
ನವದೆಹಲಿ(ಜ.10): ಭಾರತೀಯ ಕ್ರೀಡಾಪಟುಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವವರು ಎಂದರೆ ವೀರೇಂದ್ರ ಸೆಹ್ವಾಗ್. ಟ್ವಿಟರ್'ನಲ್ಲಿ ಸದಾ ಕೆಲವರ ಕಾಲೆಳೆಯುವ ಸೆಹ್ವಾಗ್, ಕಳೆದ ಕೆಲ ತಿಂಗಳಿನಿಂದ ತಾವು ಮಾಡುವ ಟ್ವೀಟ್'ಗಳಿಂದ ಸಿಕ್ಕಾಪಟ್ಟಿ ಫೇಮಸ್ ಆಗಿದ್ದಾರೆ.
ಕ್ರಿಕೆಟಿಗರ ಹುಟ್ಟುಹಬ್ಬ, ಅವರ ಸಾಧನೆ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಎಲ್ಲರಿಗಿಂತಲೂ ಡಿಫರೆಂಟ್ ಆಗಿ ಟ್ವೀಟ್ ಮಾಡಿ ಎಲ್ಲರ ಮನಗೆದ್ದಿರುವ ಸೆಹ್ವಾಗ್, ಸದ್ಯ ಟ್ವಿಟರ್'ನಿಂದಲೂ ಹಣ ಗಳಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ಸೆಹ್ವಾಗ್ ಮಾಡುವ ಸ್ವಾರಸ್ಯಕರ ಟ್ವೀಟ್, ಕಮೆಂಟ್ಸ್, ರಿಟ್ವೀಟ್ ಶೇರ್ ಆಗುತ್ತಿರುವ ಕಾರಣ ಅವರು ಕಳೆದ 6 ತಿಂಗಳಿನಿಂದ 30 ಲಕ್ಷ ರೂಪಾಯಿ ಹಣ ಗಳಿಸಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಖುದ್ದು ತಾವೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇವರ ಟ್ವೀಟ್'ಗಳು ವೈರಲ್ ಆಗುತ್ತಿರುವ ಕಾರಣ ಪ್ರಾಯೋಜಕರಿಂದ ಇವರಿಗೆ ಆಫರ್‌ಗಳು ಸಿಕ್ಕಿವೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.