
IPL 10ನೇ ಆವ್ತತ್ತಿ ಆರಂಭವಾಗಲು ಇನ್ನು ಒಂದು ತಿಂಗಳು ಬಾಕಿ ಇದೆ. ಎಲ್ಲಾ ಸ್ಟಾರ್ ಆಟಗಾರರು ತಮ್ಮ ತಮ್ಮ ರಾಷ್ಟ್ರೀಯಾ ತಂಡದಲ್ಲಿ ಬ್ಯುಸಿಯಾಗಿದ್ದರೆ, RCBಯ ಕ್ರಿಸ್ ಗೇಲ್ ಮಾತ್ರ ಈಗಾಗಲೇ ತಯಾರಿ ಶುರುಮಾಡಿಕೊಂಡಿದ್ದಾರೆ. RCBಯ ಸ್ಫೋಟಕ ಬ್ಯಾಟ್ಸ್ಮನ್'ನ IPL ತಯಾರಿ ಹೇಗಿದೆ? ಇಲ್ಲಿದೆ ವಿವರ.
ಭಾರತದ ಕ್ರಿಕೆಟ್ ಹಬ್ಬ IPL ಶುರುವಾಗೋಕೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಇನ್ನೂ ಯಾವ ಆಟಗಾರನೂ ಸಹ ಇದರ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಅವರವರ ರಾಷ್ಟ್ರೀಯ ತಂಡಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ RCBಯ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಮಾತ್ರ ಈಗಾಗಲೇ IPL ಜಾತ್ರೆಗೆ ಸದ್ದಿಲ್ಲದೆ ಸಿದ್ಧರಾಗ್ತಿದ್ದಾರೆ.
ಸದ್ಯ ರಾಷ್ಟ್ರೀಯ ತಂಡ ವೆಸ್ಟ್ ಇಂಡೀಸ್'ನಿಂದ ದೂರ ಉಳಿದಿರುವ ಗೇಲ್ ಮೈದಾನದಲ್ಲಿ ಕಾಣಿಸಿಕೊಳ್ಳೋದು ತೀರ ಕಡಿಮೆ. ಅಲ್ಲೋಂದು ಇಲ್ಲೊಂದು ಲೀಗ್ಗಳಲ್ಲಿ ಬಿಟ್ಟರೆ ಉಳಿದ ಸಮಯವನ್ನೆಲ್ಲಾ ಮೋಜು ಮಸ್ತಿಯಲ್ಲೇ ಗೇಲ್ ಮುಳುಗಿ ಹೋಗಿರುತ್ತಾರೆ. ಅದರಲ್ಲೂ 2016ರ IPL ನಂತರ ಗೇಲ್ ಯಾವ ಲೀಗ್'ಗಳಲ್ಲೂ ಕಾಣಿಸಿಕೊಂಡೇ ಇಲ್ಲ.
2016ರ IPL ನಂತರ ಮೋಜು ಮಸ್ತಿಯಲ್ಲೇ ಮುಳುಗಿ ಹೋಗಿದ್ದ ಗೇಲ್ ಈ ಬಾರಿಯ ಆಸ್ಟ್ರೇಲಿಯಾದ ಬಿಗ್ಬ್ಯಾಷ್ನಲ್ಲೂ ಕಾಣಿಸಿಕೊಳ್ಳಲಿಲ್ಲ. ಒಟ್ಟಾರೆ ಹೇಳಬೇಕೆಂದರೆ 2016ರ IPL ಬಳಿಕ ಗೇಲ್ ಕ್ರಿಕೆಟ್ ಆಡೇ ಇಲ್ಲ.
ಕಳೆದ ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರವಿದ್ದು ಎಂಜಾಯ್ ಮಾಡುತ್ತಿದ್ದ ಗೇಲ್ ಈಗ ಎಚ್ಚರಗೊಂಡಿದ್ದಾರೆ. ಮುಂದಿನ ತಿಂಗಳು ಬೆಂಗಳೂರು ಜನರ ನಿದ್ದೆಗೆಡಿಸಲು ಮೈದಾನಕ್ಕಿಯಲಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸಲು ಮತ್ತೆ ಬ್ಯಾಟ್ ಕೈಗೆತ್ತಿಕೊಂಡಿದ್ದಾರೆ. ಅದಕ್ಕಾಗಿ ಅವರು ಆಯ್ದುಕೊಂಡಿರುವುದು ದುಬೈನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ಸೂಪರ್ ಲೀಗ್.
ಕ್ರಿಕೆಟ್ ಲೋಕದ ಪ್ಲೇ ಬಾಯ್ ಕ್ರಿಸ್ ಗೇಲ್ ಕಳೆದ IPL ನಂತರ ಬ್ಯಾಟ್ ಹಿಡಿದಿರುವುದು ಪಾಕಿಸ್ತಾನ ಸೂಪರ್ ಲೀಗ್'ನಲ್ಲಿ. ಅದೂ ಕೂಡ IPLಗಾಗಿ, IPLನಲ್ಲಿ ಅಬ್ಬರಿಸಲೇಂದೇ ಗೇಲ್ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಪಾಲ್ಗೊಂಡಿದ್ದಾರೆ.
ದುಬೈನಲ್ಲಿ ಪಾಕಸ್ತಾನ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ಪರ ಆಡುತ್ತಿರುವ ಗೇಲ್ ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ 17 ಬಾಲ್'ಗಳಲ್ಲಿ 44 ರನ್ ಬಾರಿಸುವ ಮೂಲಕ ತಮ್ಮ ತಂಡವನ್ನ ಪ್ಲೇ ಆಫ್ ತಂಡಕ್ಕೆ ಕೆರೆದೊಯ್ದಿದ್ದಾರೆ. ಅಷ್ಟೆ ಅಲ್ಲ IPL 10ನೇ ಆವೃತ್ತಿಗೆ ಭರ್ಜರಿ ತಯಾರಿ ನಡೆಸಿದ್ದಾರೆ.
IPL ಅನ್ನೂ ಅದ್ಭುತ ಟೂರ್ನಿಯನ್ನ ಸಿರೀಯಸ್ ಆಗಿ ತೆಗೆದುಕೊಂಡಿರುವ ದೈತ್ಯ ಗೇಲ್ ಅದಕ್ಕಾಗಿ ವರ್ಷವಿಡೀ ಮೋಜು ಮಸ್ತಿಯಲ್ಲಿ ಮುಳುಗಿದ್ರೂ IPL ಹತ್ತಿರವಾಗ್ತಿದಂತೆ ಎಲ್ಲದಕ್ಕೂ ಬ್ರೇಕ್ ಹಾಕಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿರೋದನ್ನ ನೋಡಿದ್ರೆ ಖಂಡಿತ ಈ ಬಾರಿ ಬೆಂಗಳೂರು ಜನ ಗೇಲ್ ಧಮಾಕವನ್ನ ಮತ್ತೊಮ್ಮೆ ನೋಡೋದು ಖಚಿತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.