕುಸ್ತಿಪಟುವಿಗೂ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿಲ್ಲ.

ನವದೆಹಲಿ(ಆ.15): ಮುಂದಿನ ತಿಂಗಳು ನಡೆಯಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ಗೆ ಭಾರತೀಯ ಕುಸ್ತಿಪಟುಗಳ ಆಯ್ಕೆಗೆ ಆ.25, 26ರಂದು ಪಟಿಯಾಲಾದಲ್ಲಿ ಟ್ರಯಲ್ಸ್‌ ನಡೆಯಲಿದೆ. ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಿಂದ ವಿನೇಶ್‌ ಫೋಗಟ್‌ ಹಾಗೂ ಭಜರಂಗ್‌ ಪೂನಿಯಾಗೆ ವಿನಾಯ್ತಿ ನೀಡಿ ವಿರೋಧ ಎದುರಿಸಿದ್ದ ಭಾರತೀಯ ಕುಸ್ತಿ ಫೆಡರೇಶನ್‌ನ ತಾತ್ಕಾಲಿಕ ಆಡಳಿತ ಸಮಿತಿ ಈ ಬಾರಿ ಯಾರಿಗೂ ವಿನಾಯ್ತಿ ನೀಡಿಲ್ಲ. ಸೆ.16ರಿಂದ 24ರ ವರೆಗೂ ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ಚಾಂಪಿಯನ್‌ಶಿಪ್‌ ನಡೆಯಲಿದೆ.

ಇಂದಿನಿಂದ ವಿಶ್ವ ಶೂಟಿಂಗ್‌: ಭಾರತದ 53 ಮಂದಿ ಸ್ಪರ್ಧೆ

ಬಾಕು(ಅಜರ್‌ಬೈಜಾನ್‌): 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಮಂಗಳವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ. 12 ವಿಭಾಗಗಳಲ್ಲಿ ಒಟ್ಟು ಒಲಿಂಪಿಕ್ಸ್‌ 48 ಕೋಟಾ ಲಭ್ಯವಿದೆ. ಭಾರತದ 53 ಶೂಟರ್‌ಗಳು ಚಾಂಪಿಯನ್‌ಶಿಪ್‌ಗೆ ತೆರಳಿದ್ದು, ಈ ಪೈಕಿ 34 ಮಂದಿ ಒಲಿಂಪಿಕ್ಸ್‌ನಲ್ಲಿರುವ ವಿಭಾಗಗಳಲ್ಲಿ ಸ್ಪರ್ಧಿಸಿದರೆ, ಉಳಿದ 19 ಮಂದಿ ಒಲಿಂಪಿಕ್ಸ್‌ನಲ್ಲಿಲ್ಲದ ವಿಭಾಗಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಮಂಗಳವಾರ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಗುರುವಾರದಿಂದ ಪದಕ ಸ್ಪರ್ಧೆಗಳು ನಡೆಯಲಿವೆ. 100ಕ್ಕೂ ಹೆಚ್ಚು ದೇಶಗಳ ಸುಮಾರು 1250 ಶೂಟರ್‌ಗಳು ಪಾಲ್ಗೊಳ್ಳಲಿದ್ದಾರೆ.

ಇವರೇ ನೋಡಿ ಕ್ರಿಕೆಟಿಗ ಧೋನಿ ಸಹೋದರಿ, ವೃತ್ತಿಯಲ್ಲಿ ಟೀಚರ್‌, ಮದುವೆಯಾಗಿದ್ದು ಮಹಿ ಸ್ನೇಹಿತನನ್ನೇ!

