ಅಂತರಾಷ್ಟ್ರೀಯ ಕ್ರಿಕೆಟ್'ಗೆ ಡ್ವೇನ್ ಸ್ಮಿತ್ ಗುಡ್'ಬೈ..!

Published : Mar 02, 2017, 10:27 AM ISTUpdated : Apr 11, 2018, 12:40 PM IST
ಅಂತರಾಷ್ಟ್ರೀಯ ಕ್ರಿಕೆಟ್'ಗೆ ಡ್ವೇನ್ ಸ್ಮಿತ್ ಗುಡ್'ಬೈ..!

ಸಾರಾಂಶ

ಐಪಿಎಲ್'ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿರುವ ಸ್ಮಿತ್ ದೇಶಿಯ ಟಿ20 ಟೂರ್ನಿಯಲ್ಲಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.

ಬಾರ್ಬಡೋಸ್(ಮಾ.02): ಕೆರೀಬಿಯನ್ ತಂಡದ ಹೊಡಿಬಡಿ ದಾಂಡಿಗ ಡ್ವೇನ್ ಸ್ಮಿತ್ ಎಲ್ಲಾ ವಿಧದ ಅಂತರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಘೋಷಿಸಿದ್ದಾರೆ. 

33 ವರ್ಷದ ಡ್ವೇನ್ ಸ್ಮಿತ್ 2015ರ ವಿಶ್ವಕಪ್'ನಲ್ಲಿ ಯುಎಇ ವಿರುದ್ಧ ವೆಸ್ಟ್'ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಆನಂತರ ರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆಯುವಲ್ಲಿ ಸ್ಮಿತ್ ವಿಫಲರಾಗಿದ್ದರು.

ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಪ್ರತಿನಿಧಿಸುತ್ತಿರುವ ಸ್ಮಿತ್ ಬುಧವಾರ ಕರಾಚಿ ಕಿಂಗ್ಸ್ ವಿರುದ್ಧ ಅರ್ಹತಾ ಫೈನಲ್ ಪಂದ್ಯವನ್ನು ಪ್ರತಿನಿಧಿಸಲಿದ್ದಾರೆ.

ಐಪಿಎಲ್'ನಲ್ಲಿ ಗುಜರಾತ್ ಲಯನ್ಸ್ ತಂಡದಲ್ಲಿರುವ ಸ್ಮಿತ್ ದೇಶಿಯ ಟಿ20 ಟೂರ್ನಿಯಲ್ಲಿ ತಮ್ಮ ಆಟವನ್ನು ಮುಂದುವರೆಸಲಿದ್ದಾರೆ.

ಒಟ್ಟು 105 ಏಕದಿನ ಪಂದ್ಯಗಳಿಂದ 1,560 ಹಾಗೂ 33 ಟಿ20 ಪಂದ್ಯಗಳಿಂದ 582 ರನ್ ಬಾರಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs NZ: ಎರಡನೇ ಟಿ20ಯಿಂದ ಸ್ಪೋಟಕ ಬ್ಯಾಟರ್ ಔಟ್; ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್? ಕೋಚ್ ಹೇಳಿದ್ದೇನು?
ಟೆಸ್ಟ್‌ನಲ್ಲಿ 300 ರನ್, ಏಕದಿನದಲ್ಲಿ 200 ರನ್, ಟಿ20ಯಲ್ಲಿ 100 ರನ್: ಈ ಸಾಧನೆ ಮಾಡಿದ ಇಬ್ಬರು ಕ್ರಿಕೆಟಿಗರಿವರು..! ಇಬ್ಬರಲ್ಲಿ ಒಬ್ಬರು ಆರ್‌ಸಿಬಿ ಪ್ಲೇಯರ್