ಹಸಿರು ಚಾಲೆಂಜ್ ಸ್ವೀಕರಿಸಿದ ಸಚಿನ್ ತೆಂಡೂಲ್ಕರ್-ವಿವಿಎಸ್ ಲಕ್ಷ್ಮಣ್!

By Suvarna NewsFirst Published Jul 29, 2018, 11:30 AM IST
Highlights

ಸಾಮಾಜಿಕ ಜಾಲತಾಣದಲ್ಲಿ ಹಲವು ಚಾಲೆಂಜ್‌ಗಳು ಭಾರಿ ಸದ್ದು ಮಾಡಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅರ್ಥಪೂರ್ಣವಾಗಿರೋ ಹಸಿರು ಚಾಲೆಂಜ್‌ನ್ನ ಕ್ರಿಕೆಟ್ ದಿಗ್ಗಜ  ಸಚಿನ್ ತೆಂಡೂಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಸ್ವೀಕರಿಸಿದ್ದಾರೆ. ಏನಿದು ಹಸಿರು ಚಾಲೆಂಜ್? ಇಲ್ಲಿದೆ ವಿವರ.

ನವದೆಹಲಿ(ಜು.29): ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸ್ವತಃ ಗಿಡ ನೆಡುವ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸರ್ಕಾರದ ‘ಹರಿತಾ ಹರಾಮ್’ ಕಾರ್ಯಕ್ರಮದಿಂದ ಸಚಿನ್, ಲಕ್ಷ್ಮಣ್ ಮತ್ತು ಸೈನಾಗೆ ಟ್ವೀಟರ್, ಫೇಸ್‌ಬುಕ್‌ನಲ್ಲಿ ಸವಾಲನ್ನು ನೀಡಿತ್ತು.

 

Thank you, , for nominating me for the green challenge . I accept the challenge and hope all of you do too. The key to a greener planet is in our hands. pic.twitter.com/vMzifaGjlm

— Sachin Tendulkar (@sachin_rt)

 

ಈ ಸವಾಲನ್ನು ಸ್ವೀಕರಿಸಿದ ಈ ಮೂವರು ಕ್ರೀಡಾಪಟುಗಳು ಸ್ವತಃ ತಾವೇ ಗಿಡ ನೆಟ್ಟು ಪರಿಸರ ಉಳಿಸುವಂತೆ ಸಂದೇಶ ನೀಡಿದ್ದಾರೆ. ಲಕ್ಷ್ಮಣ್, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಮಿಥಾಲಿ ರಾಜ್ ಮತ್ತು ಪಿ.ವಿ. ಸಿಂಧುಗೆ ಸವಾಲನ್ನು ಹಾಕಿದ್ದಾರೆ. ಸೈನಾ, ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ಇಶಾ ಗುಪ್ತಾ ಮತ್ತು ತಾಪ್ಸಿ ಪನ್ನುಗೆ ಸವಾಲು ಎಸೆದಿದ್ದಾರೆ.

 

The love of gardening is a seed once sown that never dies. Great initiative ,I have planted pomegranate, water apple & Laxman Phal saplings . I nominate , & to plant 3 trees, nurture them and make a sustainable movement pic.twitter.com/6mSRNqPBwk

— VVS Laxman (@VVSLaxman281)

 

ಸಾಮಾಜಿ ಜಾಲತಾಣದಲ್ಲಿ ಇತ್ತೀಚೆಗೆ ಫಿಟ್ನೆಸ್ ಚಾಲೆಂಜ್, ಕಿಟ್ ಚಾಲೆಂಜ್ ಸೇರಿದಂತೆ ಹಲವು ಚಾಲೆಂಜ್‌ಗಳಲ್ಲಿ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅರ್ಥಪೂರ್ಣವಾಗಿರೋ ಹಸಿರು ಚಾಲೆಂಜ್‌ನಿಂದ ಸ್ವಚ್ಚ ಪರಿಸರ ನಿರ್ಮಾಣವಾಗಲಿ ಅನ್ನೋದೇ ಎಲ್ಲರ ಆಶಯ.
 

click me!