ಕನ್ನಡಿಗನಿಗಾಗಿ 3ನೇ ಕ್ರಮಾಂಕ ಬಿಟ್ಟು ಕೊಟ್ಟ ವಿರಾಟ್ ಕೊಹ್ಲಿ!

First Published Jul 6, 2018, 1:04 PM IST
Highlights

2019ರ ವಿಶ್ವಕಪ್ ದೃಷ್ಟಿಯಿಂದ ತಂಡದ ಬ್ಯಾಟಿಂಗ್ ಆರ್ಡರ್‌ನಲ್ಲಿ ಪ್ರಯೋಗಕ್ಕೆ ಮುಂದಾಗಿರುವ ವಿರಾಟ್ ಕೊಹ್ಲಿ ಆರಂಭಿಕ ಯಶಸ್ಸು ಕಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್‌ಗಾಗಿ ಶಾಶ್ವತವಾಗಿ ನಾಯಕ ವಿರಾಟ್ 3ನೇ ಕ್ರಮಾಂಕ ಬಿಟ್ಟುಕೊಡ್ತಾರಾ? ಇಲ್ಲಿದೆ ವಿವರ

ಮ್ಯಾಂಚೆಸ್ಟರ್‌ (ಜು.06): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಆರ್ಡರ್ ಬದಲಾವಣೆ ಮಾಡಿ ಯಶಸ್ವಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ 2019ರ ವಿಶ್ವಕಪ್‌ನಲ್ಲೂ ಇದೇ ಬ್ಯಾಟಿಂಗ್ ಕ್ರಮಾಂಕ ಮುಂದುವರಿಸಲು ನಿರ್ಧರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ನಿಗಧಿತ ಓವರ್ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ನಾಯಕ  ವಿರಾಟ್ ಕೊಹ್ಲಿ, 4ನೇ ಕ್ರಮಾಂಕಕ್ಕೆ ಜಾರಿದ್ದರು. ಇದೀಗ ಇದೇ ಬ್ಯಾಟಿಂಗ್ ಆರ್ಡರ್ ಮುಂದುವರಿಸಲು ನಾಯಕಕ ಕೊಹ್ಲಿ ಚಿಂತನೆ ನಡೆಸಿದ್ದಾರೆ.

ಬ್ಯಾಟಿಂಗ್ ಆರ್ಡರ್ ಕುರಿತು ಮಾತನಾಡಿದ ಕೊಹ್ಲಿ, ನಾನು 3ನೇ ಕ್ರಮಾಂಕದಿಂದ 4ನೇ ಕ್ರಮಾಂಕದಲ್ಲಿ ಆಡಲಿದ್ದೇನೆ. ಕೆಳ ಕ್ರಮಾಂಕದಲ್ಲಿ ಅನುಭವಿ ಆಟಗಾರರಿದ್ದಾರೆ. ಹೀಗಾಗಿ, 3ನೇ ಕ್ರಮಾಂಕದಲ್ಲಿ ರಾಹುಲ್‌ ಆಡಿದರೆ ಸೂಕ್ತ ಎನಿಸಿತು. ಯುವ ಹಾಗೂ ಒತ್ತಡ ನಿಭಾಯಿಸಬಲ್ಲ ಆಟಗಾರರಿಗೆ ಮೇಲ್ಕ್ರಮಾಂಕದಲ್ಲಿ ಅವಕಾಶ ನೀಡುವ ಅಗತ್ಯವಿದೆ. ರಾಹುಲ್‌ ತಾವು ಇಂಗ್ಲೆಂಡ್‌ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.

2019ರ ವಿಶ್ವಕರ್ ದೃಷ್ಟಿಯಿಂದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡುತ್ತಿದ್ದೇವೆ. ಸದ್ಯ 3ನೇ ಕ್ರಮಾಂಕದಲ್ಲಿ ರಾಹುಲ್ ಯಶಸ್ವಿಯಾಗಿರೋದರಿಂದ 2019ರ ವಿಶ್ವಕಪ್ ಟೂರ್ನಿಯಲ್ಲೂ ಇದೇ ಕ್ರಮಾಂಕ ಮುಂದವರಿಸೋ ಚಿಂತನೆ ಇದೆ ಎಂದಿದ್ದಾರೆ. ಈ ಮೂಲಕ ಕೊಹ್ಲಿ 2019ರ ವಿಶ್ವಕಪ್ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆಯೋದು ಬಹುತೇಕ ಪಕ್ಕಾ ಅನ್ನೋದನ್ನ ಸೂಕ್ಷ್ಮವಾಗಿ ತಿಳಿಸಿದ್ದಾರೆ.
 

click me!