
ನೂರ್-ಸುಲ್ತಾನ್ (ಸೆ.18): ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ 53 ಕೆ.ಜಿ ವಿಭಾಗದಲ್ಲಿ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದ್ದಾರೆ.
ಮಂಗಳವಾರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಜಪಾನ್‌ನ ಮಯು ಮುಕಯಿಡಾ ವಿರುದ್ಧ ವಿನೇಶ್ ಸೋಲುಂಡರು. ಮೊದಲ ಸುತ್ತಿನ ಪಂದ್ಯದಲ್ಲಿ ವಿನೇಶ್ ಸ್ವೀಡನ್‌ನ ಸೋಫಿಯಾ ಮ್ಯಾಟ್ಸನ್ ವಿರುದ್ಧ 13-0ಯಲ್ಲಿ ಗೆದ್ದಿದ್ದರು. ಮುಕಯಿಡಾ ಫೈನಲ್ ಪ್ರವೇಶಿಸಿದ ಕಾರಣ, ವಿನೇಶ್‌ಗೆ ರಿಪಿಶ್ಯಾಜ್ ಸುತ್ತಿಗೆ ಪ್ರವೇಶ ಸಿಕ್ಕಿದ್ದು, ಕಂಚಿನ ಪದಕ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನಕ್ಕಾಗಿ ಹೋರಾಟ ನಡೆಸಲಿದ್ದಾರೆ.
ಕುಸ್ತಿ ಪಟು ವಿನೇಶ್ ಪೋಗತ್ ಬದುಕು ಬದಲಿಸಿತ್ತು ಸುಷ್ಮಾ ಸ್ವರಾಜ್ ಟ್ವೀಟ್!
ರಿಪಿಶ್ಯಾಜ್ ಸುತ್ತಿನ ಮೊದಲ ಪಂದ್ಯದಲ್ಲಿ ಉಕ್ರೇನ್‌ನ ಯೂಲಿಯಾ ವಿರುದ್ಧ ಸೆಣಸಲಿರುವ ವಿನೇಶ್, ಆ ಪಂದ್ಯ ಗೆದ್ದರೆ 2ನೇ ಸುತ್ತಿನಲ್ಲಿ ಅಮೆರಿಕದ ಸಾರಾ ಹಿಲ್ಡೆಬ್ರಾಂಡ್‌ರನ್ನು ಎದುರಿಸಲಿದ್ದಾರೆ. ಎರಡು ಪಂದ್ಯಗಳಲ್ಲಿ ಗೆದ್ದರೆ, ಕಂಚಿನ ಪದಕದ ಪಂದ್ಯಕ್ಕೆ ಪ್ರವೇಶ ಸಿಗಲಿದ್ದು, ಗ್ರೀಸ್‌ನ ಪ್ರೆವೊಲಾರಕಿ ಜತೆ ಪೈಪೋಟಿ ನಡೆಸಲಿದ್ದಾರೆ.
ಕುಸ್ತಿ: ಒಂದೇ ತಿಂಗಳಲ್ಲಿ 3 ಚಿನ್ನ ಗೆದ್ದ ವಿನೇಶ್
ಮಹಿಳೆಯರ 50 ಕೆ.ಜಿ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ ಸೋಲುಂಡ ಸೀಮಾ ಬಿಸ್ಲಾ ಸಹ ರಿಪಿಶ್ಯಾಜ್ ಸುತ್ತಿಗೆ ಪ್ರವೇಶ ಪಡೆದಿದ್ದು, ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ.
ಇದೇ ವೇಳೆ ಗ್ರೀಕೋ ರೋಮನ್ ವಿಭಾಗದಲ್ಲಿ ಭಾರತ ಪದಕ ಗೆಲ್ಲದೆ ತನ್ನ ಅಭಿಯಾನ ಮುಕ್ತಾಯಗೊಳಿಸಿತು. 130 ಕೆ.ಜಿ ವಿಭಾಗದಲ್ಲಿ ರಿಪಿಶ್ಯಾಜ್ ಸುತ್ತು ಪ್ರವೇಶಿಸಿದ್ದ ನವೀನ್, ಮೊದಲ ಪಂದ್ಯದಲ್ಲಿ ಎಸ್ಟೋನಿಯಾದ ಹೀಕೀ ನಬಿ ವಿರುದ್ಧ ಸೋಲುಂಡು ಹೊರಬಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.