ಪಂದ್ಯದ ನಡುವೆ ಜೋಡಿ ಮೇಲೆ ಕ್ಯಾಮೆರಾ ಕಣ್ಮು, ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ ಕಪಲ್!

Published : Dec 28, 2023, 06:38 PM IST
ಪಂದ್ಯದ ನಡುವೆ ಜೋಡಿ ಮೇಲೆ ಕ್ಯಾಮೆರಾ ಕಣ್ಮು, ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ ಕಪಲ್!

ಸಾರಾಂಶ

ಕ್ರಿಕೆಟ್ ಪಂದ್ಯದ ವೇಳೆ ಕ್ಯಾಮೆರಾ ಕಣ್ಣ ಅಲರ್ಟ್ ಆಗಿರುತ್ತೆ. ಹಲವರು ಇದೇ ಕ್ಯಾಮೆರಾದಿಂದ ರಾತ್ರೋರಾತ್ರಿ ವೈರಲ್ ಆಗಿದ್ದಾರೆ. ಮತ್ತೆ ಕೆಲವರಿಗೆ ಭಾರಿ ಸಂಕಷ್ಟಗಳು ಎದುರಾಗಿದೆ. ಇದೀಗ ಟೆಸ್ಟ್ ಪಂದ್ಯ ವೀಕ್ಷಿಸುತ್ತಾ ಖಾಸಗಿ ಕ್ಷಣದಲ್ಲಿದ್ದ ಜೋಡಿ ಮೇಲೆ ಕ್ಯಾಮೆರಾ ಕಣ್ಣು ಬಿದ್ದಿದೆ. ದೊಡ್ಡ ಸ್ಕ್ರೀನ್ ಮೇಲೆ ಈ ಜೋಡಿ ಕಾಣಿಸಿಕೊಳ್ಳುತ್ತಿದ್ದಂತೆ ಮುಖ ಮುಚ್ಚಿಕೊಂಡು ಜಾಗ ಖಾಲಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಮೆಲ್ಬೊರ್ನ್(ಡಿ.28) ಕ್ರಿಕೆಟ್ ಪಂದ್ಯದ ನಡುವೆ ಸ್ಕ್ರೀನ್ ಮೇಲೆ ಪ್ರತ್ಯಕ್ಷರಾಗುವ ಅಭಿಮಾನಿಗಳು ಭಾರಿ ವೈರಲ್ ಆಗುತ್ತಾರೆ. ಕ್ರಿಕೆಟ್ ನಡುವೆ ಕ್ಯಾಮೆರಾ ಕಣ್ಣುಗಳು ಸುಂದರ ಯುವತಿಯರನ್ನು ಸ್ಕ್ರೀನ್ ಮೇಲೆ ತೋರಿ ನ್ಯಾಶನಲ್ ಕ್ರಶ್ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಒಂದೇ ಒಂದು ಪಂದ್ಯದ ಮೂಲಕ ಭಾರಿ ವೈರಲ್ ಆದ ಹಾಗೂ ಇದೇ ವೈರಲ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಹಲವು ಘಟನೆಗಳು ಇವೆ. ಇದೀಗ ಟೆಸ್ಟ್ ಪಂದ್ಯದ ನಡುವೆ ಕ್ಯಾಮೆರಾ ಮ್ಯಾನ್ ಕಣ್ಣು ನೇರವಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ಜೋಡಿ ಮೇಲೆ ಬಿದ್ದಿದೆ. ತನ್ನ ಬಾಯ್‌ಫ್ರೆಂಡ್ ತೊಡೆ ಮೇಲೆ ಮಲಗಿ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದ ಜೋಡಿ ಮೈದಾನದ ಸ್ಕ್ರೀನ್ ಮೇಲೆ ಪ್ರತ್ಯಕ್ಷರಾಗುತ್ತಿದ್ದಂತೆ ಈ ಜೋಡಿ ಎಚ್ಚೆತ್ತುಕೊಂಡು ಮುಖಮುಚ್ಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಮರುಕ್ಷಣದಲ್ಲೇ ಜಾಗ ಖಾಲಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಮೆಲ್ಬೋರ್ನ್ ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಮಿಚೆಲ್ ಮಾರ್ಶ್ 96 ರನ್ ನೆರವಿನಿಂದ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡಿತು. ಆದರೆ ಈ ಹೋರಾಟದ ನಡುವೆ ಕ್ಯಾಮೆರಾಗಳು ಹಲವು ಬಾರಿ ಕ್ರಿಕೆಟ್ ಅಭಿಮಾನಿಗಳ ಮೇಲೆ ಬೆಳಕು ಚೆಲ್ಲಿತ್ತು.

