ಮೊದಲಿಗೆ ಈ ವದಂತಿಯ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಮೇರಠ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಭಿಷೇಕ್ ಪಾಂಡೆ, "ಈ ಘಟನೆಯ ಕುರಿತಂತೆ ನನಗೆ ಯಾವುದೇ ಮಾಹಿತಿ ಸದ್ಯಕ್ಕಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೇ, ಮೇರಠ್ ಅಭಿವೃದ್ಧಿ ಪ್ರಾಧಿಕಾರವು ಆ ಪ್ರತಿಮೆಗೆ ಹೊಸದಾಗಿ ಜಾವೆಲಿನ್ ಅಳವಡಿಸಲಿದೆ" ಎಂದು ಹೇಳಿದ್ದರು.
ಮೇರಠ್(ಸೆ.6): ಮೇರಠ್‌ನಲ್ಲಿ ಇತ್ತೀಚೆಗೆ ಸ್ಥಾಪನೆಗೊಂಡಿದ್ದ ವಿಶ್ವ ಚಾಂಪಿಯನ್, ಭಾರತದ ತಾರಾ ಅಥ್ಲೀಟ್ ನೀರಜ್ ಚೋಪ್ರಾರ ಪ್ರತಿಮೆಯಲ್ಲಿದ್ದ ಜಾವೆಲಿನ್ ನಾಪತ್ತೆಯಾದ ಬಗ್ಗೆ ಮಂಗಳವಾರ ಭಾರೀ ವದಂತಿ ಹರಡಿದೆ. ಆಗಸ್ಟ್ 29ರಂದು ನೀರಜ್ ಪ್ರತಿಮೆಯನ್ನು ಮೇರಠ್ ಅಭಿವೃದ್ಧಿ ಪ್ರಾಧಿಕಾರವು ಹಾಪುರ್ ಎಂಬಲ್ಲಿ ಸ್ಥಾಪಿಸಿತ್ತು. ಆದರೆ ಮಂಗಳವಾರ ಪ್ರತಿಮೆಯ ಜಾವೆಲಿನ್ ಕಾಣದಾಗಿದ್ದು, ಕಳವಾಗಿರುವ ಶಂಕೆ ವ್ಯಕ್ತವಾಗಿತ್ತು.
ಮೊದಲಿಗೆ ಈ ವದಂತಿಯ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಮೇರಠ್ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಅಭಿಷೇಕ್ ಪಾಂಡೆ, "ಈ ಘಟನೆಯ ಕುರಿತಂತೆ ನನಗೆ ಯಾವುದೇ ಮಾಹಿತಿ ಸದ್ಯಕ್ಕಿಲ್ಲ. ಒಂದು ವೇಳೆ ಇದು ನಿಜವೇ ಆಗಿದ್ದರೇ, ಮೇರಠ್ ಅಭಿವೃದ್ಧಿ ಪ್ರಾಧಿಕಾರವು ಆ ಪ್ರತಿಮೆಗೆ ಹೊಸದಾಗಿ ಜಾವೆಲಿನ್ ಅಳವಡಿಸಲಿದೆ" ಎಂದು ಹೇಳಿದ್ದರು.
undefined
US Open 2023: ಆಲ್ಕರಜ್, ಸಬಲೆಂಕಾ ಕ್ವಾರ್ಟರ್‌ಗೆ ಲಗ್ಗೆ
ಇನ್ನು ಸಂಜೆ ವೇಳೆಗೆ ಮೇರಠ್ ಅಭಿವೃದ್ಧಿ ಪ್ರಾಧಿಕಾರವು ತನ್ನ ಹೇಳಿಕೆಗೆ ಯು ಟರ್ನ್ ತೆಗೆದುಕೊಂಡಿದ್ದು, ಜಾವೆಲಿನ್ ಅನ್ನು ನಾವೇ ತೆರವುಗೊಳಿಸಿದ್ದು, ಹೊಸದಾಗಿ ಅಸಲಿ ಜಾವೆಲಿನ್ ಅಳವಡಿಸಲಿದ್ದೇವೆ ಎಂದು ಹೇಳಿದೆ. ನೀರಜ್ ಚೋಪ್ರಾ ಪ್ರತಿಮೆಯಲ್ಲಿ ಜಾವೆಲಿನ್ ಕಳವಾಗಿದ್ದರ ಬಗ್ಗೆ ಯಾವುದೇ ಎಫ್‌ಐಆರ್ ಇದುವರೆಗೂ ದಾಖಲಾಗಿಲ್ಲ.
