ವೀರೇಂದ್ರ ಸೆಹ್ವಾಗ್ ಅಬ್ಬರ-ಕಿಚ್ಚ ಸುದೀಪ್ ತಂಡಕ್ಕೆ ಗೆಲುವು

By Web DeskFirst Published 9, Sep 2018, 6:34 PM IST
Highlights

ಸ್ಯಾಂಡಲ್‌ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಮಾಗಮದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಇದೀಗ ಅಂತಿಮ ಘಟ್ಟ ತಲುಪಿದೆ. ದ್ವಿತೀಯ ದಿನದ 2ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಸೆ.09): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಗೆಲುವು ಸಾಧಿಸಿದೆ.

ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಹೊಯ್ಸಳ ಈಗಲ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಸುದೀಪ್ ತಂಡ 2 ವಿಕೆಟ್ ನಷ್ಟಕ್ಕೆ 117 ರನ್ ಸಿಡಿಸಿತು. ಆರಂಭಿಕ ವೀರೇಂದ್ರ ಸೆಹ್ವಾಗ್ 17 ಎಸೆತದಲ್ಲಿ 46 ರನ್ ಸಿಡಿಸೋ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದರು.

118 ರನ್ ಗುರಿ ಬೆನ್ನಟ್ಟಿದ ಉಪೇಂದ್ರ ಸೈನ್ಯ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ಹೀಗಾಗಿ ನಿಗದಿತ 10 ಓವರ್‌ಗಳಲ್ಲಿ ಹೊಯ್ಸಳ ಈಗಲ್ಸ್ ತಂಡ 7 ವಿಕೆಟ್ ನಷ್ಟಕ್ಕೆ 94 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನೇೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಈಗಾಗಲೇ ಫೈನಲ್ ತಲುಪಿದೆ. ಹೀಗಾಗಿ ಸುದೀಪ್ ಹಾಗೂ ಉಪೇಂದ್ರ ತಂಡ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡಿಸಿತು.
 

Last Updated 9, Sep 2018, 10:27 PM IST