ಪತ್ನಿ ಅನುಷ್ಕಾ ಜೊತೆ ದಕ್ಷಿಣ ಆಫ್ರಿಕಾಗೆ ಹೊರಟ ಕೊಹ್ಲಿ

Published : Dec 29, 2017, 12:50 PM ISTUpdated : Apr 11, 2018, 01:03 PM IST
ಪತ್ನಿ ಅನುಷ್ಕಾ ಜೊತೆ ದಕ್ಷಿಣ ಆಫ್ರಿಕಾಗೆ ಹೊರಟ ಕೊಹ್ಲಿ

ಸಾರಾಂಶ

2018 ರ ಮೊದಲ ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡ ಗುರುವಾರ ಬೆಳಗ್ಗಿನ ಜಾವ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಿತು.

ಮುಂಬೈ (ಡಿ.29): 2018 ರ ಮೊದಲ ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡ ಗುರುವಾರ ಬೆಳಗ್ಗಿನ ಜಾವ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಹತ್ತಿತು.

ಡಿ.11 ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ತಂಡದ ನಾಯಕ ವಿರಾಟ್ ಕೊಹ್ಲಿ ಜತೆ ಅವರ ಪತ್ನಿ ಅನುಷ್ಕಾ ಶರ್ಮಾ ಸಹ ಆಫ್ರಿಕಾಕ್ಕೆ ತೆರಳಿದರು. ಮದುವೆಗೂ ಮೊದಲೇ ಅನುಷ್ಕಾ , ದಕ್ಷಿಣ ಆಫ್ರಿಕಾ ವೀಸಾ ಪಡೆದಿದ್ದರು ಎಂದು ಸುದ್ದಿಯಾಗಿತ್ತು. ನಾಯಕ ಕೊಹ್ಲಿ ಪಾಲಿಗೆ ಇದು ಅತ್ಯಂತ ಮಹತ್ವದ ಪ್ರವಾಸವಾಗಿದೆ. ಮದುವೆಗೂ ಮುನ್ನ ಅನೇಕ ಪ್ರವಾಸಗಳಲ್ಲಿ ಕೊಹ್ಲಿ ಜತೆ ಅನುಷ್ಕಾ ಕಾಣಿಸಿಕೊಂಡಿದ್ದರು.2014  ರಲ್ಲಿ ಅವರು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗಲೂ, ಅನುಷ್ಕಾ ಜತೆಗಿದ್ದರು. ಜ.5 ರಿಂದ 3 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಬಳಿಕ 6 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಆಫ್ರಿಕಾದಲ್ಲಿ ನೆಟ್ಸ್ ಅಭ್ಯಾಸಕ್ಕಾಗಿ ನಾಲ್ವರು ಯುವ ವೇಗದ ಬೌಲರ್‌'ಗಳನ್ನು ಕೊಹ್ಲಿ ಪಡೆ ತನ್ನೊಂದಿಗೆ ಆಫ್ರಿಕಾಕ್ಕೆ ಕರೆದೊಯ್ದಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿದ್ದು, ಮೊದಲ ಟೆಸ್ಟ್'ನಲ್ಲಿ ಆಡುವುದು ಅನುಮಾನವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!