ಟೀಂ ಇಂಡಿಯಾಗೆ ಸಿಕ್ಕಿದ್ದಾನೆ ಹೊಸ ಫಿನಿಶರ್: ಧೋನಿ, ಯುವರಾಜ್ ಸ್ಥಾನ ತುಂಬಲು ರೆಡಿ

By Suvarna Web DeskFirst Published Jun 22, 2017, 11:12 AM IST
Highlights

ಟೀಂ ಇಂಡಿಯಾಗೆ ಈಗ ಹೊಸ ಫಿನಿಶರ್ ಸಿಗ್ತಿದ್ದಾನೆ. ಆತ ಕ್ರೀಸಿಗೆ ಬಂದರೆ ಸಾಕು ಬರೀ ಸಿಕ್ಸರ್​'ಗಳ ಸುರಿಮಳೆಯಾಗುತ್ತೆ. ಕ್ಷಣ ಮಾತ್ರದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸ್ತಾನೆ. ಧೋನಿ ಮತ್ತು ಯುವರಾಜ್ ಅವರಿಂದ ಫಿನಿಶರ್ ಸ್ಥಾನವನ್ನು ಕಿತ್ತುಕೊಳ್ಳಲು ರೆಡಿಯಾಗಿದ್ದಾನೆ. ಚಾಂಪಿಯನ್ಸ್ ಟ್ರೋಫಿಯಂತೆ ವಿಂಡೀಸ್​ನಲ್ಲೂ ಆರ್ಭಟಿಸಲು ಸಿದ್ದನಾಗಿದ್ದಾನೆ.

ಟೀಂ ಇಂಡಿಯಾಗೆ ಈಗ ಹೊಸ ಫಿನಿಶರ್ ಸಿಗ್ತಿದ್ದಾನೆ. ಆತ ಕ್ರೀಸಿಗೆ ಬಂದರೆ ಸಾಕು ಬರೀ ಸಿಕ್ಸರ್​'ಗಳ ಸುರಿಮಳೆಯಾಗುತ್ತೆ. ಕ್ಷಣ ಮಾತ್ರದಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸ್ತಾನೆ. ಧೋನಿ ಮತ್ತು ಯುವರಾಜ್ ಅವರಿಂದ ಫಿನಿಶರ್ ಸ್ಥಾನವನ್ನು ಕಿತ್ತುಕೊಳ್ಳಲು ರೆಡಿಯಾಗಿದ್ದಾನೆ. ಚಾಂಪಿಯನ್ಸ್ ಟ್ರೋಫಿಯಂತೆ ವಿಂಡೀಸ್​ನಲ್ಲೂ ಆರ್ಭಟಿಸಲು ಸಿದ್ದನಾಗಿದ್ದಾನೆ.

ಆತ ಕ್ರೀಸಿನಲ್ಲಿದ್ರೆ ಬರೀ ಸಿಕ್ಸರ್​ ಸುರಿಮಳೆ

ಯುವರಾಜ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಧೋನಿ ಈಗ 35 ವರ್ಷ. ಈಗ ಇವರಿಬ್ಬರಿಗೆ ಮೊದಲಿನ ಚಾರ್ಮ್​ ಇಲ್ಲ. ಸ್ಫೋಟಕ ಬ್ಯಾಟಿಂಗ್ ಮಾಡಿದರೂ ಮ್ಯಾಚ್ ಫಿನಿಶ್ ಮಾಡುವ ತಾಕತ್ತು ಕಮ್ಮಿಯಾಗುತ್ತಾ ಬರುತ್ತಿದೆ. ಈಗ ಅವರಿಬ್ಬರ ಸ್ಥಾನ ತುಂಬಲು ಒಬ್ಬ ಆಟಗಾರ ರೆಡಿಯಾಗಿದ್ದಾನೆ. ಧೋನಿ-ಯುವಿಯಿಂದ ಮ್ಯಾಚ್ ಫಿನಿಶರ್ ಪಟ್ಟ ಕಿತ್ತುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾನೆ. ಆತನೇ ಹಾರ್ದಿಕ್ ಪಾಂಡ್ಯ.

