ಸ್ಪೇನ್‌ನ 20ರ ಆಲ್ಕರಜ್, ಇಟಲಿಯ ಶ್ರೇಯಾಂಕ ರಹಿತ ಮತೇವೊ ಅರ್ನಾಲ್ಡಿ ವಿರುದ್ಧ 6-3, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್‌ನಲ್ಲಿ ಆಲ್ಕರಜ್‌ಗೆ ಜರ್ಮನಿಯ ಜ್ವೆರೆವ್ ಸವಾಲು ಎದುರಾಗಲಿದೆ.
ನ್ಯೂಯಾರ್ಕ್(ಸೆ.06): ಸತತ 2ನೇ ಬಾರಿ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಳ್ಳಲು ಎದುರು ನೋಡುತ್ತಿರುವ ಟೆನಿಸ್ ಲೋಕದ ಯುವ ಸೂಪರ್ ಸ್ಟಾರ್ ಕಾರ್ಲೊಸ್ ಆಲ್ಕರಜ್, ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 3ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದ್ದಾರೆ.
ಸೋಮವಾರ ರಾತ್ರಿ ಪುರುಷರ ಸಿಂಗಲ್ಸ್ 4ನೇ ಸುತ್ತಿನ ಹಣಾಹಣಿಯಲ್ಲಿ ಸ್ಪೇನ್‌ನ 20ರ ಆಲ್ಕರಜ್, ಇಟಲಿಯ ಶ್ರೇಯಾಂಕ ರಹಿತ ಮತೇವೊ ಅರ್ನಾಲ್ಡಿ ವಿರುದ್ಧ 6-3, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದರು. ಕ್ವಾರ್ಟರ್‌ನಲ್ಲಿ ಆಲ್ಕರಜ್‌ಗೆ ಜರ್ಮನಿಯ ಜ್ವೆರೆವ್ ಸವಾಲು ಎದುರಾಗಲಿದೆ. ಜ್ವೆರೆವ್ ಪ್ರಿ ಕ್ವಾರ್ಟರ್‌ನಲ್ಲಿ ಇಟಲಿಯ ಜಾನಿಕ್ ಸಿನ್ನರ್‌ರನ್ನು 6-4, 3-6, 6-2, 4-6, 6-3 ಸೆಟ್‌ಗಳಲ್ಲಿ ಸೋಲಿಸಿದರು. ಇದೇ ವೇಳೆ ರಷ್ಯಾದ ಮೆಡ್ವೆಡೆವ್ ಆಸ್ಟ್ರೇಲಿಯಾದ ಅಲೆಕ್ಸ್ ಡೆ ಮಿನಾರ್ ವಿರುದ್ಧ 2-6, 6-4, 6-1, 6-2 ಅಂತರದಲ್ಲಿ ಜಯಗಳಿಸಿದರು.
undefined
ಕರ್ನಾಟಕದ ಪ್ರಸಿದ್ಧ ಬಾಕ್ಸರ್ ಮಲ್ಪೆಯ ವಿರಾಜ್ ಮೆಂಡನ್ ಆತ್ಮಹತ್ಯೆ
ಜಬುರ್‌ಗೆ ಸೋಲು, ಸಬಲೆಂಕಾ ಮುನ್ನಡೆ
ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ ಬಾರಿ ರನ್ನರ್-ಅಪ್ ಒನ್ಸ್ ಜಬುರ್ ಸೋತು ಹೊರಬಿದ್ದಿದ್ದಾರೆ. ಕಳೆದೊಂದು ವರ್ಷದಲ್ಲಿ 3 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಸೋತಿದ್ದ ಟ್ಯುನೀಶಿಯಾದ ಜಬುರ್, ಚೀನಾದ 23ನೇ ಶ್ರೇಯಾಂಕಿತೆ ಕ್ಷಿನ್‌ವೆನ್ ಝೆಂಗ್ ವಿರುದ್ಧ 2-6, 4-6ರಲ್ಲಿ ಪರಾಭವಗೊಂಡರು. ಇದೇ ವೇಳೆ ನೂತನ ವಿಶ್ವ ನಂ.1 ಅರೈನಾ ಸಬಲೆಂಕಾ, 13ನೇ ಶ್ರೇಯಾಂಕಿತೆ, ರಷ್ಯಾದ ಡರಿಯಾ ಕಸತ್ಕಿನಾ ವಿರುದ್ಧ 6-1, 6-3ರಲ್ಲಿ ಗೆದ್ದು ಕ್ವಾರ್ಟರ್‌ಗೇರಿದರು. 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಸೋತು ಹೊರಬಿದ್ದರು.
ಚೀನಾ ಓಪನ್: ಪ್ರಣಯ್, ಸೇನ್‌ಗೆ ಸೋಲಿನ ಆಘಾತ!
ಚಾಂಗ್ಝೂ(ಚೀನಾ): ಭಾರತದ ತಾರಾ ಶಟ್ಲರ್‌ಗಳಾದ ಎಚ್.ಎಸ್.ಪ್ರಣಯ್ ಹಾಗೂ ಲಕ್ಷ್ಯ ಸೇನ್ ಇಲ್ಲಿ ಆರಂಭಗೊಂಡ ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ ನಂ.6, ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದಿದ್ದ ಪ್ರಣಯ್ ಮಲೇಷ್ಯಾದ ತ್ಸೆ ಯಂಗ್ ವಿರುದ್ಧ 12-21, 21-13, 18-21 ಗೇಮ್‌ಗಳಲ್ಲಿ ಪರಾಭವಗೊಂಡರು. ಕಾಮನ್‌ವೆಲ್ತ್ ಚಾಂಪಿಯನ್ ಸೇನ್ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟನ್ಸೆನ್ ವಿರುದ್ಧ 21-23, 21-16, 9-21ರಲ್ಲಿ ಸೋತರು. ಯುವ ಪ್ರತಿಭೆ ಪ್ರಿಯಾನ್ಶು ರಾಜಾವತ್ ಇಂಡೋನೇಷ್ಯಾದ ಶೇಸರ್ ಹಿರೇನ್ ವಿರುದ್ಧ 13-21, 24-26ರಲ್ಲಿ ಸೋತರೆ, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಜೋಡಿ ಕೂಡಾ ಸೋತು ಹೊರಬಿತ್ತು.
South Africa Squad: ವಿಶ್ವಕಪ್ ಟೂರ್ನಿಗೆ ಬಲಾಢ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ
ಏಷ್ಯಾಡ್‌ಗೆ ಭಾರತದ ಜೆರ್ಸಿ ಬಿಡುಗಡೆ
ನವದೆಹಲಿ: ಸೆಪ್ಟೆಂಬರ್ 23ರಿಂದ ಆರಂಭಗೊಳ್ಳಲಿರುವ ಏಷ್ಯನ್ ಗೇಮ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಜೆರ್ಸಿ, ಕಿಟ್ ಬಿಡುಗಡೆ ಹಾಗೂ ಅಥ್ಲೀಟ್‌ಗಳಿಗೆ ಬೀಳ್ಕೊಡುಗೆ ಸಮಾರಂಭ ಮಂಗಳವಾರ ನವದೆಹಲಿಯಲ್ಲಿ ನಡೆಯಿತು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಭಾರತೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷೆ ಪಿ.ಟಿ.ಉಷಾ, ಅಥ್ಲೀಟ್‌ಗಳು, ಗಣ್ಯರು ಉಪಸ್ಥಿತರಿದ್ದರು.