
ಬೆಂಗಳೂರು(ಸೆ.27): ಭಾರತ ಕ್ರಿಕೆಟ್'ನ ವಾಲ್ ಎಂದೇ ಖ್ಯಾತವಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್'ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಆದರೆ ದ್ರಾವಿಡ್ ಬೌಲಿಂಗ್'ನಲ್ಲಿ ಮಿಂಚಿದ್ದು ಕಡಿಮೆಯೇ ಎನ್ನಬಹುದು. ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ, ಜೈಪುರದಲ್ಲಿ ಪಾಕಿಸ್ತಾನ ವಿರುದ್ಧ 1999ರಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಚೊಚ್ಚಲ ವಿಕೆಟ್ ಉರುಳಿಸಿದ್ದು ಪಾಕಿಸ್ತಾನ ಖ್ಯಾತ ಆರಂಭಿಕ ಆಟಗಾರ ಸಯೀದ್ ಅನ್ವರ್ ಅವರನ್ನು.
ಇನ್ನು 2000ನೇ ಇಸವಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸತತ ಎರಡು ಎಸೆತದಲ್ಲಿ ಗ್ಯಾರಿ ಕರ್ಸ್ಟನ್(115), ಲ್ಯಾನ್ಸ್ ಕ್ಲೂಸ್ನರ್(0) ವಿಕೆಟ್ ಉರುಳಿಸಿ ಗಮನ ಸೆಳೆದರು. ಇದೇ ಅದೇ ಸರಣಿಯಲ್ಲಿ ಶ್ಯಾನ್ ಪೊಲ್ಲಾಕ್ ವಿಕೆಟ್ ಉರುಳಿಸುವ ಮೂಲಕ ನಾಲ್ಕನೇ ವಿಕೆಟ್ ಅನ್ನು ಅವರ ಬುಟ್ಟಿಗೆ ಹಾಕಿಕೊಂಡರು.
344 ಏಕದಿನ ಪಂದ್ಯಗಳನ್ನಾಡಿರುವ ದ್ರಾವಿಡ್ ಕೇವಲ ಎಂಟು ಬಾರಿ ಮಾತ್ರ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.