 

 

 

 

 

 

 

 

ಡೆತ್​ ಓವರ್​'ನಲ್ಲಿ ಸ್ಫೋಟಕ ಬ್ಯಾಟ್ಸ್'​​ಮನ್

ಹೌದು, ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಹೊಸ ಫಿನಿಶರ್. ಡೆತ್ ಓವರ್​ಗ'ಳಲ್ಲಿ ಪಾಂಡ್ಯ ಅವರನ್ನು ಕಂಟ್ರೋಲ್ ಮಾಡುವುದು ಅಸಾಧ್ಯ. ಒಂದು ಭಾರಿ ಸ್ಫೋಟಿಸಲು ಆರಂಭಿಸಿದರೆ ಮುಗೀತು. ಬರೀ ಬೌಂಡ್ರಿ-ಸಿಕ್ಸರ್​ಗಳೇ. ಕೇವಲ ಒಂದು ಮ್ಯಾಚ್ ನೋಡಿ ಪಾಂಡ್ಯ ಫಿನಿಶರ್​ ಅಂತ ಹೇಳುತ್ತಿಲ್ಲ. ಆತ ಆಡಿರುವ 12 ಮ್ಯಾಚ್​'ಗಳನ್ನ ನೋಡಿದರೆ ಗೊತ್ತಾಗುತ್ತೆ ಡೆತ್ ಓವರ್​'ಗಳಲ್ಲಿ ಹಾರ್ದಿಕ್ ಆರ್ಭಟ ಹೇಗಿದೆ ಅಂತ. ಕೊನೆ ಓವರ್​ಗಳಲ್ಲಿ ಪಾಂಡ್ಯ ಕ್ರೀಸಿಗೆ ಬಂದರೆ ಎದುರಾಳಿ ಪಾಳಯದಲ್ಲಿ ನಡುಕ ಶುರುವಾಗುತ್ತದೆ. ಯಾಕೆ ಗೊತ್ತಾ ಬಾಲ್'​ಗಳು ಮೈದಾನದ ಯಾವಾವ ಮೂಲೆಗೆ ಹೋಗುತ್ತವೆ ಎನ್ನುವುದು ಗೊತ್ತಾಗುವುದೇ ಇಲ್ಲ.

ಮೊದಲ ಪಂದ್ಯದಲ್ಲಿ ಸಕ್ಸಸ್, 2ನೇ ಪಂದ್ಯದಲ್ಲಿ ಜಸ್ಟ್ ಮಿಸ್..

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಎರಡು ಪಂದ್ಯದಲ್ಲೂ ಪ್ರೇಕ್ಷಕರನ್ನ ರಂಜಿಸಿದ್ದು ಹಾರ್ದಿಕ್ ಪಾಂಡ್ಯ. ಮೊದಲ ಮುಖಾಮುಖಿಯಲ್ಲಿ ಟಾಪ್ ಆರ್ಡರ್​ನ ನಾಲ್ವರು ಬ್ಯಾಟ್ಸ್​ಮನ್​ಗಳು ಹಾಫ್ ಸೆಂಚುರಿ ಬಾರಿಸಿದರಾದರಾದರೂ ಪಾಂಡ್ಯ ಹೊಡೆದ ಆ ಹ್ಯಾಟ್ರಿಕ್ ಸಿಕ್ಸ್​ಗಳೇ ಟೀಂ ಇಂಡಿಯಾವನ್ನುನ 300 ರನ್ ಗಡಿ ದಾಟಿಸಿದ್ದು. 

ಇನ್ನೂ ಫೈನಲ್​ನಲ್ಲಿ 72 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸಿಗೆ ಬಂದ ಪಾಂಡ್ಯ ಕೇವಲ 43 ಬಾಲ್​​ನಲ್ಲಿ 4ಬೌಂಡ್ರಿ, 6 ಸಿಕ್ಸ್ ಸಹಿತ 76 ರನ್ ಹೊಡೆದು ಬಿಸಾಕಿಸಿದ್ರು. ಅವರ ಆರ್ಭಟ ನೋಡಿ ಪಾಕಿಗಳು ಬೆಚ್ಚಿ ಬಿದ್ದಿದ್ದರು. ಟೀಂ ಇಂಡಿಯಾಗೆ ಗೆಲುವಿನ ಆಸೆಯೂ ಚಿಗುರಿತ್ತು. 76 ರನ್​ಗಳಿದ್ದಾಗ ಪಾಂಡ್ಯ ರನೌಟ್ ಆದರುರು. ಇನ್ನು ಸ್ವಲ್ಪ ಹೊತ್ತು ಕ್ರೀಸಿನಲ್ಲಿದಿದ್ದರೆ ಫೈನಲ್ ಪಂದ್ಯದ ಗತಿಯೇ ಬದಲಿಸಿ ಬಿಡುತ್ತಿದ್ದರು. ಆದರೆ ವಿಧಿಯಾಟ ಅವರನ್ನು ರನೌಟ್ ಆಗುವಂತೆ ಮಾಡಿತು.

