
ದೆಹಲಿ(ಜು.22): ಟೀಂ ಇಂಡಿಯಾಗೆ ಆಯ್ಕೆಯಾಗಬೇಕಾದರೆ ಈಗ ಯೋ-ಯೋ ಪರೀಕ್ಷೆ ಪಾಸ್ ಆಗಲೇಬೇಕು. ಇತ್ತೀಚೆಗೆ ಯೋ-ಯೋ ಟೆಸ್ಟ್ ಭಾರಿ ಸದ್ದು ಮಾಡಿತ್ತು. ಈ ಕುರಿತು ಪರ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.
ಯೋ-ಯೋ ಟೆಸ್ಟ್ ಪಾಸ್ ಮಾಡಿದರೆ ಮಾತ್ರ ಟೀಂ ಇಂಡಿಯಾದಲ್ಲಿ ಸ್ಥಾನ. ಹೀಗಾಗಿ ಫಿಟ್ನೆಸ್ ತುಂಬಾ ಮುಖ್ಯ. ದೈಹಿಕವಾಗಿ ಫಿಟ್ ಆಗಿಲ್ಲದಿದ್ದರೆ, ಯೋ-ಯೋ ಟೆಸ್ಟ್ ಫಾಸ್ ಮಾಡೋದು ಸುಲುಭವಲ್ಲ. ಹಲವು ಕ್ರಿಕೆಟಿಗರು ವೈಫಲ್ಯ ಅನುಭವಿಸಿದ ಯೋ-ಯೋ ಪರೀಕ್ಷೆಯನ್ನ ಇದೀಗ ಟೀಂ ಇಂಡಿಯಾ ಕ್ರಿಕೆಟರ್ ಗೌತಮ್ ಗಂಭೀರ್ ಪುತ್ರಿ ಪಾಸ್ ಮಾಡಿದ್ದಾಳೆ.
ಟೀಂ ಇಂಡಿಯಾ ಡ್ಯಾಶಿಂಗ್ ಒಪನರ್ ಗೌತಮ್ ಗಂಭೀರ್ ಟ್ವಿಟರ್‌ನಲ್ಲಿ ಪುತ್ರಿ ಯೋ-ಯೋ ಪರೀಕ್ಷೆ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಪುತ್ರಿ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದಾಳೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್‌ಗೆ ಹೆಸರು ಪ್ರಸ್ತಾಪಿಸಿ ನಿಮ್ಮ ಫಿಟ್ನೆಸ್ ಟೆಸ್ಟ್ ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.