
ಇಸ್ಲಾಮಾಬಾದ್(ಮೇ.25): ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಆಫ್ರಿದಿ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಈ ಇಬ್ಬರೂ ದಿಗ್ಗಜರು ನಿವೃತ್ತಿ ಹೇಳಿದರೂ ಜಗಳ ಮಾತ್ರ ಇನ್ನೂ ಮುಗಿದಿಲ್ಲ. ಇತ್ತೀಚೆಗೆ ಟ್ವಿಟರ್‌ನಲ್ಲಿ ಬಡಿದಾಡಿಕೊಂಡಿದ್ದ ಶಾಹಿದ್ ಆಫ್ರಿದಿ ಇದೀಗ ಗಂಭೀರ್ ವಿರುದ್ಧ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಹಾಗೂ ಧೋನಿಗೆ ನಟಿ ಉರ್ವಶಿ ರೌಟೆಲಾ ಟ್ವೀಟ್
ಪಾಕಿಸ್ತಾನ ವಿರುದ್ದದ ವಿಶ್ವಕಪ್ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕು ಅನ್ನೋ ಗಂಭೀರ್ ಹೇಳಿಕೆಗೆ ಶಾಹಿದ್ ಆಫ್ರಿದಿ ರೊಚ್ಚಿಗೆದ್ದಿದ್ದಾರೆ. ಗಂಭೀರ್ ಒರ್ವ ಮೂರ್ಖ. ಏನು ಮಾತನಾಡಬೇಕು ಅನ್ನೋದೇ ತಿಳಿದಿಲ್ಲ. ಶಿಕ್ಷಣ ಪಡೆದರೂ ತಲೆಯಲ್ಲಿ ಏನೂ ಇಲ್ಲ ಎಂದು ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ: ಭರ್ಜರಿಯಾಗಿ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ ಗಂಭೀರ್
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಜೂನ್ 16 ರಂದು ಮುಖಾಮುಖಿಯಾಗಲಿದೆ. ಆದರೆ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ದದ ಎಲ್ಲಾ ವ್ಯವಹಾರ ನಿರ್ಬಂಧಿಸಲು ಒತ್ತಡ ಕೇಳಿಬಂದಿತ್ತು. ಇದೇ ವೇಳೆ ಗಂಭೀರ್, ಪಾಕಿಸ್ತಾನ ಜೊತೆಗಿನ ವಿಶ್ವಕಪ್ ಪಂದ್ಯವನ್ನೂ ಬಹಿಷ್ಕರಿಸಬೇಕು ಎಂದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.