ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಮುಂಬೈ ಇಂಡಿಯನ್ಸ್..!

Published : Apr 03, 2019, 07:20 PM IST
ಐತಿಹಾಸಿಕ ದಾಖಲೆಯ ಹೊಸ್ತಿಲಲ್ಲಿ ಮುಂಬೈ ಇಂಡಿಯನ್ಸ್..!

ಸಾರಾಂಶ

ತಲಾ ಮೂರು ಬಾರಿ ಚಾಂಪಿಯನ್ ಆಗಿರುವ ಉಭಯ ತಂಡಗಳ ನಡುವಿನ ಕಾದಾಟಕ್ಕೆ ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಪ್ರಮುಖ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಮುಂಬೈ[ಏ.03]: 12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್’ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ Vs ಚೆನ್ನೈ IPL ಹೋರಾಟ- ಇಲ್ಲಿದೆ ಸಂಭವನೀಯ ತಂಡ !

ತಲಾ ಮೂರು ಬಾರಿ ಚಾಂಪಿಯನ್ ಆಗಿರುವ ಉಭಯ ತಂಡಗಳ ನಡುವಿನ ಕಾದಾಟಕ್ಕೆ ಮುಂಬೈನ ವಾಂಖೆಡೆ ಮೈದಾನ ಸಾಕ್ಷಿಯಾಗಲಿದೆ. ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಪ್ರಮುಖ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

* ಮುಂಬೈ ಇಂಡಿಯನ್ಸ್ ಇದುವರೆಗೂ ಐಪಿಎಲ್’ನಲ್ಲಿ 99 ಜಯ ದಾಖಲಿಸಿದ್ದು, ಇಂದು ನಡೆಯುವ ಪಂದ್ಯದಲ್ಲಿ ಜಯ ಸಾಧಿಸಿದರೆ, ಐಪಿಎಲ್ ಟೂರ್ನಿಯಲ್ಲಿ 100 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ತಂಡವಾಗಿ ಹೊರಹೊಮ್ಮಲಿದೆ.

* ಹರ್ಭಜನ್ ಸಿಂಗ್: ಅನುಭವಿ ಆಫ್’ಸ್ಪಿನ್ನರ್ ಭಜ್ಜಿ ವಾಂಖೆಡೆ ಮೈದಾನದಲ್ಲಿ ಇನ್ನೊಂದು ವಿಕೆಟ್ ಕಬಳಿಸಿದರೆ, ನಿರ್ದಿಷ್ಟ ಮೈದಾನವೊಂದರಲ್ಲಿ 50+ ವಿಕೆಟ್ ಕಬಳಿಸಿದ ಮೂರನೇ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ಈ ಮೊದಲು ಲಸಿತ್ ಮಾಲಿಂಗ[ವಾಂಖೆಡೆ], ಅಮಿತ್ ಮಿಶ್ರಾ[ಫಿರೋಜ್ ಶಾ ಕೋಟ್ಲಾ] ಈ ಮೊದಲು ಈ ಸಾಧನೆ ಮಾಡಿದ್ದರು.

* ಡ್ವೇನ್ ಬ್ರಾವೋ ಇನ್ನೊಂದು ವಿಕೆಟ್ ಪಡೆದರೆ, ಸಿಎಸ್’ಕೆ ಪರ 100 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಸಿಎಸ್’ಕೆ ಪರ ನೂರು ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಸಾಧನೆ ಮಾಡಲಿದ್ದಾರೆ.

* ಸುರೇಶ್ ರೈನಾ: ಇನ್ನೊಂದು ಕ್ಯಾಚ್ ಹಿಡಿದರೆ ಐಪಿಎಲ್’ನಲ್ಲಿ ನೂರು ಕ್ಯಾಚ್ ಪಡೆದ ಸಾಧನೆ ಮಾಡಲಿದ್ದಾರೆ. ಈ ಮೂಲಕ 100 ಕ್ಯಾಚ್ ಪಡೆದ ಮೊದಲ ಫೀಲ್ಡರ್ ಎನ್ನುವ ದಾಖಲೆ ರೈನಾ ಪಾಲಾಗಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಬಾತ್‌ರೂಮ್‌ನಲ್ಲೇ ಹಾಕಿ ಕೋಚ್ ಅತ್ಯಾ*ಚಾರ; ಆರೋಪಿ ಜೈಲಿಗಟ್ಟಿದ ಪೊಲೀಸರು
ಟಿ20 ವಿಶ್ವಕಪ್‌: ಬಾಂಗ್ಲಾದ ಪಂದ್ಯಕ್ಕೆ ಆತಿಥ್ಯ ವಹಿಸಲು ಮುಂದೆ ಬಂದ ಪಾಕಿಸ್ತಾನ! ಆದ್ರೆ ಇದು ಸಾಧ್ಯನಾ?