ವಿಶ್ವಕಪ್ ಟೂರ್ನಿಗೆ ಪ್ರಾಥಮಿ ತಂಡ ಪ್ರಕಟಿಸಿದ್ದ ಪಾಕಿಸ್ತಾನ ಇದೀಗ ಅಂತಿಮ ತಂಡ ಪ್ರಕಟಿಸಿದೆ. ಮೂರು ಬದಲಾವಣೆ ಮಾಡಿರುವ ಪಾಕ್ ಆಯ್ಕೆ ಸಮಿತಿ ಬಲಿಷ್ಠ ತಂಡ ಪ್ರಕಟಿಸಿದೆ.
ಇಸ್ಲಾಮಾಬಾದ್(ಮೇ.20): ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ಈಗಾಗಲೇ ಪ್ರಾಥಮಿ ತಂಡ ಪ್ರಕಟಿಸಿತ್ತು. ಇಷ್ಟೇ ಅಲ್ಲ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಅಂತಿಮ ತಂಡ ಪ್ರಕಟಿಸಿದ್ದು, ವೇಗಿ ಮೊಹಮ್ಮದ್ ಅಮೀರ್ ಹಾಗೂ ವಹಾಬ್ ರಿಯಾಜ್‌ಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಪಾಕಿಸ್ತಾನ ತಂಡ ಮತ್ತಷ್ಟು ಬಲಿಷ್ಠವಾಗಿದೆ.
ಇದನ್ನೂ ಓದಿ: ಕ್ಯಾನ್ಸರ್‌ಗೆ ಸ್ಟಾರ್ ಕ್ರಿಕೆಟಿಗನ 2 ವರ್ಷದ ಮಗಳು ಬಲಿ-ಮುಗಿಲು ಮುಟ್ಟಿದೆ ಆಕ್ರಂದನ!
undefined
ಅಂತಿಮ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ. ಅಬಿದ್ ಆಲಿ, ಫಾಹಿಮ್ ಅಶ್ರಫ್ ಹಾಗೂ ಜುನೈದ್ ಖಾನ್‌ಗೆ ಗೇಟ್ ಪಾಸ್ ನೀಡಲಾಗಿದ್ದು, ಮೊಹಮ್ಮದ್ ಅಮೀರ್, ವಹಾಬ್ ರಿಯಾಝ್ ಹಾಗೂ ಆಸಿಫ್ ಆಲಿಗೆ ಸ್ಥಾನ ನೀಡಲಾಗಿದೆ. ಮೊಹಮ್ಮದ್ ಆಮೀರ್ ಸದ್ಯ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಬೌಲರ್ ಆಗಿ ಮಿಂಚಿದ್ದಾರೆ. ಇನ್ನು ವಹಾಬ್ ರಿಯಾಝ್ 2011 ಹಾಗೂ 2015ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಸದಸ್ಯರಾಗಿದ್ದರು.
ಇದನ್ನೂ ಓದಿ: 5 ವರ್ಷದಲ್ಲಿ ಒಂದು ಚಾನ್ಸ್- ಮೊದಲ ಎಸೆತದಲ್ಲೇ ಸಿಕ್ಸ್- ಸಿದ್ದೇಶ್ ರೋಚಕ ಸ್ಟೋರಿ!
ಅಬಿದ್ ಆಲಿ ಬದಲು ಆಯ್ಕೆಯಾಗಿರುವ ಆಸಿಫ್ ಆಲಿ, ಇತ್ತೀಚೆಗೆ ತಮ್ಮ 2 ವರ್ಷದ ಮಗಳನ್ನ ಕಳೆದುಕೊಂಡಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಸಿಫ್ ಆಲಿ ಪುತ್ರಿ ಲಂಡನ್ ಆಸ್ಪತ್ರೆಯಲ್ಲಿ ಅಸುನೀಗಿದ್ದಳು. ಈ ಮೂರು ಬದಲಾವಣೆ ಮಾಡೋ ಮೂಲಕ ಪಾಕಿಸ್ತಾನ ಅಂತಿಮ ತಂಡ ಪ್ರಕಟಸಿದೆ.
Pakistan finalises make-up of World Cup squadhttps://t.co/I4xFbvC5sF pic.twitter.com/tTdA8iC6Pj
— Pakistan Cricket (@TheRealPCB)