ಕಳೆದ ಗುರುವಾರ ಡಬ್ಲ್ಯುಎಫ್‌ಐಗೆ ಚುನಾವಣೆ ನಡೆದು, ಸಂಜಯ್ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಆದರೆ ನಿಯಮ ಪಾಲಿಸಿಲ್ಲ ಎಂದು ಭಾನುವಾರ ಸಮಿತಿಯನ್ನು ಸಚಿವಾಲಯ ಅಮಾನತುಗೊಳಿಸಿದ್ದು, ಬುಧವಾರ ಸ್ವತಂತ್ರ ಸಮಿತಿಯನ್ನು ನೇಮಿಸಿದೆ.
ನವದೆಹಲಿ(ಡಿ.29): ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್)ನ ಹೊಸ ಸಮಿತಿಯನ್ನು ಅಮಾನತುಗೊಳಿಸುವಾಗ ಕೇಂದ್ರ ಕ್ರೀಡಾ ಸಚಿವಾಲಯ ಕಾನೂನು ಪಾಲನೆ ಮಾಡಿಲ್ಲ ಎಂದು ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಸಂಜಯ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸುಳಿವು ನೀಡಿದ್ದಾರೆ.
ಈ ಬಗ್ಗೆ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರ ಆಪ್ತ ಸಂಜಯ್, ‘ಕುಸ್ತಿ ಸಂಸ್ಥೆಗೆ ಸಂವಿಧಾನ ಬದ್ಧವಾಗಿ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಆದರೆ ಸಮಿತಿಯನ್ನು ಅಮಾನತುಗೊಳಿಸುವ ಮುನ್ನ ಸಚಿವಾಲಯಯ ನಮ್ಮಲ್ಲಿ ವಿವರಣೆ ಕೇಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ. ಇದು ಸಂವಿಧಾನಕ್ಕೆ ವಿರುದ್ಧ. ಅಮಾನತು ವಿರುದ್ಧ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಅಮಾನತು ಹಿಂದಕ್ಕೆ ಪಡೆಯದಿದ್ದರೆ ಕಾನೂನಾತ್ಮಕ ಹೋರಾಟದ ಆಯ್ಕೆಯೂ ನಮ್ಮ ಮುಂದಿದೆ ಎಂದು ಎಚ್ಚರಿಸಿದ್ದಾರೆ.
undefined
ಬರೀ 9 ತಿಂಗಳಲ್ಲೇ 5 ಕೋಟಿಯ ಹೂಡಿಕೆಗೆ 27 ಕೋಟಿ ರಿಟರ್ನ್ಸ್ ಪಡೆದ ಸಚಿನ್ ತೆಂಡುಲ್ಕರ್!
ಕಳೆದ ಗುರುವಾರ ಡಬ್ಲ್ಯುಎಫ್‌ಐಗೆ ಚುನಾವಣೆ ನಡೆದು, ಸಂಜಯ್ ನೇತೃತ್ವದ ಸಮಿತಿ ಅಧಿಕಾರಕ್ಕೇರಿತ್ತು. ಆದರೆ ನಿಯಮ ಪಾಲಿಸಿಲ್ಲ ಎಂದು ಭಾನುವಾರ ಸಮಿತಿಯನ್ನು ಸಚಿವಾಲಯ ಅಮಾನತುಗೊಳಿಸಿದ್ದು, ಬುಧವಾರ ಸ್ವತಂತ್ರ ಸಮಿತಿಯನ್ನು ನೇಮಿಸಿದೆ.
ಪ್ರತಿಭಟನೆಯ ಹಿಂದೆ ಕಾಂಗ್ರೆಸ್: ಸಂಜಯ್
ಕುಸ್ತಿಪಟುಗಳು ಹೋರಾಟದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಸಂಜಯ್ ಸಿಂಗ್ ಹರಿಹಾಯ್ದಿದ್ದು, ಪ್ರಿಯಾಂಕಾ, ರಾಹುಲ್ ಗಾಂಧಿ ಬೇಟಿ ಬಳಿಕ ಕುಸ್ತಿಪಟುಗಳ ಹೋರಾಟದ ಹಿಂದೆ ಯಾರಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. ‘ಕಾಂಗ್ರೆಸ್, ಎಡಪಕ್ಷಗಳ ಬೆಂಬಲ ಹಾಗೂ ಟೂಲ್‌ಕಿಟ್ ಭಾಗವಾಗಿ ಬಜರಂಗ್, ಸಾಕ್ಷಿ, ವಿನೇಶ್ ಹೋರಾಟ ಮಾಡುತ್ತಿದ್ದಾರೆ. ಅವರೆಲ್ಲರೂ ರಾಜಕೀಯ ಪಕ್ಷಗಳ ಮಡಿಲಲ್ಲಿ ಆಟವಾಡುತ್ತಿದ್ದಾರೆ. ಈ ಮೂವರನ್ನು ಹೊರತುಪಡಿಸಿ ಹೋರಾಟ ನಡೆಸುತ್ತಿರುವ 4ನೇ ಕುಸ್ತಿಪಟುವನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತರಿಗೆ ಕಿರಿಯ ಕುಸ್ತಿಪಟುಗಳು ಯಶಸ್ಸು ಸಾಧಿಸುವುದನ್ನು ಸಹಿಸುತ್ತಿಲ್ಲ ಎಂದಿದ್ದಾರೆ.
ಡೇವಿಸ್ ಕಪ್ ಟೆನಿಸ್‌ಗಾಗಿ ಪಾಕ್‌ಗೆ ಹೋಗಲ್ಲ ಭಾರತ?
ನವದೆಹಲಿ(ಡಿ.29): 2024ರ ಫೆ.3 ಮತ್ತು 4ಕ್ಕೆ ನಿಗದಿಯಾಗಿರುವ ಡೇವಿಸ್ ಕಪ್ ವಿಶ್ವ ಗುಂಪು-1 ಪ್ಲೇ ಆಫ್ ಪಂದ್ಯವಾಡಲು ಭಾರತ ಟೆನಿಸ್ ತಂಡ ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತ ತಂಡ ಪಾಕ್‌ಗೆ ತೆರಳುವ ಬಗ್ಗೆ ಭಾರತೀಯ ಟೆನಿಸ್ ಸಂಸ್ಥೆ(ಎಐಟಿಎ) ಈಗಾಗಲೇ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ಸಲಹೆ ಕೇಳಿದೆ. ಆದರೆ ಸಚಿವಾಲಯ ಈ ವರೆಗೂ ಉತ್ತರಿಸಿಲ್ಲ.
ಸರ್ಕಾರದಿಂದ ಅನುಮತಿ ಸಿಗುವ ಬಗ್ಗೆ ಇನ್ನೂ ಸ್ಪಷ್ಟನೆ ದೊರಕದ ಹಿನ್ನೆಲೆಯಲ್ಲಿ ಭಾರತ ತಂಡ ಪಾಕ್‌ಗೆ ತೆರಳುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತಕ್ಕೆ ಪಾಕ್‌ಗೆ ತೆರಳಲೇ ಬೇಕಿದ್ದು, ಅಲ್ಲಿಗೆ ತೆರಳದೆ ಪಂದ್ಯ ಬಿಟ್ಟುಕೊಟ್ಟರೆ ಭಾರತ ವಿಶ್ವ ಗುಂಪು-2ಗೆ ಹಿಂಬಡ್ತಿ ಪಡೆಯಲಿದೆ.