Several reports had surfaced claiming javelin from Neeraj Chopra's statue in UP's Meerut had gone missing. Police now claims the Javelin was not stolen. The long plastic javelin was replaced months ago with the actual smaller one. pic.twitter.com/z1Zaug6NkI
— Piyush Rai (@Benarasiyaa)ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು, ಜಾವೆಲಿನ್ ನಾಪತ್ತೆ ಸುದ್ದಿ ಅಲ್ಲಗಳೆದಿದ್ದಾರೆ. ‘ಮೊದಲಿಗೆ ನಕಲಿ ಜಾವೆಲಿನ್ ಅಳವಡಿಸಲಾಗಿತ್ತು. ಅದನ್ನು ಈಗ ಬದಲಾಯಿಸಿ ಹೊಸದಾಗಿ ಅಸಲಿ ಜಾವೆಲಿನ್ ಅನ್ನು ಅಳವಡಿಸಲಾಗಿದೆ’ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಜೂರಿಚ್ ಡೈಮಂಡ್ ಲೀಗ್: ಎರಡನೇ ಸ್ಥಾನ ಪಡೆದ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಇನ್ನು ಜಾವೆಲಿನ್ ಬದಲಾಗಿರುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೇರಠ್ ಅಭಿವೃದ್ಧಿ ಪ್ರಾಧಿಕಾರದ ಜೂನಿಯರ್ ಇಂಜಿನಿಯರ್ ಪವನ್ ಭಾರಧ್ವಾಜ್, " ನೀರಜ್ ಚೋಪ್ರಾ ಪ್ರತಿಮೆಗೆ ಅಳವಡಿಸಿರುವ ಜಾವೆಲಿನ್ ಪ್ಲಾಸ್ಟಿಕ್‌ನದ್ದು ಆಗಿದ್ದರಿಂದ ಕೆಲವು ಅದನ್ನು ವಿರೋಧಿಸಿದ್ದರು. ಈ ಕಾರಣಕ್ಕಾಗಿಯೇ ನಾವು ಕಳೆದ ಭಾನುವಾರ ರಾತ್ರಿ ಆ ಜಾವೆಲಿನ್ ತೆರವು ಮಾಡಿದ್ದೆವು. ಇದೀಗ ಕಬ್ಬಿಣದ ಜಾವೆಲಿನ್ ಅನ್ನು ಆ ಪ್ರತಿಮೆಗೆ ಅಳವಡಿಸಲಿದ್ದೇವೆ. ಇದನ್ನು ಮುರಿಯಲು ಆಗಲ್ಲ ಹಾಗೆಯೇ ಕಳ್ಳತನ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಡೈಮಂಡ್ ಲೀಗ್: ನೀರಜ್ ಸ್ವಿಜರ್‌ಲೆಂಡಲ್ಲಿ ಅಭ್ಯಾಸ
ನವದೆಹಲಿ: ಸೆ.16, 17ರಂದು ನಡೆಯಲಿರುವ ಡೈಮಂಡ್ ಲೀಗ್ ಫೈನಲ್ಸ್ ಸಿದ್ಧತೆಗಾಗಿ ನೀರಜ್ ಚೋಪ್ರಾ ಸ್ವಿಜರ್‌ಲೆಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಕೇಂದ್ರ ಕ್ರೀಡಾ ಸಚಿವಾಲಯ ನೀರಜ್‌ಗೆ ಪ್ರವಾಸ ಹಾಗೂ ಸಿದ್ಧತೆಯ ವೆಚ್ಚ ಭರಿಸುವುದಾಗಿ ತಿಳಿಸಿದೆ. ಡೈಮಂಡ್ ಲೀಗ್ ಫೈನಲ್ ಬಳಿಕ ನೀರಜ್ ಏಷ್ಯಾಡ್‌ನಲ್ಲಿ ಸ್ಪರ್ಧಿಸಲು ಚೀನಾಕ್ಕೆ ಪ್ರಯಾಣಿಸಲಿದ್ದಾರೆ.
2027ರ ವಿಶ್ವ ಅಥ್ಲೆಟಿಕ್ಸ್ ಕೂಟಕ್ಕೆ ಭಾರತ ಬಿಡ್?
ಜೂರಿಚ್: 2027ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆತಿಥ್ಯ ಹಕ್ಕು ಪಡೆಯಲು ಭಾರತ ಬಿಡ್ ಸಲ್ಲಿಸಲಿದೆ ಎಂದು ತಾರಾ ಅಥ್ಲೀಟ್ ನೀರಜ್ ಚೋಪ್ರಾ ಹೇಳಿದ್ದಾರೆ. ಡೈಮಂಡ್ ಲೀಗ್‌ನ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀರಜ್ ಈ ವಿಷಯ ಬಹಿರಂಗಪಡಿಸಿದರು. ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ಬಿಡ್ ಸಲ್ಲಿಸಲು ಆಸಕ್ತಿ ವಹಿಸಿದ್ದು, ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ. ಬಿಡ್ ಸಲ್ಲಿಸಲು ಅಕ್ಟೋಬರ್ 2 ಕೊನೆಯ ದಿನವಾಗಿದೆ. ಈಗಾಗಲೇ ಬೀಜಿಂಗ್‌ನಲ್ಲಿ ಕೂಟ ಆಯೋಜಿಸಲು ಆಸಕ್ತಿ ತೋರಿ ಚೀನಾ ಬಿಡ್ ಸಲ್ಲಿಸಿದೆ.