ಕುಸ್ತಿಪಟುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬ್ರಿಜ್‌ಭೂಷಣ್
ಪದಕಗಳ ಮೌಲ್ಯ 15 ರುಪಾಯಿ ಮಾತ್ರವೆಂದ ಬ್ರಿಜ್‌ಭೂಷಭ್
ಭೂಷಣ್‌ರ ಈ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು
ನವದೆಹಲಿ(ಮೇ.20): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ತಮ್ಮ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಟೀಕಿಸುವ ಭರದಲ್ಲಿ, ಅವರು ದೇಶಕ್ಕಾಗಿ ಗೆದ್ದ ಪದಕಗಳ ಬಗ್ಗೆ ಹಗುರವಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಉತ್ತರ ಪ್ರದೇಶದ ಸ್ಥಳೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತ ‘ನೀವು ರಾಜೀನಾಮೆ ನೀಡದಿದ್ದರೆ ಕುಸ್ತಿಪಟುಗಳು ಪದಕಗಳನ್ನು ವಾಪಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರಲ್ಲ’ ಎಂದು ಪ್ರಶ್ನಿಸಿದಾಗ, ಭೂಷಣ್ ಸಿಟ್ಟಾಗಿದ್ದಾರೆ. ‘ವಾಪಸ್ ಕೊಡುವುದಾದರೆ ಇಷ್ಟುವರ್ಷ ಪಡೆದಿರುವ ಬಹುಮಾನದ ಹಣವನ್ನು ಕೊಡಲಿ. ಪದಕಗಳ ಮೌಲ್ಯ 15 ರು. ಮಾತ್ರ’ ಎಂದಿದದಾರೆ.
ಭೂಷಣ್‌ರ ಈ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಪ್ರತಿಭಟನಾ ನಿರತ ಕುಸ್ತಿಪಟುಗಳು, ‘ಕ್ರೀಡಾಪಟುಗಳನ್ನು ಭೂಷಣ್ ಎಷ್ಟುಕೀಳಾಗಿ ನೋಡುತ್ತಾರೆ ಎನ್ನುವುದನ್ನು ತೋರಿಸುತ್ತದೆ. ನಮ್ಮ ಇಷ್ಟುವರ್ಷಗಳ ಪರಿಶ್ರಮದ ಮೌಲ್ಯ ಕೇವಲ 15 ರು. ಎನ್ನುವ ಮೂಲಕ ಅವಮಾನಿಸಿದ್ದಾರೆ’ ಎಂದಿದ್ದಾರೆ.
ಜಂತರ್-ಮಂತರ್‌ಗೆ ಕಾಂಗ್ರೆಸ್ ನಾಯಕರ ಭೇಟಿ
ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಕಾಂಗ್ರೆಸ್ ನಾಯಕರಾದ ರಣ್‌ದೀಪ್ ಸುರ್ಜೆವಾಲಾ, ಸಚಿನ್ ಪೈಲಟ್ ಭೇಟಿ ಮಾಡಿದ್ದು ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸುರ್ಜೆವಾಲಾ, ‘ಕುಸ್ತಿಪಟುಗಳಿಗೆ ನ್ಯಾಯ ಸಿಗುವುದಾದರೆ ರಕ್ತ ಹರಿಸಲು ಸಿದ್ಧ’ ಎಂದಿದ್ದಾರೆ.
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಜತೆ ಕಾಣಿಸಿಕೊಂಡ ಸಿನಿ ದಂತಕಥೆ ರಜನಿಕಾಂತ್..! ಏನ್ ಸಮಾಚಾರ?
ಇದೇ ವೇಳೆ ಬ್ರಿಜ್ ಬಂಧನಕ್ಕೆ ಕುಸ್ತಿಪಟುಗಳು ನೀಡಿದ್ದ ಗಡುವು (ಮೇ 21) ಸಮೀಪಿಸುತ್ತಿದ್ದಂತೆ ಜಂತರ್-ಮಂತರ್ ಹಾಗೂ ದೆಹಲಿ ಹೊರವಲಯಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪಂಜಾಬ್, ಹರಾರಯಣ, ಉತ್ತರ ಪ್ರದೇಶಗಳಿಂದ ಸಾವಿರಾರು ರೈತರು ಆಗಮಿಸುವ ನಿರೀಕ್ಷೆ ಇದೆ. ಹಲವು ಸ್ಥಳಗಳಲ್ಲಿ ಸಿಸಿಟೀವಿಗಳನ್ನು ಅಳವಡಿಸಲಾಗಿದೆ.
ಟೆನಿಸ್: ಫ್ರೆಂಚ್ ಓಪನ್‌ಗೆ ಸ್ವಿಯಾಟೆಕ್ ಅನುಮಾನ!
ರೋಮ್: ರಾಫೆಲ್ ನಡಾಲ್ ಬಳಿಕ ಫ್ರೆಂಚ್ ಓಪನ್‌ನಿಂದ ಹಾಲಿ ಮಹಿಳಾ ಸಿಂಗಲ್ಸ್ ಚಾಂಪಿಯನ್, ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಕೂಡ ಹಿಂದೆ ಸರಿಯುವ ಸಾಧ್ಯತೆ ಇದೆ. ಗುರುವಾರ ಇಟಲಿಯನ್ ಓಪನ್ ಪಂದ್ಯದ ವೇಳೆ ಗಾಯಗೊಂಡ ವಿಶ್ವ ನಂ.1 ಆಟಗಾರ್ತಿ ನಿವೃತ್ತಿ ಪಡೆದು ಪಂದ್ಯದಿಂದ ಹೊರನಡೆದರು.
ಮೇ 28ರಂದು ಫ್ರೆಂಚ್ ಓಪನ್ ಆರಂಭಗೊಳ್ಳಲಿದ್ದು, ತೊಡೆಯ ಗಾಯಕ್ಕೆ ತುತ್ತಾಗಿರುವ ಸ್ವಿಯಾಟೆಕ್ ಅಷ್ಟರೊಳಗೆ ಚೇತರಿಕೆ ಕಾಣುವ ವಿಶ್ವಾಸ ವ್ಯಕ್ತಪಡಿಸಿದ್ದರೂ, ಚೇತರಿಕೆ ಹಾದಿ ಕಷ್ಟಎಂದು ಹೇಳಲಾಗುತ್ತಿದೆ. 2020, 2022ರಲ್ಲಿ ಸ್ವಿಯಾಟೆಕ್ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದರು.