Wimbledon: ಜೋಕೋವಿಚ್ 11ನೇ ಬಾರಿಗೆ ವಿಂಬಲ್ಡನ್‌ ಸೆಮೀಸ್‌ಗೆ ಲಗ್ಗೆ

By Suvarna NewsFirst Published Jul 6, 2022, 10:11 AM IST
Highlights

* ವಿಂಬಲ್ಡನ್ ಗ್ತ್ಯಾನ್‌ಸ್ಲಾಂನಲ್ಲಿ ಸೆಮಿಫೈನಲ್ ಪ್ರವೇಶಿಸಿದ ನೋವಾಕ್ ಜೋಕೋವಿಚ್
* 11ನೇ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂನಲ್ಲಿ ಜೋಕೋ ಸೆಮೀಸ್‌ಗೆ ಲಗ್ಗೆ
* 21ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಟೆನಿಸಿಗ

ಲಂಡನ್‌(ಜು.06): 20 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, ಸರ್ಬಿಯಾದ ನೋವಾಕ್‌ ಜೋಕೋವಿಚ್‌ (Novak Djokovic) ವಿಂಬಲ್ಡನ್‌ ಟೆನಿಸ್‌ ಟೂರ್ನಿಯಲ್ಲಿ 11ನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದು, 7ನೇ ಚಾಂಪಿಯನ್‌ ಪಟ್ಟದತ್ತ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕಳೆದ ಮೂರು ಆವೃತ್ತಿಗಳಲ್ಲಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ 3ನೇ ಶ್ರೇಯಾಂಕಿತ ಜೋಕೋವಿಚ್‌ ಮಂಗಳವಾರ 3 ಗಂಟೆ 25 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ರೋಚಕ ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಇಟಲಿಯ ಜನಿಕ್‌ ಸಿನ್ನರ್‌ ವಿರುದ್ಧ 5-​7, 2​-6, 6-​3, 6-​3, 6-​2 ಅಂತರದಲ್ಲಿ ಗೆಲುವು ಸಾಧಿಸಿದರು. ಮೊದಲ ಬಾರಿ ಸೆಮೀಸ್‌ ತಲುಪುವ ಸಿನ್ನರ್‌ ಕನಸು ಭಗ್ನಗೊಂಡಿತು.

ಇನ್ನು, ಈ ವರ್ಷದ 3ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಗ್ರ ಶ್ರೇಯಾಂಕಿತ ಟೆನಿಸಿಗ ರಾಫೆಲ್‌ ನಡಾಲ್‌ (Rafael Nadal) ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಟೂರ್ನಿಯಲ್ಲಿ 3ನೇ ಬಾರಿ ಚಾಂಪಿಯನ್‌ ಆಗುವ ನಿರೀಕ್ಷೆಯಲ್ಲಿರುವ ಸ್ಪೇನ್‌ನ ನಡಾಲ್‌ ಸೋಮವಾರ 4ನೇ ಸುತ್ತಿನ ಕಾದಾಟದಲ್ಲಿ ನೆದರ್ಲೆಂಡ್‌್ಸನ ಬೊಟಿಕ್‌ ಜಾಂಡ್‌ಶುಪ್‌ ವಿರುದ್ಧ 6​-4, 6-​2, 7-​6(8-6) ಸೆಟ್‌ಗಳಲ್ಲಿ ಗೆದ್ದು 8ನೇ ಬಾರಿ ಅಂತಿಮ 8ರ ಘಟ್ಟ ತಲುಪಿದರು. ಒಟ್ಟಾರೆ 47ನೇ ಬಾರಿ ಗ್ರ್ಯಾನ್‌ಸ್ಲಾಂ ಕ್ವಾರ್ಟರ್‌ಗೆ ಲಗ್ಗೆ ಇಟ್ಟಿರುವ ಅವರು, 14ನೇ ಶ್ರೇಯಾಂಕಿತ ಅಮೆರಿಕದ ಟೇಲರ್‌ ಪ್ರಿಟ್ಜ್‌ ವಿರುದ್ಧ ಸೆಣಸಾಡಲಿದ್ದಾರೆ.

