
ನವದೆಹಲಿ(ಜು.29): ಆಧುನಿಕ್ ಕ್ರಿಕೆಟ್‌ನ ಮಾಸ್ಟರ್ ಎಂದೇ ಕರೆಯಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಂತಾ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕುರಿತು ಕಾಲೆಳೆದ ಎಸೆಕ್ಸ್ ಕೌಂಟಿ ತಂಡಕ್ಕೆ ಅಭಿಮಾನಿಗಳು ತಕ್ಕ ಪಾಠ ನೀಡಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಕಾಲೆಳೆದಿರುವ ಎಸೆಕ್ಸ್ ಕ್ರಿಕೆಟ್ ತಂಡ, ಈಗ ಕೊಹ್ಲಿ ಅಭಿಮಾನಿ ಗಳಿಂದಲೇ ಪಾಠ ಹೇಳಿಸಿಕೊಳ್ಳುವಂತಾಗಿದೆ. ಅಭ್ಯಾಸ ಪಂದ್ಯದ ವೇಳೆ ಎಸೆಕ್ಸ್ ಕ್ರಿಕೆಟ್ ತಂಡ ತನ್ನ ಟ್ವೀಟರ್ ಖಾತೆಯಲ್ಲಿ, ‘ಪರವಾಗಿಲ್ಲ, ಕೊಹ್ಲಿ ಉತ್ತಮವಾಗಿ ಆಡುತ್ತಾರೆ’ ಎಂದು ಬರೆದಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ಕೊಹ್ಲಿ ಕ್ರಿಕೆಟ್‌ನ ರನ್ ಮಷಿನ್ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ನಿಮಗೆ ಈಗ ಗೊತ್ತಾಯಿತೆ ?’ ಎಂದಿದ್ದಾರೆ. ಟ್ವಿಟರ್ ಮೂಲಕ ಎಸೆಕ್ಸ್ ತಂಡದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿರುವ ಅಭಿಮಾನಿಗಳು,ಟ್ವೀಟ್ ಸಮರ ನಡೆಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.