ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್ ವಿರುದ್ಧ ಇಂದು ಚಾರ್ಜ್‌ಶೀಟ್‌?

By Kannadaprabha News  |  First Published Jun 15, 2023, 8:19 AM IST

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ ಆರೋಪ
ಡೆಲ್ಲಿ  ಪೊಲೀಸರಿಂದ ಇಂದು ಚಾರ್ಜ್‌ಶೀಟ್ ಸಲ್ಲಿಕೆ ಸಾಧ್ಯತೆ
ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಕೆ?


ನವದೆಹಲಿ(ಜೂ.15): ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೆಹಲಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಬಹುದು ಎನ್ನಲಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ದೆಹಲಿ ಮ್ಯಾಜಿಸ್ಪ್ರೇಟ್‌ ಕೋರ್ಚ್‌ಗೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಪೊಲೀಸರು ಸುಮಾರು 180ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, 120ಕ್ಕೂ ಹೆಚ್ಚು ಸಾಕ್ಷಿಗಳು ಲಭ್ಯವಾಗಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಜೂ.7ರಂದು ಕುಸ್ತಿಪಟುಗಳ ಜೊತೆ ಸುದೀರ್ಘ 6 ಗಂಟೆಗಳ ಕಾಲ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಜೂ.15ರೊಳಗೆ ಬ್ರಿಜ್‌ಭೂಷಣ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ ಎಂದಿದ್ದರು. ಬ್ರಿಜ್‌ಭೂಷಣ್‌ರನ್ನು ಬಂಧಿಸಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದ್ದ ಕುಸ್ತಿಪಟುಗಳು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಜೂ.3ರಂದು ಭೇಟಿಯಾದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದ್ದರು. ತನಿಖೆ ಮುಗಿಯುವ ವರೆಗೂ ಪ್ರತಿಭಟನೆ ನಿಲ್ಲಿಸುವಂತೆ ಶಾ ಕೇಳಿಕೊಂಡಿದ್ದಾರೆ ಎಂದು ಕುಸ್ತಿಪಟುಗಳು ಮಾಧ್ಯಮಗಳಿಗೆ ತಿಳಿಸಿದ್ದರು.

Tap to resize

Latest Videos

ವಿಂಬಲ್ಡನ್‌: ಸಿಂಗಲ್ಸ್‌ ವಿಜೇತರಿಗೆ 24 ಕೋಟಿ !

ಲಂಡನ್‌: ಟೆನಿಸ್‌ನ ನಾಲ್ಕು ಗ್ರ್ಯಾನ್‌ಸ್ಲಾಂಗಳ ಪೈಕಿ ಒಂದಾದ ವಿಂಬಲ್ಡನ್‌ನ ಒಟ್ಟು ಪ್ರಶಸ್ತಿ ಮೊತ್ತವನ್ನು ಕಳೆದ ವರ್ಷಕ್ಕಿಂತ ಶೇ.11ರಷ್ಟುಏರಿಕೆ ಮಾಡಲಾಗಿದ್ದು, ಈ ವರ್ಷ ಪುರುಷ, ಮಹಿಳಾ ಸಿಂಗಲ್ಸ್‌ ವಿಜೇತರು 2.35 ಮಿಲಿಯನ್‌ ಪೌಂಡ್‌(ಅಂದಾಜು 24.61 ಕೋಟಿ ರು.) ಬಹುಮಾನ ಮೊತ್ತ ಪಡೆಯಲಿದ್ದಾರೆ. ಕೋವಿಡ್‌ನಿಂದಾಗಿ ಪ್ರಶಸ್ತಿ ಮೊತ್ತವನ್ನು ಇಳಿಕೆ ಮಾಡಲಾಗಿತ್ತು. ಇದೀಗ ಕೋವಿಡ್‌ ಪೂರ್ವದಲ್ಲಿ ಎಷ್ಟಿತ್ತೋ ಅಷ್ಟಕ್ಕೆ ಏರಿಸಲಾಸಿಗದೆ. ಮೊದಲ ಸುತ್ತಿನಲ್ಲಿ ಸೋಲುವ ಆಟಗಾರರಿಗೆ 57.23 ಲಕ್ಷ ರು. ಸಿಗಲಿದೆ.

