ಮಹಿಳಾ ಟಿ20 ರ‍್ಯಾಂಕಿಂಗ್ ಪ್ರಕಟ-ಭಾರತ ವನಿತೆಯರ ಸಾಧನೆ!

By Web DeskFirst Published Nov 28, 2018, 10:17 AM IST
Highlights

ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ ವನಿತೆಯರು ರ‍್ಯಾಂಕಿಂಗ್ನಲ್ಲಿ ಸಾಧನೆ ಮಾಡಿದ್ದಾರೆ.  ಇಲ್ಲಿದೆ ಮಹಿಳಾ ಟಿ20 ರ‍್ಯಾಂಕಿಂಗ್ ವಿವರ.

ದುಬೈ(ನ.28): ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ 3 ಸ್ಥಾನಗಳ ಏರಿಕೆ ಕಂಡಿದ್ದಾರೆ. ಹರ್ಮನ್‌ಪ್ರೀತ್‌ ಸದ್ಯ 3ನೇ ಸ್ಥಾನ ಪಡೆದಿದ್ದಾರೆ. ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಾಸ್‌ 9 ಸ್ಥಾನಗಳ ಏರಿಕೆ ಕಂಡು ವೃತ್ತಿಬದುಕಿನ ಶ್ರೇಷ್ಠ 6ನೇ ಸ್ಥಾನದಲ್ಲಿದ್ದರೆ, ಸ್ಮೃತಿ ಮಂಧನಾ 7 ಸ್ಥಾನಗಳ ಜಿಗಿತದೊಂದಿಗೆ 10ನೇ ಸ್ಥಾನ ಪಡೆದಿದ್ದಾರೆ.

ಮಹಿಳಾ ಬಿಬಿಎಲ್‌ಗೆ ಹರ್ಮನ್‌ಪ್ರೀತ್‌, ಸ್ಮೃತಿ
ಭಾರತದ ಟಿ20 ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಉಪನಾಯಕಿ ಸ್ಮೃತಿ ಮಂಧನಾ, 4ನೇ ಆವೃತ್ತಿಯ ಮಹಿಳಾ ಬಿಗ್‌ಬ್ಯಾಶ್‌ ಲೀಗ್‌ನಲ್ಲಿ ಆಡಲಿದ್ದಾರೆ. ಡಿ.1ರಿಂದ ಜ.26, 2019ರ ವರೆಗೂ ಟೂರ್ನಿ ನಡೆಯಲಿದ್ದು, ಹರ್ಮನ್‌ಪ್ರೀತ್‌ರನ್ನು ಸಿಡ್ನಿ ಥಂಡರ್‌ ತಂಡ ಉಳಿಸಿಕೊಂಡಿದೆ. 

ಸ್ಮೃತಿ, ಹೊಬಾರ್ಟ್‌ ಹರಿಕೇನ್ಸ್‌ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಳೆದ ಆವೃತ್ತಿಯಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡದಲ್ಲಿದ್ದ ಸ್ಮತಿ ಗಾಯದ ಸಮಸ್ಯೆಯಿಂದಾಗಿ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಆದರೆ ಹರ್ಮನ್‌ಪ್ರೀತ್‌ 12 ಪಂದ್ಯಗಳಲ್ಲಿ 296 ರನ್‌ ಸಿಡಿಸಿ, ತಂಡದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದರು.

click me!