ಭಾರತ ಟಿ20 ತಂಡ​ದಿಂದ ಮಿಥಾಲಿ ರಾಜ್‌ ಹೊರಕ್ಕೆ?

Published : Aug 28, 2019, 10:25 AM ISTUpdated : Aug 28, 2019, 10:35 AM IST
ಭಾರತ ಟಿ20 ತಂಡ​ದಿಂದ ಮಿಥಾಲಿ ರಾಜ್‌ ಹೊರಕ್ಕೆ?

ಸಾರಾಂಶ

ಹಿರಿಯರಿಗೆ ಗೇಟ್ ಪಾಸ್ ನೀಡುತ್ತಿರುವ ಪರಿಪಾಠ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೂ ಎಂಟ್ರಿ ಕೊಟ್ಟಿದೆಯಾ? ಅನ್ನೋ ಅನುಮಾನ ಕಾಡತೊಡಗಿದೆ. ಟಿ20 ತಂಡದಿಂದ ಮಿಥಾಲಿ ರಾಜ್‌ಗೆ ಕೊಕ್ ನೀಡ್ತಾರಾ? ಈ ಪ್ರಶ್ನೆ ಇದೀಗ ಮಹಿಳಾ ಕ್ರಿಕೆಟ್ ವಲಯದಲ್ಲಿ ಎದ್ದಿದೆ.

ನವ​ದೆ​ಹ​ಲಿ(ಆ.28): ಭಾರತ ಮಹಿಳಾ ಕ್ರಿಕೆಟ್‌ ತಂಡದ ಹಿರಿಯ ಆಟ​ಗಾರ್ತಿ ಮಿಥಾಲಿ ರಾಜ್‌ ಮುಂಬ​ರುವ ದಕ್ಷಿಣ ಆಫ್ರಿಕಾ ವಿರುದ್ಧ ಸರ​ಣಿಗೆ ತಾವು ಆಯ್ಕೆಗೆ ಲಭ್ಯ​ರಿ​ರು​ವು​ದಾಗಿ ತಿಳಿ​ಸಿ​ದ್ದಾರೆ. ಆದರೆ ಸೆ.5ರಂದು ನಡೆ​ಯಲಿ​ರುವ ಆಯ್ಕೆ ಸಮಿತಿ ಸಭೆಯಲ್ಲಿ , ಬಿಸಿ​ಸಿಐ ಆಯ್ಕೆಗಾರರು ಮಿಥಾ​ಲಿ​ಯನ್ನು ತಂಡಕ್ಕೆ ಆಯ್ಕೆ ಮಾಡು​ತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಯುವ ಆಟಗಾರ್ತಿಯರಿಗೆ ಅವಕಾಶ ನೀಡೋ ನಿಟ್ಟಿನಲ್ಲಿ ಆಯ್ಕೆ ಸಮಿತಿ ಮಿಥಾಲಿಗೆ ಕೊಕ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ, ಧೋನಿ ಹಿಂದಿಕ್ಕಿದ ಮಿಥಾಲಿ ರಾಜ್!

ಮುಂದಿನ ವರ್ಷ ಟಿ20 ವಿಶ್ವಕಪ್‌ ಇರುವ ಕಾರಣ, ಯುವ ಆಟ​ಗಾರ್ತಿಯ​ರಿಗೆ ಅವ​ಕಾಶ ನೀಡುವ ಸಲು​ವಾಗಿ ಮಿಥಾ​ಲಿ​ಯನ್ನು ಕೈಬಿ​ಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲ​ಗಳು ತಿಳಿ​ಸಿ​ವೆ. ದ. ಆಫ್ರಿಕಾ ವಿರುದ್ದ 5 ಪಂದ್ಯ​ಗಳ ಸರಣಿ ಸೆ.24ರಿಂದ ಆರಂಭ​ಗೊ​ಳ್ಳ​ಲಿದೆ. ಮುಂದಿನ ವರ್ಷ ಫೆಬ್ರ​ವ​ರಿ-ಮಾರ್ಚ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ಟಿ20 ವಿಶ್ವ​ಕಪ್‌ ನಡೆ​ಯ​ಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!
IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!