ಒಲಿಂಪಿಕ್‌ ಟೆಸ್ಟ್‌ ಹಾಕಿ: ಭಾರತ ಚಾಂಪಿಯನ್‌!

By Web DeskFirst Published Aug 22, 2019, 11:10 AM IST
Highlights

ಒಲಿಂಪಿಕ್ ಟೆಸ್ಟ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಜಯಭೇರಿ ಬಾರಿಸಿದೆ ಪುರುಷ ಹಾಗೂ ಮಹಿಳಾ ತಂಡಗಳು ಅದ್ವಿತೀಯ ಪ್ರದರ್ಶನದ ಮೂಲಕ ಗೆಲುವು ಸಾಧಿಸಿದೆ. 
 

ಟೋಕಿಯೋ(ಆ.22) : ಒಲಿಂಪಿಕ್‌ ಪರೀಕ್ಷಾರ್ಥ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಪ್ರಶಸ್ತಿ ಗೆದ್ದುಕೊಂಡಿವೆ. ಪುರುಷರ ವಿಭಾಗದ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ 5-0 ಗೋಲ್‌ಗಳ ಭರ್ಜರಿ ಜಯ ಸಾಧಿಸಿದ ಭಾರತ ತಂಡ, ರೌಂಡ್‌ ರಾಬಿನ್‌ ಹಂತದ ಸೋಲಿನ ಸೇಡು ತೀರಿಸಿಕೊಂಡಿತು. 

 

Here are the 🔝 moments from 's impressive win over the Kiwis in the Olympic Test Event Finals. 😍📸

For more images: https://t.co/FcAGbxEUjA pic.twitter.com/IayUvN071I

— Hockey India (@TheHockeyIndia)

ಇದನ್ನೂ ಓದಿ: ಆಲ್‌ ಇಂಡಿಯಾ ಹಾಕಿ: ಕರ್ನಾಟಕಕ್ಕೆ ಗೆಲುವು

ಭಾರತ ವನಿತೆಯರು ಆತಿಥೇಯ ಜಪಾನ್‌ಗೆ 2-1 ಗೋಲ್‌ಗಳ ಸೋಲುಣಿಸಿದರು. ಪುರುಷರ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಪರ ನಾಯಕ ಹರ್ಮನ್‌ಪ್ರೀತ್‌ (7ನೇ), ಶಮ್ಶೇರ್‌ (18ನೇ), ನೀಲಕಂಠ (22ನೇ), ಗುರ್‌ಸಾಹಿಬ್‌ಜಿತ್‌ (26ನೇ) ಹಾಗೂ ಮನ್‌ದೀಪ್‌ (27ನೇ ನಿಮಿಷ) ಗೋಲ್‌ ಬಾರಿಸಿದರು. ವನಿತೆಯರ ಫೈನಲ್‌ನಲ್ಲಿ ಭಾರತ ಪರ ನವ್‌ಜೋತ್‌ ಕೌರ್‌ (11ನೇ) ಹಾಗೂ ಲಾಲ್‌ರೆಮ್ಸಿಯಾಮಿ (33ನೇ ನಿಮಿಷ) ಗೋಲ್‌ ಗಳಿಸಿ ಗೆಲುವಿಗೆ ನೆರವಾದರು.
 

click me!