ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್‌!

By Web Desk  |  First Published Aug 22, 2019, 11:21 AM IST

ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಪರ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಬ್ಯಾಟ್ ಬೀಸಿದ್ದಾರೆ. ಕುಂಬ್ಳೆ ಸೆಲೆಕ್ಷನ್ ಕಮಿಟಿಯಲಲ್ಲಿದ್ದರೆ, ಸಮಸ್ಯೆಗಳು ಉದ್ಭವವಾಗುವುದಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.


ನವದೆಹಲಿ(ಆ.22):  ಭಾರತ ಕ್ರಿಕೆಟ್‌ ತಂಡದ ಆಯ್ಕೆಗಾರನಾಗಿ ಮಾಜಿ ನಾಯಕ ಅನಿಲ್‌ ಕುಂಬ್ಳೆಯನ್ನು ನೇಮಿಸಬೇಕು ಎಂದು ವೀರೇಂದ್ರ ಸೆಹ್ವಾಗ್‌ ಅಭಿಪ್ರಾಯಿಸಿದ್ದಾರೆ. ಇಲ್ಲಿ ಬುಧವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್‌, ‘ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಸಾಮರ್ಥ್ಯ ಹೊಂದಿರುವ ಮಾಜಿ ನಾಯಕ ಅನಿಲ್‌ ಕುಂಬ್ಳೆ ಆಯ್ಕೆಗಾರನಾಗಲು ಸೂಕ್ತ ವ್ಯಕ್ತಿ ಎಂದಿದ್ದಾರೆ.

ಇದನ್ನೂ ಓದಿ: ಸೆಲೆಕ್ಟರ್ ಆಗಲು ಹೊರಟ ಸೆಹ್ವಾಗ್‌; ಅಭಿಮಾನಿಗಳಿಂದ ಟ್ರೋಲ್!

Tap to resize

Latest Videos

ನಾನು 2007-08ರಲ್ಲಿ ತಂಡಕ್ಕೆ ಮರಳಿದಾಗ ಕುಂಬ್ಳೆ ನಾಯಕರಾಗಿದ್ದರು. ಮುಂದಿನ 2 ಸರಣಿಗೆ ತಂಡದಿಂದ ನಿಮ್ಮನ್ನು ಕೈಬಿಡುವುದಿಲ್ಲವೆಂದು ಆತ್ಮವಿಶ್ವಾಸ ತುಂಬಿದ್ದರು. ಆಟಗಾರರಿಗೆ ಈ ರೀತಿ ಆತ್ಮವಿಶ್ವಾಸ ಹೆಚ್ಚಿಸುವ ವ್ಯಕ್ತಿಗಳ ಅವಶ್ಯಕತೆ ಇದೆ’ ಎಂದು ಸೆಹ್ವಾಗ್‌ ಹೇಳಿದರು. ಇದೇ ವೇಳೆ ಆಯ್ಕೆಗಾರರ ವೇತನವನ್ನು ಬಿಸಿಸಿಐ ಹೆಚ್ಚಿಸಬೇಕು ಎಂದು ಸೆಹ್ವಾಗ್‌ ಕೇಳಿಕೊಂಡರು. ಸದ್ಯ ರಾಷ್ಟ್ರೀಯ ತಂಡದ ಆಯ್ಕೆಗಾರನಿಗೆ ಬಿಸಿಸಿಐ ವಾರ್ಷಿಕ  1 ಕೋಟಿ ರೂಪಾಯಿ ವೇತನ ನೀಡಲಿದೆ.
 

click me!