ಇಂದಿನಿಂದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್‌; ರಾಜ್ಯದ ಡಿ.ಪಿ. ಮನು, ಪ್ರಿಯಾ ಮೋಹನ್‌ ಮೇಲೆ ನಿರೀಕ್ಷೆ

Published : Jun 15, 2023, 07:49 AM IST
ಇಂದಿನಿಂದ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್‌; ರಾಜ್ಯದ ಡಿ.ಪಿ. ಮನು, ಪ್ರಿಯಾ ಮೋಹನ್‌ ಮೇಲೆ ನಿರೀಕ್ಷೆ

ಸಾರಾಂಶ

ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್‌ ಭುವನೇಶ್ವರ ಆತಿಥ್ಯ ಏಷ್ಯನ್‌ ಗೇಮ್ಸ್‌ ಅರ್ಹತೆಗೆ ಪೈಪೋಟಿ ರಾಜ್ಯದ ಡಿ.ಪಿ. ಮನು, ಪ್ರಿಯಾ ಮೋಹನ್‌ ಮೇಲೆ ನಿರೀಕ್ಷೆ  

ಭುವನೇಶ್ವರ(ಜೂ.15): ಸೆಪ್ಟೆಂಬರ್‌ 29ರಿಂದ ಚೀನಾದ ಹಾಂಗ್ಝುನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆಯುವ ದೃಷ್ಟಯಿಂದ ಗುರುವಾರ ಇಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್‌, ಭಾರತದ ತಾರಾ ಅಥ್ಲೀಟ್‌ಗಳ ಪಾಲಿಗೆ ಮಹತ್ವದೆನಿಸಿದೆ. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಒಲಿಂಪಿಕ್ಸ್‌ ಜಾವೆಲಿನ್‌ ಚಾಂಪಿಯನ್‌ ನೀರಜ್‌ ಚೋಪ್ರಾ, ಕಾಮನ್‌ವೆಲ್ತ್‌ ಗೇಮ್ಸ್‌ನ 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವಿನಾಶ್‌ ಸಾಬ್ಳೆ ಹೊರತುಪಡಿಸಿ ಭಾರತದ ಉಳಿದೆಲ್ಲಾ ಅಗ್ರ ಅಥ್ಲೀಟ್‌ಗಳು ಈ ಕೂಟದಲ್ಲಿ ಭಾಗಿಯಾಗಲಿದ್ದಾರೆ.

ಏಷ್ಯನ್‌ ಗೇಮ್ಸ್‌ ಆಯ್ಕೆಗೆ ಪರಿಗಣಿಸಬೇಕಿದ್ದರೆ ಅಂತರ-ರಾಜ್ಯ ಕೂಟದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಸೂಚಿಸಿತ್ತು. ಹೀಗಾಗಿ ಈ ಕೂಟಕ್ಕೆ ಇನ್ನಷ್ಟುಮಹತ್ವ ದೊರೆತಿದೆ. ಈ ಕೂಟವು ಇನ್ನೂ ಒಂದು ತಿಂಗಳು ಕಳೆದು ನಡೆಯಬೇಕಿತ್ತು. ಆದರೆ ಏಷ್ಯಾ ಒಲಿಂಪಿಕ್‌ ಸಮಿತಿ(ಒಸಿಎ), ಏಷ್ಯನ್‌ ಗೇಮ್ಸ್‌ಗೆ 75 ದಿನಗಳ ಮೊದಲು ಅಂದರೆ ಜು.15ರೊಳಗೆ ತಂಡ ಪ್ರಕಟಿಸುವಂತೆ ಸೂಚಿಸಿದ್ದರಿಂದ ಎಎಫ್‌ಐ ಕೂಟದ ವೇಳಾಪಟ್ಟಿಯನ್ನು ಬದಲಿಸಿತು.

ಕುಸ್ತಿ ಒಕ್ಕೂಟ ಚುನಾವಣೆ: ಬ್ರಿಜ್‌ ಭೂಷಣ್ ಕುಟುಂಬ ಸ್ಪರ್ಧಿಸಲ್ಲ..!

ತಾರೆಯರು ಕಣಕ್ಕೆ: ಇತ್ತೀಚೆಗೆ ಪ್ಯಾರಿಸ್‌ ಡೈಮಂಡ್‌ ಲೀಗ್‌ನ ಲಾಂಗ್‌ ಜಂಪ್‌ನಲ್ಲಿ 3ನೇ ಸ್ಥಾನ ಪಡೆದ ಶ್ರೀಶಂಕರ್‌ ಮುರಳಿ, ರಾಷ್ಟ್ರೀಯ ದಾಖಲೆ ವೀರ ಜೆಸ್ವಿನ್‌ ಆಲ್ಡಿ್ರನ್‌ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಜಾವೆಲಿನ್‌ ಥ್ರೋನಲ್ಲಿ ಕರ್ನಾಟಕದ ಡಿ.ಪಿ. ಮನು ಸೇರಿ ಈಗಾಗಲೇ ಸತತವಾಗಿ 80 ಮೀ. ದೂರ ದಾಟುತ್ತಿರುವ ಒಟ್ಟು 6 ಅಥ್ಲೀಟ್‌ಗಳಿದ್ದು ಇವರ ನಡುವಿನ ಸ್ಪರ್ಧೆ ಭಾರೀ ಕುತೂಹಲ ಮೂಡಿಸಿದೆ.

