ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಎಕಟೆರಿನ್ಬರ್ಗ್:(ಸೆ.18): ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಅಮಿತ್ ಪಂಗಲ್ ಸೇರಿದಂತೆ ಭಾರತದ ನಾಲ್ವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ವಿಶ್ವ ಬಾಕ್ಸಿಂಗ್ ಕೂಟ: ಭಾರತೀಯರಿಗೆ ಯಶಸ್ಸು
ಮಂಗಳವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಏಷ್ಯನ್ ಚಾಂಪಿಯನ್ ಅಮಿತ್ ಪಂಗಲ್ (52 ಕೆ.ಜಿ), ಮನೀಶ್ ಕೌಶಿಕ್ (63 ಕೆ.ಜಿ), ಸಂಜೀತ್ (91 ಕೆ.ಜಿ) ಹಾಗೂ ಕವೀಂದರ್ ಬಿಶ್ತ್ (57 ಕೆ.ಜಿ) ಗೆಲುವು ಸಾಧಿಸಿದರು. ಅಮಿತ್, ಟರ್ಕಿಯ ಬತ್ಹೂನ್ ಸಿಟ್ಸಿ ವಿರುದ್ಧ 5-0 ಯಲ್ಲಿ ಗೆಲುವು ಸಾಧಿಸಿದರೆ, ಮನೀಶ್ ಕೌಶಿಕ್ ಮಂಗೋಲಿಯಾದ ಚಿಂಜೊರಿಂಗ್ ಬಾಟರ್ಸುಖ್ ಎದುರು 5-0ಯಲ್ಲಿ ಜಯ ಪಡೆದರು.
ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು
ಉಜ್ಬೇಕಿಸ್ತಾನದ ಸಂಜಾರ್ ಟರ್ಸುನೊವ್ ವಿರುದ್ಧ ಸಂಜೀತ್ 3-2 ರಲ್ಲಿ ಗೆದ್ದರೆ, ಕವೀಂದರ್ ಫಿನ್‌ಲ್ಯಾಂಡ್‌ನ ಅರ್ಸಲನ್ ಖಟೆವ್ ಎದುರು 3-2ರಲ್ಲಿ ಗೆದ್ದು ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದರು. ಈ ನಾಲ್ವರು ಇನ್ನೊಂದು ಪಂದ್ಯ ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ಕನಿಷ್ಠ ಕಂಚಿನ ಪದಕ ಖಚಿತವಾಗಲಿದೆ.