ಕಿರಿಯರ ಈಜು: ರಾಜ್ಯದ 78 ಸ್ಪರ್ಧಿಗಳು ಕಣಕ್ಕೆ

ಬೆಂಗಳೂರು: 39ನೇ ಸಬ್‌ ಜೂನಿಯರ್‌, 49ನೇ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ ಆ.16ರಿಂದ 20ರ ವರೆಗೂ ಭುವನೇಶ್ವರದಲ್ಲಿ ನಡೆಯಲಿದೆ. ಸೋಮವಾರ ರಾಜ್ಯ ಈಜು ಸಂಸ್ಥೆ ತಂಡ ಪ್ರಕಟಿಸಿದ್ದು, 40 ಬಾಲಕರು ಹಾಗೂ 38 ಬಾಲಕಿಯರು ಸೇರಿ ಒಟ್ಟು 78 ಮಂದಿ ಸ್ಪರ್ಧಿಸಲಿದ್ದಾರೆ. ತಂಡದೊಂದಿಗೆ 9 ಅಧಿಕಾರಿಗಳು ತೆರಳಿದ್ದಾರೆ.

ಡುರಾಂಡ್‌ ಕಪ್‌: ಡ್ರಾಗೆ ತೃಪ್ತಿಪಟ್ಟ ಬಿಎಫ್‌ಸಿ

ಕೋಲ್ಕತಾ: ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಡುರಾಂಡ್‌ ಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಏರ್‌ ಫೋರ್ಸ್ ಎಫ್‌ಟಿ ವಿರುದ್ಧ 1-1 ಗೋಲಿನ ಡ್ರಾಗೆ ತೃಪ್ತಿಪಟ್ಟಿದೆ. ಸೋಮವಾರ ನಡೆದ ಪಂದ್ಯದ 21ನೇ ನಿಮಿಷದಲ್ಲಿ ವಿವೇಕ್‌ ಕುಮಾರ್‌ ಗೋಲು ಬಾರಿಸಿ ಏರ್‌ಫೋರ್ಸ್‌ ತಂಡಕ್ಕೆ ಮುನ್ನಡೆ ಒದಗಿಸಿದರು. 59ನೇ ನಿಮಿಷದಲ್ಲಿ ಜಾನ್ಸನ್‌ ಸಿಂಗ್‌ ಬಾರಿಸಿದ ಗೋಲಿನ ನೆರವಿನಿಂದ ಬಿಎಫ್‌ಸಿ ಸಮಬಲ ಸಾಧಿಸಿತು. ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಆ.18ರಂದು ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಆಡಲಿದೆ.

ಏಷ್ಯಾಕಪ್‌ನಲ್ಲಿ ಆಡದಿದ್ದರೆ..? ವಿಶ್ವಕಪ್‌ಗೂ ಮುನ್ನ ಶ್ರೇಯಸ್‌, ರಾಹುಲ್‌ಗೆ ಎಚ್ಚರಿಕೆ?

ರಾಣಿ ಬಗ್ಗೆ ಮತ್ತೆ ನಿರ್ಲಕ್ಷ್ಯ, ಏಷ್ಯಾಡ್‌ಗೆ ಆಯ್ಕೆ ಇಲ್ಲ!

ಬೆಂಗಳೂರು: ಹಿರಿಯ ಹಾಕಿ ಆಟಗಾರ್ತಿ ರಾಣಿ ರಾಂಪಾಲ್‌ರನ್ನು ಆಯ್ಕೆಗಾರರು ಮತ್ತೆ ಕಡೆಗಣಿಸಿದ್ದು, ಏಷ್ಯನ್‌ ಗೇಮ್ಸ್‌ನ 34 ಸದಸ್ಯರ ಸಂಭವನೀಯರ ತಂಡದಿಂದ ಹೊರಗಿಟ್ಟಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ರಾಣಿ ನಾಯಕತ್ವದಲ್ಲೇ ಭಾರತ ತಂಡ ಐತಿಹಾಸಿಕ 4ನೇ ಸ್ಥಾನ ಪಡೆದಿತ್ತು. ನಂತರ ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದ ರಾಣಿ, ಫಿಟ್‌ ಆದ ಬಳಿಕವೂ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಈ ಬಗ್ಗೆ ಇತ್ತೀಚೆಗೆ ಹಾಕಿ ಇಂಡಿಯಾ ಸುದ್ದಿಗೋಷ್ಠಿಯಲ್ಲೇ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಕೋಚ್‌ ಹಾಗೂ ಆಯ್ಕೆಗಾರರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.

click me!