ಬಡೋಸಾಗೆ ಹಾಲೆಪ್‌ ಆಘಾತ

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.4 ಸ್ಪೇನ್‌ನ ಪಾಲಾ ಬಡೋಸಾ ಅವರು 4ನೇ ಸುತ್ತಲ್ಲಿ ಅಭಿಯಾನ ಕೊನೆಗೊಳಿಸಿದರು. ಅವರು 2019ರ ವಿಂಬಲ್ಡನ್‌ (Wimbledon 2022) ಚಾಂಪಿಯನ್‌, 14ನೇ ಶ್ರೇಯಾಂಕಿತ ರೊಮಾನಿಯಾದ ಸಿಮೋನಾ ಹಾಲೆಪ್‌ ವಿರುದ್ಧ 6-1, 6-1 ನೇರ ಸೆಟ್‌ಗಳಿಂದ ಪರಾಭವಗೊಂಡರು. ಆದರೆ 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಮೊದಲ ಸುತ್ತಲ್ಲೇ ಸೋಲುಣಿಸಿದ್ದ ಫ್ರಾನ್ಸ್‌ನ ಹಾರ್ಮೊನಿ ತಾನ್‌ ಸವಾಲು 4ನೇ ಸುತ್ತಲ್ಲಿ ಕೊನೆಗೊಂಡಿತು. ಅವರು ಸೋಮವಾರ ಅಮೆರಿಕದ ಅಮಂಡಾ ಅನಿಸಿಮೋವಾ ವಿರುದ್ಧ 6-2, 6-3 ನೇರ ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಸಿಂಧು ಬಳಿ ಕ್ಷಮೆ ಕೇಳಿದ ಬ್ಯಾಡ್ಮಿಂಟನ್‌ ಏಷ್ಯಾ ಸಮಿತಿ

ನವದೆಹಲಿ: ಇದೇ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದ ಏಷ್ಯಾ ಚಾಂಪಿಯನ್‌ಶಿಪ್‌ ವೇಳೆ ರೆಫ್ರಿಯಿಂದ ಆದ ತಪ್ಪಿಗೆ ಭಾರತದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಬಳಿ ಬ್ಯಾಡ್ಮಿಂಟನ್‌ ಏಷ್ಯಾ ತಾಂತ್ರಿಕ ಸಮಿತಿ ಮುಖ್ಯಸ್ಥ ಚಿಯಾ ಶೆನ್‌ ಚೆನ್‌ ಕ್ಷಮೆಯಾಚಿಸಿದ್ದಾರೆ. ಜಪಾನ್‌ನ ಅಕನೆ ಯಮಗುಚಿ ವಿರುದ್ಧದ ಸೆಮಿಫೈನಲ್‌ ಪಂದ್ಯದ ವೇಳೆ ಸಿಂಧು ಸವ್‌ರ್‍ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ರೆಫ್ರಿ ಎದುರಾಳಿಗೆ ಒಂದು ಅಂಕ ನೀಡಿದ್ದರು. 

Wimbledon: 13ನೇ ಬಾರಿ ಜೋಕೋವಿಚ್‌ ವಿಂಬಲ್ಡನ್ ಕ್ವಾರ್ಟರ್‌ಗೆ ಲಗ್ಗೆ

ಯಮಗುಚಿ ಸರ್ವ್‌ ಸ್ವೀಕರಿಸಲು ಇನ್ನೂ ಸಿದ್ಧರಾಗಿಲ್ಲ, ನನ್ನಿಂದ ತಪ್ಪಾಗಿಲ್ಲ ಎಂದು ಸಿಂಧು ಪ್ರತಿಭಟಿಸಿದ್ದರು. ಆದರೆ ರೆಫ್ರಿ ಭಾರತೀಯ ಆಟಗಾರ್ತಿಯ ಮಾತು ಕೇಳಿರಲಿಲ್ಲ. ಮೊದಲ ಗೇಮ್‌ ಗೆದ್ದಿದ್ದ ಸಿಂಧು, 2ನೇ ಗೇಮ್‌ನಲ್ಲಿ 14-11ರಿಂದ ಮುಂದಿದ್ದಾಗ ಈ ಘಟನೆ ನಡೆಯಿತು. ಕಣ್ಣೀರಿಡುತ್ತ ಆಟ ಮುಂದುವರಿಸಿದ ಸಿಂಧು, ಏಕಾಗ್ರತೆ ಕಳೆದುಕೊಂಡು 19-21ರಲ್ಲಿ ಗೇಮ್‌ ಸೋತರು. ಬಳಿಕ ಪಂದ್ಯವನ್ನೂ ಕೈಚೆಲ್ಲಿದ್ದರು.
 

click me!