ಕುಸ್ತಿ ಒಕ್ಕೂಟ ಚುನಾವಣೆ: ಬ್ರಿಜ್‌ ಭೂಷಣ್ ಕುಟುಂಬ ಸ್ಪರ್ಧಿಸಲ್ಲ..!

ಫುಟ್ಬಾಲ್‌: ಭಾರತಕ್ಕಿಂದು ಲೆಬನಾನ್‌ ಎದುರಾಳಿ

ಭುವನೇಶ್ವರ: ಇಂಟರ್‌ ಕಾಂಟಿನೆಂಟಲ್‌ ಕಪ್‌ ಟೂರ್ನಿಯಲ್ಲಿ ಈಗಾಗಲೇ ಫೈನಲ್‌ ಪ್ರವೇಶಿಸಿರುವ ಭಾರತ, ಗುರುವಾರ ರೌಂಡ್‌ ರಾಬಿನ್‌ ಹಂತದ ಕೊನೆಯ ಪಂದ್ಯದಲ್ಲಿ ಲೆಬನಾನ್‌ ವಿರುದ್ಧ ಸೆಣಸಲಿದೆ. ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿರುವ ಭಾರತ, 99ನೇ ಸ್ಥಾನದಲ್ಲಿರುವ ಲೆಬನಾನ್‌ ವಿರುದ್ಧ ಗೆದ್ದರೆ 2019ರ ಬಳಿಕ ಮೊದಲ ಬಾರಿಗೆ ಅಗ್ರ-100ರೊಳಗೆ ಪ್ರವೇಶಿಸಲಿದೆ.

ನೆಟ್‌ಬಾಲ್‌: ಪಾಕ್‌ ವಿರುದ್ಧ ಗೆದ್ದ ಭಾರತ

ಜೊಂಜು(ಕೊರಿಯಾ): ಏಷ್ಯನ್‌ ಯೂತ್‌ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 77-43 ಅಂಕಗಳಲ್ಲಿ ಭರ್ಜರಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ‘ಎ’ ಗುಂಪಿನಲ್ಲಿ 3ನೇ ಸ್ಥಾನ ಪಡೆದ ಭಾರತ, ಶುಕ್ರವಾರ ಪ್ಲೇ-ಆಫ್‌ ಪಂದ್ಯದಲ್ಲಿ ಚೈನೀಸ್‌ ತೈಪೆ ವಿರುದ್ಧ ಆಡಲಿದೆ.

ರಾಷ್ಟ್ರೀಯ ಫುಟ್ಬಾಲ್: ರಾಜ್ಯಕ್ಕೆ ಸೋಲಿನ ಆರಂಭ

ಅಮೃತ್‌ಸರ್: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್ ಸುತ್ತಿನಲ್ಲಿ ಕರ್ನಾಟಕ ಸೋಲಿನ ಆರಂಭ ಪಡೆದಿದೆ. ಬುಧವಾರ ನಡೆದ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು 0-4  ಗೋಲುಗಳ ಅಂತರದಲ್ಲಿ ತಮಿಳುನಾಡು ವಿರುದ್ದ ಸೋಲು ಅನುಭವಿಸಿತು.

ತಮಿಳುನಾಡು ಪರ 45+3 ನೇ ನಿಮಿಷದಲ್ಲಿ ಇಂದುಮತಿ, 49,79ನೇ ನಿಮಿಷದಲ್ಲಿ ಸಂಧ್ಯಾ, 64ನೇ ನಿಮಿಷದಲ್ಲಿ ಯುವರಾಣಿ ಗೋಲು ಬಾರಿಸಿದರು. ಕರ್ನಾಟಕ ತನ್ನ ಎರಡನೇ ಪಂದ್ಯವನ್ನು ಶುಕ್ರವಾರ ಆತಿಥೇಯ ಪಂಜಾಬ್ ವಿರುದ್ದ ಆಡಲಿದೆ.

click me!