ಆ್ಯಷಸ್ ಕದನ: ಕುಕ್ ದ್ವಿಶತಕಕ್ಕೆ ಆಸೀಸ್ ಸುಸ್ತು

Published : Dec 28, 2017, 10:04 PM ISTUpdated : Apr 11, 2018, 12:53 PM IST
ಆ್ಯಷಸ್ ಕದನ: ಕುಕ್ ದ್ವಿಶತಕಕ್ಕೆ ಆಸೀಸ್ ಸುಸ್ತು

ಸಾರಾಂಶ

151ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕುಕ್ ಇದೀಗ 11956 ರನ್ ಕಲೆಹಾಕಿದ್ದು 12 ಸಾವಿರ ರನ್ ಕ್ಲಬ್ ಸೇರಲು 44 ರನ್ ಬಾಕಿಯಿದ್ದು, ತ್ರಿಶತಕ ಬಾರಿಸಲು 56 ರನ್ ಬಾರಿಸಬೇಕಿದೆ.

ಮೆಲ್ಬರ್ನ್(ಡಿ.28): ಅಲಿಸ್ಟರ್ ಕುಕ್(244*) ಬಾರಿಸಿದ ಆಕರ್ಷಕ ದ್ವಿಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 164 ರನ್'ಗಳ ಮುನ್ನಡೆ ಸಾಧಿಸಿದೆ.

ಕುಕ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 491 ರನ್ ಬಾರಿಸಿದ್ದು ಆಸೀಸ್ ವಿರುದ್ಧ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿ ಬರದಿದ್ದರೂ, ಕೆಳಕ್ರಮಾಂಕದಲ್ಲಿ ಸ್ಟುವರ್ಟ್ ಬ್ರಾಡ್(56) ಅವರೊಂದಿಗೆ ದಿಟ್ಟ ಹೋರಾಟ ನಡೆಸಿದ ಕುಕ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

151ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕುಕ್ ಇದೀಗ 11956 ರನ್ ಕಲೆಹಾಕಿದ್ದು 12 ಸಾವಿರ ರನ್ ಕ್ಲಬ್ ಸೇರಲು 44 ರನ್ ಬಾಕಿಯಿದ್ದು, ತ್ರಿಶತಕ ಬಾರಿಸಲು 56 ರನ್ ಬಾರಿಸಬೇಕಿದೆ.

ಸಂಕ್ಷಿಪ್ತ ಸ್ಕೋರ್:

ಆಸ್ಟ್ರೇಲಿಯಾ 327, ಇಂಗ್ಲೆಂಡ್ 491/9 (ಕುಕ್ 244*, ಲಯನ್ 109/3)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 World Cup: ಟಾಪ್ 07 ರನ್ ಸರದಾರರಲ್ಲಿ ಭಾರತದ ಏಕೈಕ ಆಟಗಾರ! ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?
U19 World Cup: ಪಾಕಿಸ್ತಾನದ 19 ವರ್ಷಗಳ ಹಳೆಯ ದಾಖಲೆ ಧೂಳೀಪಟ ಮಾಡಿದ ಭಾರತ!