ಧೋನಿ-ಮನೀಶ್ ಪಾಂಡೆ ಇಬ್ಬರಲ್ಲಿ ನಂ.4ನೇ ಕ್ರಮಾಂಕ ಯಾರಿಗೆ?

By Web DeskFirst Published Sep 17, 2018, 4:21 PM IST
Highlights

ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನ ಪರೀಕ್ಷಿಸಲಿದೆ. ಸದ್ಯ 4ನೇ ಕ್ರಮಾಂಕದ ರೇಸ್‌ನಲ್ಲಿ ಎಂ ಎಸ್ ಧೋನಿ ಹಾಗೂ ಕನ್ನಡಿಗ ಮನೀಶ್ ಪಾಂಡೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರಿಗೆ ಸಿಗಲಿದೆ ಸ್ಥಾನ? ಇಲ್ಲಿದೆ.

ದುಬೈ(ಸೆ.17): ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ತನ್ನ ಹೋರಾಟವನ್ನ ನಾಳೆಯಿಂದ(ಸೆ.18) ಆರಂಭಿಸಲಿದೆ. ಹಾಂಕ್ ಕಾಂಗ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕ್ರಮಾಂಕ ಪರೀಕ್ಷಿಸಲಿದೆ.

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಹಲವು ಆಯ್ಕೆಗಳಿದೆ. ಆದರೆ ಯಾರೂ ಕೂಡ ಖಾಯಂ ಆಗಿಲ್ಲ. ಅದರಲ್ಲೂ 4ನೇ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಅನ್ನೋದು ಸದ್ಯದ ಕುತೂಹಲ. ಎಂ. ಎಸ್ ಧೋನಿ ಅಥವಾ ಕನ್ನಡಿಗ ಮನೀಶ್ ಪಾಂಡೆ ಇಬ್ಬರಲ್ಲಿ ಯಾರಿಗೆ 4ನೇ ಕ್ರಮಾಂಕ ಅನ್ನೋ ಚರ್ಚೆ ಶುರುವಾಗಿದೆ.

ಟೀಂ ಇಂಡಿಯಾ ಗೊಂದಲಕ್ಕೆ ಮಾಜಿ ವೇಗಿ ಜಹೀರ್ ಖಾನ ಸಲಹೆ ನೀಡಿದ್ದಾರೆ. 4ನೇ ಕ್ರಮಾಂಕದಲ್ಲಿ ಭಾರತ, ಕೆಎಲ್ ರಾಹುಸ್ ಸುರೇಶ್ ರೈನಾ, ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರನ್ನ ಪರೀಕ್ಷಿಸಿಸಿದೆ. ಆದರೆ ಎಂ ಎಸ್ ಧೋನಿಯೇ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಎಂದು ಜಹೀರ್ ಹೇಳಿದ್ದಾರೆ.

ತಂಡದ ಜವಾಬ್ದಾರಿ ಅರಿತು ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ಧೋನಿಗಿದೆ. ಸಂಕಷ್ಟದ ಸಂದರ್ಭದಲ್ಲೂ ಧೋನಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಕೂಡ ಕಾಡಲಿದೆ.  ಹೀಗಾಗಿ ಧೋನಿ 4ನೇ ಕ್ರಮಾಂಕಕ್ಕೆ ಸೂಕ್ತ ಎಂದು ಜಹೀರ್ ಹೇಳಿದ್ದಾರೆ.

click me!