ಸಾನಿಯಾ ಮಗು ಯಾವ ದೇಶದ ಪರ?

Published : Dec 07, 2016, 04:08 PM ISTUpdated : Apr 11, 2018, 01:09 PM IST
ಸಾನಿಯಾ ಮಗು ಯಾವ ದೇಶದ ಪರ?

ಸಾರಾಂಶ

ನೀವಿಬ್ಬರು ಮದುವೆಯಾಗಿ ಆರು ವರ್ಷವಾಗಿದೆ. ನಿಮ್ಮ ಮಗು ಯಾವ ದೇಶವನ್ನು ಪ್ರತಿನಿಧಿಸಲಿದೆ ಎಂದು ಸಾಜಿದ್ ನೇರವಾಗಿಯೇ ಸಾನಿಯಾಗೆ ಪ್ರಶ್ನಿಸಿದ್ದಾರೆ.

ನವದೆಹಲಿ(ಡಿ.07): ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾರತದವರು. ಅವರು ಮದುವೆಯಾಗಿದ್ದು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್. ಇವರಿಬ್ಬರಿಗೂ ಮಗುವಾಗಿ ಆ ಮಗು ಕ್ರೀಡಾಪಟುವಾದರೆ ಅದು ಯಾವ ದೇಶದ ಪರವಾಗಿ ಆಡುತ್ತದೆ? ಇಂಥದ್ದೊಂದು ಪ್ರಶ್ನೆಯನ್ನು ಝೀ ಟಿವಿಯಲ್ಲಿ ಬರುವ ಯಾದೋಂಕಿ ಬಾರಾತ್ ಕಾರ್ಯಕ್ರಮದಲ್ಲಿ ನಿರೂಪಕ ಸಾಜಿದ್ ಖಾನ್, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸಾನಿಯಾಗೇ ನೇರವಾಗಿ ಕೇಳಿದ್ದಾರೆ.

ಇದು ಪ್ರತಿಯೊಬ್ಬ ಭಾರತೀಯ ಹಾಗೂ ಪಾಕಿಸ್ತಾನಿಗನ ಪ್ರಶ್ನೆಯಾಗಿದ್ದು, ನೀವಿಬ್ಬರು ಮದುವೆಯಾಗಿ ಆರು ವರ್ಷವಾಗಿದೆ. ನಿಮ್ಮ ಮಗು ಯಾವ ದೇಶವನ್ನು ಪ್ರತಿನಿಧಿಸಲಿದೆ ಎಂದು ಸಾಜಿದ್ ನೇರವಾಗಿಯೇ ಸಾನಿಯಾಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಜಾಣತನದ ಉತ್ತರ ಕೊಟ್ಟ ಸಾನಿಯಾ, ‘‘ನಾವಿಬ್ಬರು ಈ ಬಗ್ಗೆ ಇನ್ನೂ ಚರ್ಚಿಸಿಲ್ಲ. ನಾನು ಭಾರತದ ಬಗ್ಗೆ ಹೆಮ್ಮೆ ಉಳ್ಳವಳು. ಶೋಯೆಬ್ ಪಾಕಿಸ್ತಾನದ ಬಗ್ಗೆ ಹೆಮ್ಮೆಯುಳ್ಳವರು. ಆದರೆ, ಅದಕ್ಕಿಂತಲೂ ಮಿಗಿಲಾಗಿ ನಾವು ನಮ್ಮ ದಾಂಪತ್ಯದ ಬಗ್ಗೆ ಹೆಮ್ಮೆ ಹೊಂದಿದವರು’’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?