ಟೆನಿಸ್ ದಿಗ್ಗಜ ಫೆಡರರ್ ಕ್ರಿಕೆಟ್ ಕೌಶಲ್ಯಕ್ಕೆ ಸಚಿನ್ ತೆಂಡೂಲ್ಕರ್ ಪ್ರಶಂಸೆ

By Suvarna NewsFirst Published Jul 10, 2018, 7:02 PM IST
Highlights

ಟೆನಿಸ್ ದಿಗ್ಗಜ ರೋಜರ್ ಫೆಡರರ್‌ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ಸಚಿನ್ ತೆಂಡೂಲ್ಕರ್ ನಡುವಿನ ಬಾಂಧವ್ಯ ಇಂದು ನಿನ್ನೆಯದಲ್ಲ. ದಶಗಳಿಂದ ಸಚಿನ್ ಹಾಗೂ ಫೆಡರರ್ ಸ್ನೇಹಿತರು. ಇದೀಗ ಫೆಡರರ್ ತಮ್ಮ ಕ್ರಿಕೆಟ್ ಕೌಶಲ್ಯ ತೋರಿಸೋ ಮೂಲಕ, ಸಚಿನ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಫೆಡರರ್ ಕ್ರಿಕೆಟ್ ಸ್ಕಿಲ್ಸ್‌ಗೆ ಸಚಿನ್ ಹೇಳಿದ್ದೇನು?ಇಲ್ಲಿದೆ ವಿವರ.
 

ಮುಂಬೈ(ಜು.10): ಟೆನಿಸ್ ದಿಗ್ಗಜ, ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ವಿಂಬಲ್ಡನ್ ಟೂರ್ನಿಯಲ್ಲಿ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸೋ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಫೆಡರರ್ ಕ್ರಿಕೆಟ್ ಸ್ಸಿಲ್ಸ್‌ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರೋಜರ್ ಫೆಡರರ್ ಅವರ ಕೈ ಮತ್ತು ಕಣ್ಣಿನ ಕಾರ್ಡಿನೇಶನ್ ಅತ್ಯುತ್ತಮ. 9ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ಬಳಿಕ ಕ್ರಿಕೆಟ್ ಹಾಗೂ ಟೆನಿಸ್ ನೋಟ್ಸ್‌ಗಳನ್ನ ಬದಲಾಯಿಸೋಣ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

 

As always, great hand-eye co-ordination. , let’s exchange notes on cricket and tennis after you win your 9th title 😜👍 https://t.co/2TNUHGn1zK

— Sachin Tendulkar (@sachin_rt)

 

ವಿಂಬಲ್ಡ್ ಟೂರ್ನಿಯಲ್ಲಿ ರೋಜರ್ ಫೆಡರರ್, ಎದುರಾಳಿಯ ಬಾರಿಸಿದ ಚೆಂಡಿಗೆ ಕ್ರಿಕೆಟ್ ಶೈಲಿಯಲ್ಲಿ ಉತ್ತರ ನೀಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

 

Ratings for 's forward defence, ? pic.twitter.com/VVAt2wHPa4

— Wimbledon (@Wimbledon)

;

ಇದನ್ನು ಓದಿ: ರೋಜರ್ ಫೆಡರರ್‌ಗೆ ನಂ.1 ಟೆಸ್ಟ್ ಬ್ಯಾಟ್ಸ್‌ಮನ್ ರ‍್ಯಾಂಕ್ ನೀಡಿದ ಐಸಿಸಿ

click me!