ಕೊಹ್ಲಿ ಜತೆ ಕನ್ನಡಿಗನನ್ನು ಹೋಲಿಸಿದ ಕ್ರಿಸ್ ಗೇಲ್..!

Published : Apr 30, 2019, 03:56 PM IST
ಕೊಹ್ಲಿ ಜತೆ ಕನ್ನಡಿಗನನ್ನು ಹೋಲಿಸಿದ ಕ್ರಿಸ್ ಗೇಲ್..!

ಸಾರಾಂಶ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಂತೆ ಮಿಂಚುವ ಸಾಮರ್ಥ್ಯ ಈ ಕನ್ನಡಿಗನಿಗಿದೆ ಎನ್ನುವ ಮಾತನ್ನು ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೇಳಿದ್ದಾರೆ. ಅಷ್ಟಕ್ಕೂ ಯಾರು ಆ ಬ್ಯಾಟ್ಸ್’ಮನ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ... 

ನವದೆಹಲಿ(ಏ.30): ವಿರಾಟ್‌ ಕೊಹ್ಲಿ ಬಳಿಕ ಭಾರತೀಯ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಆಗಿ ಪ್ರಜ್ವಲಿಸುವ ಸಾಮರ್ಥ್ಯ ಕರ್ನಾಟಕದ ಕೆ.ಎಲ್‌.ರಾಹುಲ್‌ಗಿದೆ ಎಂದು ವೆಸ್ಟ್‌ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಕ್ರಿಸ್‌ ಗೇಲ್‌ ಅಭಿಪ್ರಾಯಿಸಿದ್ದಾರೆ. 

ರಾಹುಲ್ ಏಕಾಂಗಿ ಹೋರಾಟ ವ್ಯರ್ಥ- SRHಗೆ 45 ರನ್ ಗೆಲುವು!

ಸಂದರ್ಶನವೊಂದರಲ್ಲಿ ಮಾತನಾಡಿರುವ ಗೇಲ್‌, ‘ಕೊಹ್ಲಿ ರೀತಿ ಅತ್ಯುತ್ತಮ ಆಟವಾಡಬಲ್ಲ ಆಟಗಾರ ಎಂದರೆ ನನಗೆ ತಕ್ಷಣಕ್ಕೆ ನೆನಪಾಗುವುದು ರಾಹುಲ್‌. ಅವರಲ್ಲಿ ಆ ಪ್ರತಿಭೆ, ಸಾಮರ್ಥ್ಯವಿದೆ. ಆದರೆ ಅವರು ಒತ್ತಡಕ್ಕೆ ಸಿಲುಕದೆ, ತಮ್ಮ ಆಟದ ಕಡೆ ಹೆಚ್ಚು ಗಮನ ಹರಿಸುತ್ತಾ, ಯಾರೊಂದಿಗೂ ಪೈಪೋಟಿಗೆ ಬೀಳದೆ ಆಡಬೇಕಷ್ಟೆ’ ಎಂದು ಹೇಳಿದ್ದಾರೆ. ರಾಹುಲ್‌ ಹಾಗೂ ಗೇಲ್‌ ಸದ್ಯ ಐಪಿಎಲ್‌ನಲ್ಲಿ ಪಂಜಾಬ್‌ ತಂಡದ ಪರ ಆಡುತ್ತಿದ್ದಾರೆ.

ನಿರಾಸೆ ಬೇಡ; RCB ಅಭಿಮಾನಿಗಳಿಗಿದು ಗುಡ್ ನ್ಯೂಸ್!

ಕೆ.ಎಲ್ ರಾಹುಲ್ 12ನೇ ಆವತ್ತಿಯ ಐಪಿಎಲ್’ನಲ್ಲಿ ಇದುವರೆಗೂ 12 ಪಂದ್ಯಗಳನ್ನಾಡಿ 57ರ ಸರಾಸರಿಯಲ್ಲಿ 1 ಶತಕ ಮತ್ತು 5 ಅರ್ಧಶತಕ ಸಹಿತ 520 ರನ್ ಬಾರಿಸಿದ್ದು, ಪ್ರಸ್ತುತ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಸನ್’ರೈಸರ್ಸ್ ವಿರುದ್ಧ 56 ಎಸೆತಗಳಲ್ಲಿ 79 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