ಅರ್ಜುನ, ಖೇಲ್ ರತ್ನವನ್ನು ರಸ್ತೆಯಲ್ಲೇ ಬಿಟ್ಟ ವಿನೇಶ್ ಫೋಗಟ್!

By Kannadaprabha News  |  First Published Dec 31, 2023, 12:00 PM IST

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲೆಂದು ಕರ್ತವ್ಯ ಪಥಕ್ಕೆ ಆಗಮಿಸಿದಾಗ ಅವರನ್ನು ಭದ್ರತಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರಶಸ್ತಿಗಳನ್ನು ವಿನೇಶ್ ಫೋಗಟ್ ರಸ್ತೆಯಲ್ಲೇ ಇಟ್ಟು ಹಿಂದಿರುಗಿದ್ದಾರೆ. ಬಳಿಕ ಅದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 


ನವದೆಹಲಿ(ಡಿ.31): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯೂಎಫ್‌ಐ)ಗೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರ ಆಪ್ತರ ನೇಮಕ ವಿರೋಧಿಸಿ ಶನಿವಾರ ತಾರಾ ಕುಸ್ತಿಪಟು ವಿನೇಶ್ ಫೋಗಟ್ ಖೇಲ್ ರತ್ನ, ಅರ್ಜುನ್ ಪ್ರಶಸ್ತಿಯನ್ನು ಹಿಂತಿರುಗಿಸಲು ನವದೆಹಲಿಯ ಕರ್ತವ್ಯ ಪಥಕ್ಕೆ ಆಗಮಿಸಿದ್ದು, ಈ ವೇಳೆ ಹೈಡ್ರಾಮ ಸೃಷ್ಟಿಯಾಗಿದೆ.

ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲೆಂದು ಕರ್ತವ್ಯ ಪಥಕ್ಕೆ ಆಗಮಿಸಿದಾಗ ಅವರನ್ನು ಭದ್ರತಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರಶಸ್ತಿಗಳನ್ನು ವಿನೇಶ್ ಫೋಗಟ್ ರಸ್ತೆಯಲ್ಲೇ ಇಟ್ಟು ಹಿಂದಿರುಗಿದ್ದಾರೆ. ಬಳಿಕ ಅದನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 

Tap to resize

Latest Videos

undefined

Boxing Day Test ಟೀಂ ಇಂಡಿಯಾ ಸೋಲಿಗೆ ಈ 4 ವೈಫಲ್ಯಗಳೇ ಕಾರಣ..! ನೀವೇನಂತೀರಾ?

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತುಕೊಂಡಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರ ಆಪ್ತರು ಕುಸ್ತಿ ಸಂಸ್ಥೆಗೆ ಆಯ್ಕೆಯಾಗಿದ್ದರು. ಅದನ್ನು ವಿರೋಧಿಸಿ ವಿನೇಶ್ ಫೋಗಟ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಮಂಗಳವಾರ ಘೋಷಿಸಿದ್ದರು. ಇತ್ತೀಚೆಗಷ್ಟೇ ಭಜರಂಗ್ ಪೂನಿಯಾ ಕೂಡಾ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿಸಲು ಪ್ರಧಾನ ನಿವಾಸದ ಬಳಿ ಆಗಮಿಸಿದ್ದು, ಪೊಲೀಸರು ತಡೆದಾಗ ಪ್ರಶಸ್ತಿಯನ್ನು ರಸ್ತೆಯಲ್ಲೇ ಬಿಟ್ಟು ತೆರಳಿದ್ದರು.

ಫೆ.2ಕ್ಕೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಶುರು

ನವದೆಹಲಿ: ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಫೆ.2ರಿಂದ 5ರ ವರೆಗೆ ಜೈಪುರದಲ್ಲಿ ನಡೆಯಲಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ)ನ ನಿಯಂತ್ರಣಕ್ಕೆ ನೇಮಿಸಲಾಗಿರುವ ಸ್ವತಂತ್ರ ಸಮಿತಿ ಶನಿವಾರ ಪ್ರಕಟಿಸಿದೆ. 

Boxing Day Test ಟೀಂ ಇಂಡಿಯಾ ಸೋಲಿಗೆ ಈ 4 ವೈಫಲ್ಯಗಳೇ ಕಾರಣ..! ನೀವೇನಂತೀರಾ?

ಕೂಟದಲ್ಲಿ ಫ್ರೀಸ್ಟೈಲ್‌, ಗ್ರೀಕೊ ರೋಮನ್‌, ಮಹಿಳಾ ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ ಎಂದು ಸಮಿತಿ ಮುಖ್ಯಸ್ಥ ಭೂಪಿಂದರ್‌ ಸಿಂಗ್‌ ಬಜ್ವಾ ತಿಳಿಸಿದ್ದಾರೆ. ಕಳೆದ ಜನವರಿಯಲ್ಲಿ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್ ವಿರುದ್ಧ ತಾರಾ ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ ಬಳಿಕ ಕುಸ್ತಿ ಸಂಸ್ಥೆಯನ್ನೇ ಅಮಾನತುಗೊಳಿಸಲಾಗಿತ್ತು. ಆ ಬಳಿಕ ಯಾವುದೇ ಕೂಟಗಳು ನಡೆದಿಲ್ಲ.

click me!