ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ 180 ರನ್ ಟಾರ್ಗೆಟ್ ನೀಡಿದ ಭಾರತ!

By Web DeskFirst Published May 25, 2019, 6:20 PM IST
Highlights

ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೈನ್ಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಜೇಮ್ಸ್ ನೀಶಮ್ ಹಾಗೂ ಟ್ರೆಂಟ್ ಬೋಲ್ಡ್ ದಾಳಿ ನಡುವೆ ರವೀಂದ್ರ ಜಡೇಜಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇಲ್ಲಿದೆ ಹೈಲೈಟ್ಸ್.

ಓವಲ್(ಮೇ.25): ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ  ಟೀಂ ಇಂಡಿಯಾ ಕೇವಲ 179 ರನ್‌ಗೆ ಆಲೌಟ್ ಆಗಿದೆ. ಆಲ್ರೌಂಡರ್ ರವೀಂದ್ರ ಜಡೇಜಾ ಆಕರ್ಷಕ ಅರ್ಧಶತಕದಿಂದ ಭಾರತ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.  ಟ್ರೆಂಟ್ ಬೊಲ್ಟ್ ಹಾಗೂ ಜೇಮ್ಸ್ ನೀಶಮ್ ದಾಳಿಗೆ ತತ್ತರಿಸಿದ್ದ ಭಾರತಕ್ಕೆ ಜಡೇಜಾ ಹೋರಾಟದಿಂತ ಚೇತರಿಸಿಕೊಂಡು 180 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಲಿದ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ರೋಹಿತ್ ಶರ್ಮಾ, ಶಿಖರ್ ಧವನ್ ಅಬ್ಬರಿಸಿಲ್ಲ. ನಾಯಕ ವಿರಾಟ್ ಕೊಹ್ಲಿ ರನ್, ಜರ್ಸಿ ನಂಬರ್ ದಾಟಲಿಲ್ಲ. ಕೆಎಲ್ ರಾಹುಲ್ 6 ರನ್ ಸಿಡಿಸಿ ಔಟಾದರು. ಆದರೆ ಹಾರ್ದಿಕ್ ಪಾಂಡ್ಯ 30 ರನ್ ಸಿಡಿಸಿ ಅಲ್ಪ ಚೇತರಿಕೆ ನೀಡಿದರು.

ಎಂ.ಎಸ್.ಧೋನಿ 17, ದಿನೇಶ್ ಕಾರ್ತಿಕ್ 4 ರನ್ ಸಿಡಿಸಿ ಔಟಾದರು. ಆದರೆ ರವೀಂದ್ರ ಜಡೇಜಾ ಹಾಫ್ ಸೆಂಚುರಿ ಸಿಡಿಸಿದರು. ಜಡೇಜಾ 50 ಎಸೆತದಲ್ಲಿ 54 ರನ್ ಸಿಡಿಸಿ ಔಟಾದರು. ಇನ್ನು ಜಡೇಜಾಗೆ ಉತ್ತಮ ಸಾಥ್ ನೀಡಿದ ಕುಲ್ದೀಪ್ ಯಾದವ್ 19 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಭಾರತ, 29.2 ಓವರ್‌ಗಳಲ್ಲಿ 179 ರನ್‌ಗೆ ಆಲೌಟ್ ಆಗಿದೆ.

click me!