ಗ್ರಾಮೀಣ ಕ್ರೀಡೆಗೆ ರಾಜ್ಯ ಮೈತ್ರಿ ಸರ್ಕಾರದಿಂದ ಅಪಮಾನ?! ಹಳ್ಳಿ ಸೊಗಡಿನ ಆಟವೇ ಈ ಸಲದ ದಸರಾದಲ್ಲಿ ಕಾಣಿಸಲ್ವಾ?! ನಾಡಹಬ್ಬದಲ್ಲಿ ಬಾಲ್ ಬ್ಯಾಡ್ಮಿಟನ್ ಸ್ಪರ್ಧೆಗೆ ಗೇಟ್ ಪಾಸ್
ಬೆಂಗಳೂರು(ಸೆ.17): ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದ ಅಪ್ಪಟ ಗ್ರಾಮೀಣ ಕ್ರೀಡೆಯಿದು. 156 ವರ್ಷಗಳ ಇತಿ ಹಾಸ ಹೊಂದಿರುವ ದೇಸಿಯ ಸೊಗಡಿನ ಆಟವಿದು. ಅದರಲ್ಲೂ ನಾಡಹಬ್ಬ ಮೈಸೂರು ದಸರಾದಲ್ಲಿ ಹೆಚ್ಚಿನ ಜನಪ್ರಿಯ ಕ್ರೀಡೆಯಲ್ಲಿ ಇದೂ ಕೂಡಾ ಒಂದು.
ಆದರೆ ರಾಜ್ಯ ಸರ್ಕಾರ ಹಳ್ಳಿ ಸೊಗಡಿನ ಕ್ರೀಡೆಗಳಿಗೆ ಗೇಟ್ ಪಾಸ್ ನೀಡಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ದಸರಾದ ಗ್ರಾಮೀಣ ಕ್ರೀಡಾ ಸ್ಪರ್ಧೆಯಿಂದ ಬಾಲ್ ಬ್ಯಾಡ್ಮಿಟನ್, ಖೋಖೋ, ಥ್ರೋ ಬಾಲ್ ಸ್ಪರ್ಧೆಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಹೌದು, ನಾಡಹಬ್ಬ ಮೈಸೂರು ದಸರಾದಲ್ಲಿ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೇ ಪ್ರಮುಖ ಆಕರ್ಷಣೆಯಾಗಿರುತ್ತವೆ. ದೂರದ ಜಿಲ್ಲೆ, ರಾಜ್ಯಗಳಿಂದ ಹಳ್ಳಿ ಸೊಗಡಿನ ಕ್ರೀಡಾಕೂಟವನ್ನು ನೋಡಲು ಲಕ್ಷಾಂತರ ಮಂದಿ ದಸರಾದಲ್ಲಿ ಭಾಗಿಯಾಗ್ತಾರೆ. ಆದರೆ ರಾಜ್ಯ ದೋಸ್ತಿ ಸರ್ಕಾರ ಈ ಸಲ ಜನಪ್ರಿಯ ಕ್ರೀಡೆಯೊಂದಕ್ಕೆ ಗೇಟ್ ಪಾಸ್ ನೀಡಲು ಮುಂದಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
ಈ ವರ್ಷ ನಡೆಯುವ ಮೈಸೂರು ದಸರಾ ಹಬ್ಬದಲ್ಲಿ ಬಾಲ್ ಬ್ಯಾಡ್ಮಿಟನ್, ಖೋಖೋ, ಥ್ರೋ ಬಾಲ್ ಸ್ಪರ್ಧೆಯನ್ನು ನಡೆಸದಿರಲು ಸರ್ಕಾರ ಮುಂದಾಗಿದೆಯಂತೆ. ಇದು ಕ್ರೀಡಾಪಟುಗಳ ಅಸಮಾಧಾನಕ್ಕೆ ಕಾರಣವಾಗಿದೆ.
1956ರಿಂದಲೂ ಮೈಸೂರು ದಸರಾ ಹಬ್ಬದಲ್ಲಿ ಬಾಲ್ ಬ್ಯಾಡ್ಮಿಟನ್ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. 156 ವರ್ಷಗಳ ಇತಿಹಾಸವಿರುವ ಗ್ರಾಮೀಣ ಕ್ರೀಡೆಯನ್ನು ಸರ್ಕಾರ ಈ ಬಾರಿ ಕಡೆಗಣಿಸಿದೆ.
ಇದಕ್ಕೆ ಕಾರಣ ಈ ಸಲದ ಕ್ರೀಡಾಕೂಟದ ಜವಾಬ್ದಾರಿಯನ್ನು ಕರ್ನಾಟಕ ಒಲಂಪಿಕ್ ಸಮಿತಿಗೆ ನೀಡಿದ್ದು ಎನ್ನಲಾಗಿದೆ. ಕರ್ನಾಟಕ ಒಲಂಪಿಕ್ ಸಮತಿ ಹಲವು ದೇಸಿಯ ಕ್ರೀಡೆಯನ್ನು ದಸಾರ ಕ್ರೀಡಾಕೂಟದಿಂದ ತೆಗೆದು ಹಾಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾಳೆ ಬೆಂಗಳೂರಿನ ಯವನಿಕಾದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ತಮ್ಮ ಅಸಮಾಧಾನವನ್ನು ಕ್ರೀಡಾಪಟುಗಳು ಹಾಗೂ ಮಾಜಿ ಆಟಗಾರರು ಹೊರಹಾಕಲು ನಿರ್ಧರಿಸಿದ್ದಾರೆ.
ಹತ್ತಾರು ವರ್ಷಗಳಿಂದ ನಡೆದುಕೊಂಡು ಬರ್ತಿರುವ ಹಳ್ಳಿ ಸೊಗಡಿನ ಆಟಕ್ಕೆ ಸರ್ಕಾರ ಬ್ರೇಕ್ ಹಾಕುವ ಮೂಲಕ ಇಂತಹ ಕ್ರೀಡೆಗಳ ನಶಿಸಲು ತಾನೇ ಮುಂದಾಗುತ್ತಿದೇಯಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.