
ಕ್ರಿಕೆಟರ್ ಪೃಥ್ವಿ ಶಾನ ಹೊಸ ಗರ್ಲ್‌ಫ್ರೆಂಡ್ ಈಕೆ!
ಬುಧವಾರ ಭಾರತೀಯ ಕ್ರಿಕೆಟ್ ತಂಡ ಗಣೇಶ ಚತುರ್ಥಿಯನ್ನು ಆಚರಿಸಿತು. ಭಾರತದ ಮಾಜಿ ಮತ್ತು ಹಾಲಿ ಆಟಗಾರರು ಸಾಮಾಜಿಕ ಮಾಧ್ಯಮಗಳಲ್ಲಿ ತಾವು ಹಬ್ಬವನ್ನು ಹೇಗೆ ಆಚರಿಸಿದೆವು ಎಂದು ಹಂಚಿಕೊಂಡರು. ಎಲ್ಲದರಲ್ಲೂ ಗಮನ ಸೆಳೆದದ್ದು ಪೃಥ್ವಿ ಶಾ ಅವರ ಪೋಸ್ಟ್. ಭಾರತದ ಈ ಬ್ಯಾಟ್ಸ್‌ಮನ್ ಸೆಲೆಬ್ರಟಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಕೃತಿ ಅಗರ್ವಾಲ್ ಅವರೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸಿದರು. ಅದರ ಮೂರು ಚಿತ್ರಗಳನ್ನು ಶಾ ಪೋಸ್ಟ್ ಮಾಡಿದ್ದಾರೆ. ಅವುಗಳಲ್ಲಿ ಎರಡು ಗಣೇಶನ ವಿಗ್ರಹದ ಪಕ್ಕದಲ್ಲಿ ನಿಂತಿದ್ದ ಈ ಜೋಡಿಯ ಚಿತ್ರಗಳು. ʼತುಂಬಾ ಸುಂದರ ಜೋಡಿʼ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಆಗಸ್ಟ್ 19ರಂದು ಚೆನ್ನೈನಲ್ಲಿ ಛತ್ತೀಸ್‌ಗಢ ವಿರುದ್ಧ ನಡೆದ ಬುಚಿ ಬಾಬು ಆಹ್ವಾನಿತ ಟೂರ್ನಮೆಂಟ್ ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸುವ ಮೂಲಕ ಶಾ ಮಹಾರಾಷ್ಟ್ರ ಪರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಶಾ ಮೊದಲ ಇನ್ನಿಂಗ್ಸ್‌ನಲ್ಲಿ 122 ಎಸೆತಗಳಲ್ಲಿ ಶತಕ ಗಳಿಸಿದರು. ಅದು 14 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ಅಂಡರ್-19 ವಿಶ್ವಕಪ್‌ನಲ್ಲಿನ ತನ್ನ ಅದ್ಭುತ ಪ್ರದರ್ಶನ ಮತ್ತು ಟೆಸ್ಟ್ ಚೊಚ್ಚಲ ಶತಕದ ನಂತರ ಭಾರತದ ಭವಿಷ್ಯದ ತಾರೆ ಎಂದು ಶಾ ಪರಿಗಣಿಸಲ್ಪಟ್ಟಿದ್ದರು. ಈ ವರ್ಷದ ಆರಂಭದಲ್ಲಿ ಅವರ ಫಾರ್ಮ್ ಮತ್ತು ಫಿಟ್ನೆಸ್ ಬಗ್ಗೆ ಕಳವಳ ಮೂಡಿತ್ತು. ಕಳೆದ ಋತುವಿನಲ್ಲಿ ಅವರನ್ನು ಮುಂಬೈನ ರಣಜಿ ಟ್ರೋಫಿ ತಂಡದಿಂದ ಕೈಬಿಡಲಾಯಿತು. ವಿಜಯ್ ಹಜಾರೆ ಟ್ರೋಫಿಗೆ ಆಯ್ಕೆ ಮಾಡಲಾಗಿಲ್ಲ. ಶಾ ಕೊನೆಯ ಬಾರಿಗೆ ಭಾರತಪರ ಆಡಿದ್ದು ಜುಲೈ 2021ರಲ್ಲಿ. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಅವರು ಮಾರಾಟವಾಗಲಿಲ್ಲ. ಇದು ಅವರ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸಂಭವಿಸಿದ್ದು.
ಈ ಎಲ್ಲದರ ನಡುವೆ ಅವರೀಗ ತಮ್ಮ ಜೀವನದ ಪ್ರಣಯದ ಇನ್ನಿಂಗ್ಸ್ ಆರಂಭಿಸಿದಂತಿದೆ. ನಿಧಿ ತಪಾಡಿಯಾ ಎಂಬಾಕೆಯ ಜೊತೆಗೆ ಅವರು ಹೆಸರು ಮೊದಲಿಗೆ ಕೇಳಿಬಂದಿತ್ತು. ಆದರೆ ಇದೀಗ ಆಕೃತಿ ಅಗರ್ವಾಲ್ ಎಂಬಾಕೆಯ ಜೊತೆ ಕಾಣಿಸಿಕೊಂಡಿದ್ದಾರೆ. ಗಣೇಶ ಚತುರ್ಥಿಯ ಫೋಟೋಗಳು ವೈರಲ್ ಆದ ನಂತರ, ಈಕೆ ಭಾರತದ ಸ್ಟಾರ್ ಕ್ರಿಕೆಟಿಗನ ಗೆಳತಿ ಎಂಬ ವದಂತಿ ಹಬ್ಬಿದೆ. ಯಾರೀಕೆ ಆಕೃತಿ?
ಆಕೃತಿ ಅಗರ್ವಾಲ್ ಇನ್ಸ್ಟಾಗ್ರಾಮ್ನಲ್ಲಿ ಭಾರಿ ಸಂಖ್ಯೆಯ ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್. ಆಕೃತಿ ಅಗರ್ವಾಲ್ ಭಾರತ ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಮುಂಬೈನಲ್ಲಿ ನಡೆಯುವ ಪಾರ್ಟಿಗಳಲ್ಲಿ ಈ ಜೋಡಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಂಡಿದೆಯಂತೆ. ಪೃಥ್ವಿ ಶಾ ಅವರೊಂದಿಗೆ ಗಣೇಶ ಚತುರ್ಥಿಯನ್ನು ಆಚರಿಸುತ್ತಿರುವ ಆಕೃತಿ ಅಗರ್ವಾಲ್ ಅವರ ಚಿತ್ರ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚಿನ ಪೋಸ್ಟ್‌ನಲ್ಲಿ, ಆಕೃತಿ ಶಾ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ: "ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭಾಶಯಗಳು. ಗಣಪತಿ ಬಪ್ಪಾ ಮೋರ್ಯಾ."
ಇನ್‌ಸ್ಟಾಗ್ರಾಮ್‌ನಲ್ಲಿ ಆಕೃತಿ ಅಗರ್ವಾಲ್ 3.3 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಆಕೆ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವುದನ್ನು ಹೆಚ್ಚಾಗಿ ಕಾಣಬಹುದು. ಆಕೃತಿ ಅಗರ್ವಾಲ್ ಲಕ್ನೋದಲ್ಲಿ ಜನಿಸಿದವರು. ಮುಂಬೈನಲ್ಲಿ ನಿರ್ಮಲಾ ಮೆಮೋರಿಯಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಅಕೃತಿ ಅಗರ್ವಾಲ್ ಯೂಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಯೂಟ್ಯೂಬ್ ಚಾನೆಲ್ 88000 ಹೆಚ್ಚು ಚಂದಾದಾರರನ್ನು ಹೊಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.