ಒಲಿಂಪಿಕ್ಸ್'ನಲ್ಲಿ ಕ್ರಿಕೆಟ್; ಟಿ10 ಬೆಸ್ಟ್ ಎಂದ ಸೆಹ್ವಾಗ್

By Suvarna Web DeskFirst Published Dec 1, 2017, 6:05 PM IST
Highlights

ಇದೇ ಡಿಸೆಂಬರ್ 14-17ರ ವರೆಗೆ ಯುನೈಟೆಡ್ ಅರಬ್ ಎಮಿರಾಯಿಟ್ಸ್'ನಲ್ಲಿ ನಡೆಯಲಿರುವ ಟಿ10 ಲೀಗ್'ನಲ್ಲಿ ಮರಾಠ ಅರೇಬಿಯನ್ ತಂಡವನ್ನು ಮುನ್ನಡೆಸಲಿರುವ ವಿರೇಂದ್ರ ಸೆಹ್ವಾಗ್ ಒಲಿಂಪಿಕ್ಸ್'ನಲ್ಲೂ ಟಿ10 ಮಾದರಿ ಅಳವಡಿಕೊಳ್ಳಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ(ಡಿ.01): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಬೇಕು ಎನ್ನುವ ಕೂಗಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಧ್ವನಿಗೂಡಿಸಿದ್ದು ಟಿ10 ಮಾದರಿ

ಸೂಕ್ತ ಎಂದಿದ್ದಾರೆ.

‘ಟಿ10 ಪಂದ್ಯ ಫುಟ್ಬಾಲ್'ನಂತೆ ಕೇವಲ 90 ನಿಮಿಷಗಳಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಐಸಿಸಿ ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಜತೆ ಮಾತುಕತೆಗೆ ಮುಂದಾಗಬೇಕು’ ಎಂದಿದ್ದಾರೆ.

click me!