ಬ್ಯಾಕ್‌ಲೆಸ್ ಬ್ಲೌಸ್, ಬ್ಲಾಕ್ ಸೀರೆಯಲ್ಲಿ ಮಿಂಚಿದ ಸಾರ, ಚುಮುಚುಮು ಚಳಿಯಲ್ಲಿ ಕ್ಲೀನ್ ಬೋಲ್ಡ್!

ಬೌಂಡರಿ, ಸಿಕ್ಸರ್, ವಿಕೆಟ್ ಸಂಭ್ರಮಿಸುತ್ತಿದ್ದ ಅಭಿಮಾನಿಗಳನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಆದರೆ ಆಸ್ಟ್ರೇಲಿಯಾ ದಿಟ್ಟ ಹೋರಾಟದ ನಡುವೆ ಜೋಡಿಯೊಂದು ಗ್ಯಾಲರಿಯಲ್ಲಿ ತಮ್ಮದೇ ಕ್ಷಣದಲ್ಲಿ ಮುಳುಗಿತ್ತು. ಹುಡುಗಿ, ತನ್ನ ಬಾಯ್‌ಫ್ರೆಂಡ್ ತೊಡೆ ಮೇಲೆ ಮಲಗಿದ್ದಳು. ಇತ್ತ ಬಾಯ್‌ಫ್ರೆಂಡ್ ಪಂದ್ಯ ವೀಕ್ಷಿಸುತ್ತಾ ಸುಂದರ ಕ್ಷಣ ಅನುಭವಿಸುತ್ತಿದ್ದರು.

 

 

ಪಿಚ್‌ನಲ್ಲೇ ಫೋಕಸ್ ಆಗಿದ್ದ ಕ್ಯಾಮೆರಾ ಏಕಾಏಕಿ ಗ್ಯಾಲರಿಯತ್ತ ಹೊರಳಿತ್ತು. ನೇರವಾಗಿ ಈ ಜೋಡಿಯನ್ನು ಸ್ಕ್ರೀನ್ ಮೇಲೆ, ಲೈವ್ ಮೂಲಕ ತೋರಿಸಿಯೇ ಬಿಟ್ಟಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಜೋಡಿ ಮರುಕ್ಷಣದಲ್ಲೇ ಎದ್ದು ಕುಳಿತಿತ್ತು. ಇಷ್ಟೇ ಅಲ್ಲ ಬಾಯ್‌ಫ್ರೆಂಡ್ ಮುಖ ಮುಚ್ಚಿಕೊಂಡರೆ, ಹುಡುಗಿ ಮುಖ ಕಾಣದಂತೆ ತಿರುಗಿದ್ದಾಳೆ.

ಈ ಎರಡು ಕ್ವಾಲಿಟಿ ಇರೋ ಹುಡುಗನನ್ನೇ ಮದುವೆಯಾಗೋದಂತೆ ನ್ಯಾಷನಲ್ ಕ್ರಶ್ ಸ್ಮೃತಿ ಮಂಧನಾ..!

ಸ್ಕ್ರೀನ್ ಮೇಲೆ, ಲೈವ್ ಪ್ರಸಾರದಲ್ಲಿ ತಮ್ಮ ವಿಡಿಯೋ ಪ್ರಸಾರವಾಗಿದೆ ಎಂಬುದನ್ನು ಅರಿತ ಈ ಜೋಡಿ ಮರುಕ್ಷಣದಲ್ಲೇ ಕ್ರೀಡಾಂಗಣದಿಂದ ಎದ್ದು ಹೊರನಡೆದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?