ಮೂರು ಪಂದ್ಯದಲ್ಲೂ ಮ್ಯಾಚ್ ಫಿನಿಶ್ ಮಾಡಿದ್ದ ಹಾರ್ದಿಕ್

ಇದೇ ವರ್ಷ ಆರಂಭದಲ್ಲಿ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ತಂಡ ಮೂರು ಏಕದಿನ ಪಂದ್ಯಗಳ ಸರಣಿ ಆಡಿ ಹೋಗಿತ್ತು. ಆ ಮೂರು ಪಂದ್ಯಗಳಲ್ಲೂ ಮ್ಯಾಚ್ ಫಿನಿಶ್ ಮಾಡಿದ್ದು ಇದೇ ಹಾರ್ದಿಕ್ ಪಾಂಡ್ಯ. ಫಸ್ಟ್ ಮ್ಯಾಚ್​​ನಲ್ಲಿ ಇಂಗ್ಲೆಂಡ್​ ನೀಡಿದ 351 ರನ್ ಚೇಸ್ ಮಾಡಿ ಗೆಲ್ಲಲು ಸಾಧ್ಯವಾಗಿದ್ದು ಪಾಂಡ್ಯರಿಂದ. 37 ಬಾಲ್​ನಲ್ಲಿ 3 ಬೌಂಡ್ರಿ, 1 ಸಿಕ್ಸ್ ಸಹಿತ ಅಜೇಯ 40 ರನ್​ ಹೊಡೆದಿದ್ದರು. ಇನ್ನು 11 ಬಾಲ್ ಇರುವಾಗಲೇ ಭಾರತ ಗೆದ್ದು ಸಂಭ್ರಮಿಸಿತ್ತು.

ಸೆಕೆಂಡ್ ಮ್ಯಾಚ್​ನಲ್ಲಿ ಟೀಂ ಇಂಡಿಯಾ 381 ರನ್ ಹೊಡೆಯಲು ಪಾಂಡ್ಯ ಕೊಡುಗೆ ಸಹ ಇದೆ. 9 ಬಾಲ್​ನಲ್ಲಿ 2 ಬೌಂಡ್ರಿ, 1 ಸಿಕ್ಸ್​ ಸೇರಿದ 19 ರನ್ ಹೊಡೆದಿದ್ದರು. ಇನ್ನು 3ನೇ ಪಂದ್ಯದಲ್ಲಿ 43 ಬಾಲ್​​​ನಲ್ಲಿ 4 ಬೌಂಡ್ರಿ, 2 ಸಿಕ್ಸ್ ಸಹಿತ 56 ರನ್ ಸಿಡಿಸಿ ಔಟಾಗಿದ್ದರು. ಪಾಂಡ್ಯ ಔಟಾಗಿದ್ದರಿಂದಲೇ ಆ ಪಂದ್ಯವನ್ನ ಭಾರತ 5 ರನ್​ನಿಂದ ವಿರೋಚಿತವಾಗಿ ಸೋತಿತು.

ಕಿವೀಸ್ ವಿರುದ್ಧವೂ ಆರ್ಭಟ

ಕಳೆದ ವರ್ಷ ಕೊನೆಯಲ್ಲಿ ಭಾರತ ಪ್ರವಾಸಕೈಗೊಂಡಿದ್ದ ನ್ಯೂಜಿಲೆಂಡ್ ವಿರುದ್ಧದ 2ನೇ ಪಂದ್ಯದಲ್ಲೂ ಪಾಂಡ್ಯ ಅಬ್ಬರಿಸಿದ್ದರು. 32 ಎಸೆತಗಳಲ್ಲಿ 3 ಬೌಂಡ್ರರಿಗಳಿರುವ 36 ರನ್ ಹೊಡೆದಿದ್ದರು. ಡೆತ್​ ಓವರ್​ಗಳಲ್ಲಿ ಆರ್ಭಟಿಸಿದ್ದರು.

ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್ ಸಾಧನೆ ಇಂತಿದೆ. 12 ಪಂದ್ಯಗಳನ್ನಾಡರುವ ಪಾಂಡ್ಯ 53ರ ಸರಾಸರಿಯಲ್ಲಿ 265 ರನ್ ಹೊಡೆದಿದ್ದಾರೆ. 140.95ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿ, ಎರಡು ಹಾಫ್ ಸೆಂಚುರಿ ದಾಖಲಿಸಿದ್ದಾರೆ.

ವಿಂಡೀಸ್​​ನಲ್ಲೂ ನಡೆಯುತ್ತಾ ಪಾಂಡ್ಯ ಆಟ..?

ಹಾರ್ದಿಕ್ ಪಾಂಡ್ಯ ಆಡಿರುವ 12 ಪಂದ್ಯಗಳಲ್ಲೇ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಮ್ಯಾಚ್ ಫಿನಿಶ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈಗ ವೆಸ್ಟ್ ಇಂಡೀಸ್​ ಸರಣಿಯಲ್ಲೂ ಫಿನಿಶರ್ ಮಾತ್ರ ನಿರ್ವಹಿಸ್ತಾರಾ ನೋಡ್ಬೇಕು.

click me!