''ವೆಸ್ಟ್ ಇಂಡೀಸ್'' 91 ವರ್ಷಗಳ ನಂತರ ಕ್ರಿಕೆಟ್ ಆಟಕ್ಕೆ ವಿದಾಯ ?

By Suvarna Web DeskFirst Published Jun 3, 2017, 12:45 AM IST
Highlights

ಅರೆ ಇದೇನು ಇನ್ನು ಮುಂದೆ 'ವೆಸ್ಟ್ ಇಂಡೀಸ್' ಕ್ರಿಕೆಟ್ ಆಡುವುದಿಲ್ಲವೇ ಎಂದು ಕೊಳ್ಳಬೇಡಿ.

ಸೇ.ಜಾನ್ಸ್(ಜೂ.03):  ಎರಡು ಬಾರಿ ಏಕ ದಿನ, ಒಮ್ಮೆ ಚುಟುಕು ಕ್ರಿಕೆಟ್ ವಿಶ್ವ ಕಪ್ ಹಾಗೂ ನೂರಾರು ಟೆಸ್ಟ್'ಗಳನ್ನು ಗೆದ್ದಿರುವ ಕೆರೆಬಿಯನ್ ತಂಡ ಎಂದೆ ಪ್ರಸಿದ್ಧಿ ಪಡೆದಿರುವ ವೆಸ್ಟ್ ಇಂಡೀಸ್ ಕ್ರೆಕೆಟ್ ಆಟಕ್ಕೆ ವಿದಾಯ ಹೇಳಿದೆ. ಅರೆ ಇದೇನು ಇನ್ನು ಮುಂದೆ 'ವೆಸ್ಟ್ ಇಂಡೀಸ್' ಕ್ರಿಕೆಟ್ ಆಡುವುದಿಲ್ಲವೇ ಎಂದು ಕೊಳ್ಳಬೇಡಿ.

ಅವರು 'ವೆಸ್ಟ್ ಇಂಡೀಸ್' ಆಗಿ ಕ್ರಿಕೆಟ್ ಆಡುವುದಿಲ್ಲ ಬದಲಾಗಿ ‘ವಿಂಡೀಸ್' ಇನ್ನು ಮುಂದೆ ಕಾಣಿಸಿಕೊಳ್ಳುತ್ತಾರೆ. ಹೌದು ತಮ್ಮ 91ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ 'ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿ'  ಅಧಿಕೃತವಾಗಿ ವಿಂಡೀಸ್ ಎಂದು

ಬದಲಾಯಿಸಿಕೊಂಡಿದ್ದು, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಕೂಡ ಪ್ರಕಟಿಸಿದೆ. ಜೊತೆಗೆ ಕ್ರಿಕೆಟ್ ಮಂಡಳಿಯ ಹೆಸರನ್ನು  ವೆಸ್ಟ್‌ಇಂಡೀಸ್ ಕ್ರಿಕೆಟ್ ಬೋರ್ಡ್’ನಿಂದ ‘ಕ್ರಿಕೆಟ್ ವೆಸ್ಟ್‌ಇಂಡೀಸ್’ಗೆ ಬದಲಾಯಿಸಲಾಗಿದೆ.

ಮುಂದಿನ ವರ್ಷದಿಂದ ಸಾಮಾನ್ಯ ಕ್ರಿಕೆಟ್ ತಂಡವಾಗಿರುವುದಲ್ಲದೆ 70 ಹಾಗೂ 80ರ ದಶಕದಲ್ಲಿ ಮೆರೆದಿದ್ದ ಇತಿಹಾಸವನ್ನು ಪುನಃ ಮರುಕಳಿಸಲಿದೆಯಂತೆ. ಇದಕ್ಕಾಗಿ ಹಲವು ನೂತನ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕ್ರಿಕೆಟ್ ವೆಸ್ಟ್‌ಇಂಡೀಸ್ ಮಂಡಳಿಯ ಸಿಇಒ ತಿಳಿಸಿದ್ದಾರೆ.   

click me!