ಟ್ರಿಪಲ್‌ ಜಂಪ್‌ನಲ್ಲಿ ಎಲ್ಡೋಸ್‌ ಪೌಲ್‌, ಪ್ರವೀಣ್‌ ಚಿತ್ರವೇಲ್‌, ಅಬ್ದುಲ್ಲಾ ಅಬೂಬಕರ್‌, ಸೆಲ್ವ ಪ್ರಭು, ಕಾರ್ತಿಕ್‌ ಉನ್ನಿಕೃಷ್ಣನ್‌ ನಡುವೆ ಕಠಿಣ ಸ್ಪರ್ಧೆಯ ನಿರೀಕ್ಷೆ ಇದೆ. ಈ ಎಲ್ಲರೂ ಈಗಾಗಲೇ 17 ಮೀ. ಕ್ಲಬ್‌ನಲ್ಲಿದ್ದು ಈ ಕೂಟದ ಬಹುನಿರೀಕ್ಷಿತ ಸ್ಪರ್ಧೆ ಎನಿಸಿದೆ.

ಮಹಿಳೆಯರ 100 ಮೀ. ಹಾಗೂ 100 ಮೀ. ಹರ್ಡಲ್ಸ್‌ನಲ್ಲಿ ಜ್ಯೋತಿ ಯರ್ರಾಜಿ, 5000 ಮೀ. ಓಟ ಹಾಗೂ 5000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಪಾರುಲ್‌ ಚೌಧರಿ, ಲಾಂಗ್‌ ಜಂಪ್‌ನಲ್ಲಿ ಶೈಲಿ ಸಿಂಗ್‌, ಜಾವೆಲಿನ್‌ ಥ್ರೋನಲ್ಲಿ ಅನ್ನು ರಾಣಿ, 400 ಮೀ. ಓಟದಲ್ಲಿ ಕರ್ನಾಟಕದ ಪ್ರಿಯಾ ಮೋಹನ್‌, ಏಷ್ಯನ್‌ ಅಂಡರ್‌-20 ಚಾಂಪಿಯನ್‌ ರೆಜೋನಾ ಮಲಿಕ್‌ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಹಲವು ಅಥ್ಲೀಟ್‌ಗಳ ಆಗಸ್ಟ್‌ನಲ್ಲಿ ಹಂಗೇರಿಯಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ.

ಇಂಡೋನೇಷ್ಯಾ ಓಪನ್‌: ಶ್ರೀಕಾಂತ್‌, ಲಕ್ಷ್ಯಗೆ ಜಯ

ಜಕಾರ್ತ: ಭಾರತದ ತಾರಾ ಶಟ್ಲರ್‌ಗಳಾದ ಕಿದಂಬಿ ಶ್ರೀಕಾಂತ್‌ ಹಾಗೂ ಲಕ್ಷ್ಯ ಸೇನ್‌ ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ವಿಶ್ವ ನಂ.20 ಲಕ್ಷ್ಯ, ವಿಶ್ವ ನಂ.11 ಮಲೇಷ್ಯಾದ ಝಿ ಜಿಯಾ ಲೀ ವಿರುದ್ಧ 21-17, 21-13ರಲ್ಲಿ ಗೆದ್ದರೆ, ಶ್ರೀಕಾಂತ್‌ ಚೀನಾದ ಝು ಲು ವಿರುದ್ಧ 21-13, 21-19 ಗೇಮ್‌ಗಳಲ್ಲಿ ಜಯಿಸಿದರು. 2ನೇ ಸುತ್ತಿನಲ್ಲಿ ಶ್ರೀಕಾಂತ್‌ ಹಾಗೂ ಲಕ್ಷ್ಯ ಪರಸ್ಪರ ಎದುರಾಗಲಿದ್ದಾರೆ. ಥಾಯ್ಲೆಂಡ್‌ ಆಟಗಾರ ಕುನ್ಲವುಟ್‌ ವಾಕ್‌ ಓವರ್‌ ನೀಡಿದ ಕಾರಣ ಪ್ರಿಯಾನ್ಶು ರಾಜಾವತ್‌ ಕೂಡ 2ನೇ ಸುತ್ತು ಪ್ರವೇಶಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!