ಪಟಾಕಿಯಿಂದ ಕೈಸುಟ್ಟುಕೊಂಡಿದ್ದ ಪೂಜಾಗೆ ಏಷ್ಯಾ ಬಾಕ್ಸಿಂಗ್‌ ಚಿನ್ನ!

By Web Desk  |  First Published Apr 30, 2019, 2:15 PM IST

ಕಳೆದ ವಾರ ಬ್ಯಾಂಕಾಕ್‌ನಲ್ಲಿ ಮುಕ್ತಾಯಗೊಂಡ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 81 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಚೀನಾದ ವಾಂಗ್‌ ಲೀನಾ ವಿರುದ್ಧ ಜಯಿಸಿ, ಪೂಜಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಹೀಗಿತ್ತು ನೋಡಿ ಅವರ ಜರ್ನಿ...


ನವದೆಹಲಿ(ಏ.30): 2016ರಲ್ಲಿ ಪಟಾಕಿಯಿಂದ ಕೈಸುಟ್ಟುಕೊಂಡಿದ್ದ ಯುವತಿ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ ಆಗುವುದು ಎಂದರೆ ಸಾಮಾನ್ಯದ ಸಾಧನೆಯಲ್ಲ. ಅಂತಹ ಸಾಧನೆಯನ್ನು ಹರ್ಯಾಣದ ಪೂಜಾ ರಾಣಿ ಮಾಡಿದ್ದಾರೆ. 

ಕಳೆದ ವಾರ ಬ್ಯಾಂಕಾಕ್‌ನಲ್ಲಿ ಮುಕ್ತಾಯಗೊಂಡ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 81 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಚೀನಾದ ವಾಂಗ್‌ ಲೀನಾ ವಿರುದ್ಧ ಜಯಿಸಿ, ಪೂಜಾ ಚಿನ್ನದ ಪದಕಕ್ಕೆ ಮುತ್ತಿಟ್ಟರು.

Latest Videos

undefined

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌: ಫೈನಲ್‌ಗೆ 6 ಭಾರತೀಯರು

3 ವರ್ಷಗಳ ಹಿಂದೆ ದೀಪಾವಳಿ ವೇಳೆ ಪಟಾಕಿ ಸಿಡಿಸುವಾಗ ಕೈಸುಟ್ಟುಕೊಂಡು ದೊಡ್ಡ ಪ್ರಮಾಣದ ಗಾಯಕ್ಕೆ ತುತ್ತಾಗಿದ್ದ ಪೂಜಾ, ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಲು 7ರಿಂದ 8 ತಿಂಗಳು ಬೇಕಾಗಿತ್ತು. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷಕ್ಕೂ ಹೆಚ್ಚು ಸಮಯ ಹಿಡಿದಿತ್ತು. ಈ ಗಾಯ ಸರಿಹೋಯಿತು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ ಎದುರಾಯಿತು. 2017ರ ಕೊನೆಯಲ್ಲಿ ಭುಜದ ಗಾಯಕ್ಕೆ ತುತ್ತಾದ ಪೂಜಾ, ಬಾಕ್ಸಿಂಗ್‌ ವೃತ್ತಿಬದುಕೇ ಮುಗಿದು ಹೋಯಿತು ಎಂದು ಹಲವು ಮಾತನಾಡಿದ್ದರು. ಆದರೆ ಛಲ ಬಿಡದೆ ಹೋರಾಡಿದ ಪೂಜಾ, 2018ರಲ್ಲಿ 81 ಕೆ.ಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ ಆಗಿ ಹೊರಹೊಮ್ಮಿ ಅಚ್ಚರಿ ಮೂಡಿಸಿದರು.

2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಹೊಂದಿರುವ ಪೂಜಾ, 75 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ. ಕಡಿಮೆ ಸಮಯದಲ್ಲಿ ಹೊಸ ತೂಕ ವಿಭಾಗಕ್ಕೆ ಹೊಂದಿಕೊಳ್ಳುವುದು ಪೂಜಾ ಮುಂದಿರುವ ಹೊಸ ಸವಾಲು.

click me!