IPL ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ಬ್ಯಾಟ್ಸಮನ್ ಕೀರನ್ ಪೊಲಾರ್ಡ್ ಇದೀಗ ವಿಶ್ವಕಪ್ ತಂಡ ಸೇರಿಕೊಳ್ತಾರಾ? ವಿಂಡೀಸ್ ಆಯ್ಕೆ ಸಮಿತಿ ಹೇಳುವುದೇನು? ಇಲ್ಲಿದೆ ವಿವರ.
ಆ್ಯಂಟಿಗುವಾ(ಮೇ.18): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯಗಳಲ್ಲಿ ಮಿಂಚಿದ ಕೀರನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಫೈನಲ್ ಪಂದ್ಯದಲ್ಲಿ ಪೊಲಾರ್ಡ್25 ಎಸೆತದಲ್ಲಿ 41 ರನ್ ಸಿಡಿಸಿದ್ದರು. ಇದು ತಂಡದ ವೈಯುಕ್ತಿ ಗರಿಷ್ಠಮೊತ್ತವಾಗಿತ್ತು. ಕ್ರೂಶಿಯಲ್ ಪಂದ್ಯಗಳಲ್ಲಿ ಪೊಲಾರ್ಡ್ ಮುಂಬೈ ತಂಡಕ್ಕೆ ನೆರವಾಗಿದ್ದರು. ಇದೀಗ ಐಪಿಎಲ್ ಪ್ರದರ್ಶನದಿಂದ ಖುಷಿಯಾಗಿರುವ ವಿಂಡೀಸ್ ಆಯ್ಕೆ ಸಮಿತಿ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಲು ಮುಂದಾಗಿದೆ.
ಇದನ್ನೂ ಓದಿ: ಕೊಹ್ಲಿ ಸ್ಲೋ ಪಾಯ್ಸನ್ ಎಂದ ಟೀಂ ಇಂಡಿಯಾ ಮಾಜಿ ಕೋಚ್!
undefined
ವಿಶ್ವಕಪ್ ಟೂರ್ನಿಗೆ ವೆಸ್ಟ್ಇಂಡೀಸ್ ತಂಡ ಈಗಾಗಲೇ ತಂಡ ಪ್ರಕಟಿಸಿದೆ. ಆಯ್ಕೆಯಾದ ಆಟಗಾರರಲ್ಲಿ ಇಬ್ಬರೂ ಕ್ರಿಕೆಟಿಗರ ಪ್ರದರ್ಶನ ಕಳಪೆಯಾಗಿದೆ. ಹೀಗಾಗಿ ತಂಡದಲ್ಲಿ ಕೆಲ ಬದಲಾವಣೆ ಮಾಡಲು ಆಯ್ಕೆ ಸಮಿತಿ ಮುಂದಾಗಿದೆ. ಈ ಮೂಲಕ ಕೀರನ್ ಪೊಲಾರ್ಡ್‌ಗೆ ಸ್ಥಾನ ನೀಡಲು ಚಿಂತನೆ ನಡೆಸಿದೆ. ಮೇ.23 ರಂದು ಐಸಿಸಿಗೆ ತಂಡದ ಅಂತಿಮ ಪಟ್ಟಿ ಕಳುಹಿಸಬೇಕಿದೆ. ಇದಕ್ಕೂ ಮುನ್ನ ಪೊಲಾರ್ಡ್‌ಗೆ ಅವಕಾಶ ನೀಡೋ ಸಾಧ್ಯತೆ ಇದೆ.
ಇದನ್ನೂ ಓದಿ: ವಿಶ್ವಕಪ್ : ಮೇ 22ರಂದು ಇಂಗ್ಲೆಂಡ್‌ಗೆ ಭಾರತ ತಂಡ ಪ್ರಯಾಣ
ವೆಸ್ಟ್ ಇಂಡೀಸ್ ತಂಡ ಆರಂಭಿಕ 2 ವಿಶ್ವಕಪ್ ಟ್ರೋಫಿಯನ್ನು ಗೆದ್ದಿತ್ತು. ಹ್ಯಾಟ್ರಿಕ್ ಗೆಲುವಿಗೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಅಡ್ಡಿಯಾಗಿತ್ತು. ಬಳಿಕ ವೆಸ್ಟ್ ಇಂಡೀಸ್ ವಿಶ್ವಕಪ್ ಟೂರ್ನಿಯಲ್ಲಿನ ಹಿಡಿತ ಸಡಿಲವಾಗಿದೆ. ಇದೀಗ ಈ ಬಾರಿಯ ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರೋ ವಿಂಡೀಸ್ ಗತವೈಭವ ಮರು ಸೃಷ್ಟಿಸುವ ತವಕದಲ್ಲಿದೆ.