
ಲಂಡನ್(ಮಾ.28): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಕೌಂಟಿ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬಾರದು ಎಂದು ಇಂಗ್ಲೆಂಡ್ ಮಾಜಿ ವೇಗಿ ಬಾಬ್ ವಿಲ್ಲಿಸ್ ಆಗ್ರಹಿಸಿದ್ದಾರೆ.
ಇದೇ ವರ್ಷ ಜೂನ್'ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಟೆಸ್ಟ್ ಆಡಲಿದ್ದು, ಅದಕ್ಕೂ ಮುನ್ನ ಸರ್ರೆ ತಂಡದ ಪರ ಕೌಂಟಿಯಲ್ಲಿ ಆಡಲು ಕೊಹ್ಲಿ ನಿರ್ಧರಿಸಿದ್ದಾರೆ.
‘ಕೊಹ್ಲಿಗೆ ಕೌಂಟಿಯಲ್ಲಿ ಆಡಲು ಅವಕಾಶ ಕೊಟ್ಟರೆ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ. ಎದುರಾಳಿಗೆ ನಾವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇಂಗ್ಲೆಂಡ್'ನಲ್ಲಿ ರನ್ ಗಳಿಸಲು ಕೊಹ್ಲಿ ಪರದಾಡುವಂತೆ ಮಾಡಬೇಕು’ ಎಂದು ವಿಲ್ಲಿಸ್ ಹೇಳಿದ್ದಾರೆ. ಕಳೆದ ಬಾರಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಭಾರತ ಪರ 5 ಟೆಸ್ಟ್ ಪಂದ್ಯಗಳನ್ನಾಡಿದ್ದ ಕೊಹ್ಲಿ ಒಂದು ಅರ್ಧಶತಕ ಬಾರಿಸಲು ಕೂಡಾ ವಿಫಲವಾಗಿದ್ದರು.
ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ಈ ಮೊದಲು ಕೇವಲ 30ರ ಸರಾಸರಿಯಲ್ಲಿ ರನ್ ದಾಖಲಿಸಿದ್ದಾರೆ. ವಿದೇಶಿ ಆಟಗಾರರಿಗೆ ಇಲ್ಲಿ ಆಡಲು ಅವಕಾಶಕೊಟ್ಟ ಬಳಿಕವಷ್ಟೇ ಇಂಗ್ಲೆಂಡ್ ತವರಿನಲ್ಲಿ ಸೋಲಲು ಆರಂಭಿಸಿತು ಎಂದು ವಿಲ್ಲಿಸ್ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಚೇತೇಶ್ವರ ಪೂಜಾರ(ಯಾರ್ಕ್'ಶೈರ್) ಮತ್ತು ಇಶಾಂತ್ ಶರ್ಮಾ(ಸಸೆಕ್ಸ್) ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.