ಲೆಜೆಂಡ್ಸ್ ಚೆಸ್: ಆನಂದ್ ವಿರುದ್ದ 5 ಅಂಕಗಳ ಮುನ್ನಡೆ ಪಡೆದ ಗ್ಯಾರಿ ಕ್ಯಾಸ್ಪರೊವ್

Published : Oct 11, 2025, 10:56 AM IST
Viswanathan Anand

ಸಾರಾಂಶ

ಕ್ಲಚ್ ಚೆಸ್ - ದಿ ಲೆಜೆಂಡ್ಸ್ ಟೂರ್ನಿಯಲ್ಲಿ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ ವಿರುದ್ಧ ಭಾರತದ ವಿಶ್ವನಾಥನ್ ಆನಂದ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಎರಡು ದಿನಗಳ ನಂತರ ಕ್ಯಾಸ್ಪರೋವ್ 8.5 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಆನಂದ್ 3.5 ಅಂಕ ಗಳಿಸಿದ್ದಾರೆ.  

ಸೇಂಟ್ ಲೂಯಿಸ್ (ಅಮೆರಿಕ): ರಷ್ಯಾದ ದಿಗ್ಗಜ ಚೆಸ್‌ ಪಟು, ಮಾಜಿ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ವಿರುದ್ಧ ನಡೆಯುತ್ತಿರುವ ಕ್ಲಚ್ ಚೆಸ್‌ - ದಿ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ಭಾರೀ ಹಿನ್ನಡೆ ಅನುಭವಿಸಿದ್ದಾರೆ. 2 ದಿನಗಳ 8 ಸುತ್ತಿನ ಪಂದ್ಯಗಳ ಬಳಿಕ ಕ್ಯಾಸ್ಪರೊವ್ 8.5 ಅಂಕ ಹೊಂದಿದ್ದರೆ, ಆನಂದ್ 3.5 ಅಂಕ ಗಳಿಸಿದ್ದಾರೆ. 5 ಅಂಕಗಳ ಅಂತರದಲ್ಲಿ ಮುನ್ನಡೆಯಲ್ಲಿರುವ ಕ್ಯಾಸ್ಪರೋವ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಚಾಂಪಿಯನ್ ಆಗಲು ಇನ್ನೂ ಇದೆ ಆನಂದ್‌ಗೆ ಅವಕಾಶ

ಮೊದಲ ದಿನ 4 ಪಂದ್ಯಗಳಿಗೆ ತಲಾ 1 ಅಂಕಗಳಲ್ಲಿ ಭಾರೀ ಲೀಡ್ ಅಂಕವಿದ್ದರೆ, ಶುಕ್ರವಾರ ಪ್ರತಿ ಗೆಲುವಿಗೆ 2, ಡ್ರಾಗೆ 1 ಅಂಕ ನಿಗದಿಪಡಿಸಲಾಗಿತ್ತು. ಕ್ಯಾಸ್ಟರೊವ್ ರಾಪಿಡ್ ಹಾಗೂ ಬ್ಲಿಟ್ಜ್ ನಲ್ಲಿ ತಲಾ 1ರಲ್ಲಿ ಗೆದ್ದರೆ, ಮತ್ತೆರಡು ಪಂದ್ಯಗಳು ಡ್ರಾಗೊಂಡವು. ಶನಿವಾರ ಇನ್ನೂ 4 ಸುತ್ತಿನ ಪಂದ್ಯಗಳು ನಡೆಯಲಿವೆ. ಅದರಲ್ಲಿ ಪ್ರತಿ ಗೆಲುವಿಗೆ 3 ಅಂಕಗಳಿದ್ದು, ಡ್ರಾ ಆದರೆ 1.5 ಅಂಕ ಸಿಗಲಿದೆ. ಕೊನೆ ದಿನ ಉತ್ತಮ ಪ್ರದರ್ಶನ ನೀಡಿದರಷ್ಟೇ ಆನಂದ್‌ಗೆ ಗೆಲುವು ಸಾಧ್ಯ. ಟೂರ್ನಿಯ ವಿಜೇತರಿಗೆ 62 ಲಕ್ಷ ರುಪಾಯಿ, ರನ್ನರ್ -ಅಪ್‌ಗೆ 44 ಲಕ್ಷ ರುಪಾಯಿ ಸಿಗಲಿದೆ.

 

ಜೂ. ಬ್ಯಾಡ್ಮಿಂಟನ್: ಭಾರತಕ್ಕೆ ಐತಿಹಾಸಿಕ ಕಂಚಿನ ಪದಕದ ಗರಿ

ಗುವಾಹಟಿ: ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ನಡೆದ ಮಿಶ್ರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಡೋನೇಷ್ಯಾದ ವಿರುದ್ಧ ಸೋಲು ಕಂಡಿದ್ದು, ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಇದು ಕೂಟದ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ. ಕೊರಿಯಾವನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ಸೆಮೀಸ್ ಪ್ರವೇಶಿಸಿದ್ದ ಭಾರತ ತಂಡ ಇಂಡೋನೇಷ್ಯಾ 35-45, ಪರಾಭವಗೊಂಡಿತು. 21-45 ಅಂತರದಲ್ಲಿ ಪರಾಭವಗೊಂಡಿತು.

ಕಿರಿಯರ ಅಥ್ಲೆಟಿಕ್ಸ್‌: ಬಂಗಾರ ಕರ್ನಾಟಕಕ್ಕೆ ಸೇರಿ ನಾಲ್ಕು ಮೆಡಲ್!

ಭುವನೇಶ್ವರ: 40ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಕರ್ನಾಟಕ ಚಿನ್ನ ಸೇರಿ 4 ಪದಕ ಗೆದ್ದಿದೆ. ಅಂಡರ್-20 ಮಹಿಳೆಯರ 1,500 ಮೀ. ರೇಸ್‌ನಲ್ಲಿ ವೈಷ್ಣವಿ ರಾವಲ್ 4 ನಿಮಿಷ 29.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಾಂಪಿಯನ್ ಆದರು. ಅಂಡರ್-18 ಬಾಲಕರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿರಂತ್ ಪಿ. (10.71 ಸಕೆಂಡ್) ಬೆಳ್ಳಿ, ಸವಿನ್(10.81 ಸೆಕೆಂಡ್) ಕಂಚು ಗೆದ್ದರು. ಅಂಡರ್-14 ಬಾಲಕಿಯರ ಟ್ರಯಾಥಾನ್‌ನಲ್ಲಿ ಅದ್ವಿಕಾ ಕಂಚು ಗೆದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?