ಆಯ್ಕೆ ಸಮಿತಿ ಯಾಕೆ ಬೇಕು? ಕೊಹ್ಲಿಯೇ ಕೋಚ್ ಆಯ್ಕೆ ಮಾಡಲಿ ಎಂದ ಗವಾಸ್ಕರ್

By Suvarna Web DeskFirst Published Jun 22, 2017, 12:46 PM IST
Highlights

ಅನಿಲ್ ಕುಂಬ್ಳೆ ಹಾಗೂ ಕೊಹ್ಲಿ ನಡುವಿನ ವಿವಾದದ ಕುರಿತಾಗಿ ಟೀಂ ಇಂಡಿಯಾದ ಅತಿ ದೊಡ್ಡ ಬ್ಯಾಟ್ಸ್'ಮನ್'ಗಳಲ್ಲಿ ಒಬ್ಬರಾದ ಸುನಿಲ್ ಗವಾಸ್ಕರ್ ಇದೀಗ ಕ್ಯಾಪ್ಟನ್ ಕೊಹ್ಲಿ ಮೇಲೆ ಗರಂ ಆಗಿದ್ದಾರೆ. ಕೇವಲ ನಾಯಕನ ಇಷ್ಟ, ಕಷ್ಟಗಳೇ ಇಷ್ಟು ಮಹತ್ವ ವಹಿಸುವುದಾದರೆ ಕ್ರಿಕೆಟ್ ಸಲಹಾ ಸಮಿತಿಗೆ ಏನು ಕೆಲಸ? ಎಂದು ಗವಾಸ್ಕರ್ ಕೇಳಿದ್ದಾರೆ.

ವಾಸ್ತವವಾಗಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಬಿಸಿಸಿಐನ ಸಲಹಾ ಸಮಿತಿಯಲ್ಲಿದ್ದಾರೆ. ಇನ್ನು ಟೀಂ ಇಂಡಿಯಾದ ಕೋಚ್ ಆಯ್ಕೆ ಮಾಡುವುದು ಇವರದೇ ಜವಾಬ್ದಾರಿ. ಹೀಗಿರುವಾಗ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಈ ಮೂವರೂ ಕುಂಬ್ಳೆ ಹಾಗೂ ಕೊಹ್ಲಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರು. ಈ ಭೇಟಿಯ ಬಳಿಕವೂ ಸಲಹಾ ಸಮಿತಿ ಕುಂಬ್ಳೆಯನ್ನೇ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರೆಯುವಂತೆ ಸೂಚಿಸಿದ್ದರು. ಆದರೆ ಕೊಹ್ಲಿ ಈ ನಿರ್ಣಯವನ್ನು ವಿರೋಧಿಸಿದ್ದರು.

ಇದೇ ವಿಚಾರವಾಗಿ ಹಿರಿಯ ಆಟಗಾರ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ. ಹೀಗಾಗಿ 'ತಂಡದ ಆಟಗಾರರು ಹಾಗೂ ನಾಯಕನ ಇಚ್ಛೆಯಂತೆಯೇ ಕೋಚ್ ಆಯ್ಕೆ ಮಾಡುವುದಾದರೆ ಆಯ್ಕೆ ಸಮಿತಿಗೇನು ಕೆಲಸ, ಈ ಸಮಿತಿಯ ಅಗತ್ಯವೇನಿದೆ?. ವೆಸ್ಟ್ ಇಂಡೀಸ್'ಗೆ ತೆರಳಿರುವ ಆಟಗಾರರು ಹಾಗೂ ನಾಯಕ ಕೊಹ್ಲಿಯ ಬಳಿ ನೇರವಾಗಿ ಕೋಚ್ ಆಗಿ ಯಾರು ಬೇಕು ಎಂದು ಕೇಳಿ. ಇದರಿಂದ ಸಮಯವೂ ನಷ್ಟವಾಗುವುದಿಲ್ಲ' ಎಂದಿದ್ದಾರೆ. ಇನ್ನು ಕೊಹ್ಲಿ ಕುಂಬ್ಳೆ ನಡುವಿನ ವಿವಾದ ಬಹಿರಂಗಗೊಂಡ ದಿನದಿಂದಲೂ ಸುನಿಲ್ ಗವಾಸ್ಕರ್ ಕುಂಬ್ಳೆ ಪರವಾಗಿ ಮಾತನಾಡಿರುವ ಗವಾಸ್ಕರ್ ಕೊಹ್ಲಿ ಕೂಡಾ ಈ ವಿಚಾರವಾಗಿ ಸಾರ್ವಜನಿಕ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

click me!