ವಿಶ್ವಕಪ್ 2019: ಕೊಹ್ಲಿಗೆ ಸಲಹೆ ನೀಡಿದ ವಿರೇಂದ್ರ ಸೆಹ್ವಾಗ್!

By Web Desk  |  First Published May 18, 2019, 7:48 PM IST

ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ವಿರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ. 2011ರ ವಿಶಕಪ್ ತಂಡದ ಸದಸ್ಯ ವೀರೂ ನೀಡಿದ ಸಲಹೆ ಏನು? ಇಲ್ಲಿದೆ ವಿವರ.


ನವದೆಹಲಿ(ಮೇ.18): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ತಯಾರಿ ಆರಂಭಿಸಿದೆ. 2015ರಲ್ಲಿ ಸೆಮಿಫೈನಲ್ ಸುತ್ತಿನಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಭಾರತ ತಂಡ ಈ ಬಾರಿ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೇ.22 ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, 2011ರ ವಿಶ್ವಕಪ್ ತಂಡದ ಸದಸ್ಯ ವಿರೇಂದ್ರ ಸೆಹ್ವಾಗ್, ಕೊಹ್ಲಿ ಸೈನ್ಯಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಕಾಲೆಳೆದ ಯುವರಾಜ್ ಸಿಂಗ್!

Tap to resize

Latest Videos

undefined

ಟೀಂ ಇಂಡಿಯಾ ಬಲಿಷ್ಠವಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಕಾಪಾಡಿಕೊಂಡಿದೆ. 4ನೇ ಕ್ರಮಾಂಕದ ಬ್ಯಾಟಿಂಗ್ ಆಯ್ಕೆ ಪರಿಸ್ಥಿತಿಗೆ ಅನುಗುಣವಾಗಿರಬೇಕು ಎಂದು ಸೆಹ್ವಾಗ್ ಸೂಚಿಸಿದ್ದಾರೆ. ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 4ನೇ ಕ್ರಮಾಂಕ ಸೇರಿದಂತೆ ಇತರ ಕ್ರಮಾಂಕದಲ್ಲೂ ಆಡಲೂ ಸಜ್ಜಾಗಬೇಕು ಎಂದು ಸೆಹ್ವಾಗ್ ಸೂಚಿಸಿದ್ದಾರೆ.

ಇದನ್ನೂ ಓದಿ: ತಂಡಕ್ಕಾಗಿ ಯಾವುದೇ ಕ್ರಮಾಂಕದಲ್ಲಿ ಆಡುವೆ ಎಂದ ರಾಹುಲ್

ಮೇ.30 ರಿಂದ ಇಂಗ್ಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 5 ರಂದು ಭಾರತ ತನ್ನ ಮೊದಲ ಪಂದ್ಯ ಆಡಲಿದೆ. ರೌಂಡ್ ರಾಬಿನ್ ಮಾದರಿಯಲ್ಲಿರುವ ಈ ಬಾರಿಯ ಟೂರ್ನಿ ಎಲ್ಲಾ ತಂಡಗಳು ಮುಖಾಮುಖಿಯಾಗಲಿದೆ. ಹೀಗಾಗಿ ಬಲಿಷ್ಠ ತಂಡ ಮಾತ್ರ ಸೆಮಿಫೈನಲ್ ಪ್ರವೇಶಿಸಲಿದೆ.

click me!